AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಡಿಶಾ ರೈಲು ದುರಂತ: ಹೌರಾದಲ್ಲಿ ಸಿಲುಕಿದ್ದ ಕ್ರೀಡಾಪಟುಗಳು ರಾಜ್ಯಕ್ಕೆ ವಾಪಸ್, ಧನ್ಯವಾದ ಸಲ್ಲಿಸಿದ ಕೋಚ್ಸ್

ಪ.ಬಂಗಾಳದ ಹೌರಾದಲ್ಲಿ ಸಿಲುಕಿದ್ದ ಎಲ್ಲಾ ಕ್ರೀಡಾಪಟುಗಳು ವಾಪಸ್​​​​ ಆಗಿದ್ದಾರೆ. ಇಂಡಿಗೋ ವಿಮಾನದ ಮೂಲಕ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್​ಪೋರ್ಟ್​ಗೆ ಬಂದಿಳಿದಿದ್ದಾರೆ.

ಆಯೇಷಾ ಬಾನು
|

Updated on: Jun 04, 2023 | 9:14 AM

Share

ಬೆಂಗಳೂರು: ಪಶ್ಚಿಮ ಬಂಗಾಳದ ಚಂದನ್ ನಗರದಲ್ಲಿ ನಡೆಯುತ್ತಿದ್ದ ನ್ಯಾಷನಲ್ ಚಾಂಪಿಯನ್ ಶಿಪ್​ನಲ್ಲಿ ಪಾಲ್ಗೊಳ್ಳಲು 24 ಜನ ಕ್ರೀಡಾಪಟುಗಳು ಮತ್ತು ಕೋಚ್ಗಳು ಸೇರಿದಂತೆ ಒಟ್ಟು 32 ಜನ ತೆರಳಿದ್ದರು. ಆದ್ರೆ ಶುಕ್ರವಾರ ಒಡಿಸ್ಸಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಿಂದಾಗಿ ಮರಳಿ ರಾಜ್ಯಕ್ಕೆ ಬರಲು ಆಗದೆ ಕ್ರೀಡಾಪಟುಗಳು ಪರಿತಪಿಸುತ್ತಿದ್ದರು. ಸದ್ಯ ರಾಜ್ಯ ಸರಕಾರ ನಿಯೋಜಿಸಿದ್ದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಹಾಯದಿಂದ ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ.

ಪ.ಬಂಗಾಳದ ಹೌರಾದಲ್ಲಿ ಸಿಲುಕಿದ್ದ ಎಲ್ಲಾ ಕ್ರೀಡಾಪಟುಗಳು ವಾಪಸ್​​​​ ಆಗಿದ್ದಾರೆ. ಇಂಡಿಗೋ ವಿಮಾನದ ಮೂಲಕ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್​ಪೋರ್ಟ್​ಗೆ ಬಂದಿಳಿದಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಕ್ರೀಡಾಪಟುಗಳನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಮೇ 24ರಂದು ರಾಜ್ಯದಿಂದ ಹೌರಾಗೆ 32 ಕ್ರೀಡಾಪಟುಗಳು ತೆರಳಿದ್ದರು. ಸದ್ಯ ಮೊದಲ ಹಂತದಲ್ಲಿ ರಾಜ್ಯಕ್ಕೆ 23 ಕ್ರೀಡಾಪಟುಗಳು ವಾಪಸ್​​ ಆಗಿದ್ದಾರೆ.

ಇದನ್ನೂ ಓದಿ: Odisha Train Accident: ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಬಸ್​ ಅಪಘಾತ

ಇನ್ನು ಬೆಂಗಳೂರು ಏರ್​ಪೋರ್ಟ್​ನಲ್ಲಿ ಮಾತನಾಡಿದ ವಾಲಿಬಾಲ್ ಮಹಿಳಾ ತಂಡದ ಕೋಚ್ ಮಮತಾ ಶೆಟ್ಟಿ, ದುರಂತಕ್ಕೀಡಾದ ಕೋರಮಂಡಲ್ ಎಕ್ಸ್​​​ಪ್ರೆಸ್​​​ ರೈಲಿನಲ್ಲಿ ಬರಬೇಕಿತ್ತು. ಅದೃಷ್ಟವಶಾತ್ ಕೋರಮಂಡಲ್ ಎಕ್ಸ್​​​ಪ್ರೆಸ್ ರೈಲಿನ ಟಿಕೆಟ್​ ಸಿಗಲಿಲ್ಲ. ನಮ್ಮ ಅಸೋಸಿಯೇಷನ್ ಸಹ ಒಟ್ಟಾಗಿ ಬರುವಂತೆ ಸೂಚನೆ ನೀಡಿತ್ತು. ಹೀಗಾಗಿ ನಾವು ಯಶವಂತಪುರ ಎಕ್ಸ್​​ಪ್ರೆಸ್​​ ರೈಲಿಗಾಗಿ ಕಾಯುತ್ತಿದ್ದೆವು. ಅಷ್ಟರಲ್ಲಿ ರೈಲು ಅಪಘಾತದ ಬಗ್ಗೆ ಮಾಹಿತಿ ಬಂತು. ಯುವಕರು, ಯುವತಿಯರಿದ್ದ ಕಾರಣ ಸಾಕಷ್ಟು ಆತಂಕವಾಗಿತ್ತು. ಮಂಡ್ಯ ಮೂಲದವರು ನಮಗೆ ಊಟ ಉಪಚಾರ ಮಾಡಿದರು. ಮಂಡ್ಯ ಮೂಲದವರು ಮನೆಯಲ್ಲಿಟ್ಟುಕೊ‌ಂಡು ಉಪಚಾರ ಮಾಡಿದ್ರು. ಟಿವಿ9, ಸಿಎಂ ನಮಗೆ ಸಾಥ್ ನೀಡಿದ್ದಾರೆ, ಎಲ್ಲರಿಗೂ ಧನ್ಯವಾದ ‌ಎಂದರು.

ರಾಜ್ಯಕ್ಕೆ ಸುರಕ್ಷಿತವಾಗಿ ವಾಪಸ್ ಬಂದಿದ್ದಕ್ಕೆ ಖುಷಿಯಾಗುತ್ತಿದೆ

ಇದೇ ವೇಳೆ ಮತ್ತೋರ್ವ ಮಹಿಳಾ ಕೋಚ್ ಸಂಸತ ಹಂಚಿಕೊಂಡಿದ್ದಾರೆ. ರಾಜ್ಯಕ್ಕೆ ಸುರಕ್ಷಿತವಾಗಿ ವಾಪಸ್ ಬಂದಿದ್ದಕ್ಕೆ ಖುಷಿಯಾಗುತ್ತಿದೆ. ಊಟ, ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಮಂಡ್ಯ ಮೂಲದ ರೈಲ್ವೆ ಅಧಿಕಾರಿ ನಮಗೆ ಸಹಾಯ ಮಾಡಿದ್ರು. ಬಳಿಕ ಸರ್ಕಾರ ವಿಮಾನ ಮೂಲಕ ನಮ್ಮನ್ನು ವಾಪಸ್ ಕರೆಸಿಕೊಂಡಿದೆ. ರಾಜ್ಯಕ್ಕೆ ಬರಲು ನೆರವು ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಪಶ್ಚಿಮ ಬಂಗಾಳದ ಹೌರಾದಿಂದ ವಾಪಸಾದ ತೇಜಸ್ವಿನಿ ತಿಳಿಸಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ