Yuva Nidhi Scheme: ಯುವನಿಧಿ ಯೋಜನೆಗೆ ಮಾನದಂಡ ಪ್ರಕಟಿಸಿದ ರಾಜ್ಯ ಸರ್ಕಾರ: ಯಾರೆಲ್ಲ ಅರ್ಹರು ಗೊತ್ತಾ?
ಕೊಟ್ಟಮಾತಿನಂತೆ ಐದು ಗ್ಯಾರಂಟಿಗೆ ಗ್ರೀನ್‌ಸಿಗ್ನಲ್ ನೀಡಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಸದ್ಯ ಯುವನಿಧಿ ಯೋಜನೆಗೆ ಮಾನದಂಡ ಪ್ರಕಟಿಸಿದೆ.
ಬೆಂಗಳೂರು: ರಾಜ್ಯದ ಜನರಿಗೆ ಸಿದ್ದರಾಮಯ್ಯ (Siddaramaiah) ಸರ್ಕಾರ ಬಿಗ್ ಗಿಫ್ಟ್ ಕೊಟ್ಟಿದೆ. ಕೊಟ್ಟಮಾತಿನಂತೆ ಐದು ಗ್ಯಾರಂಟಿಗೆ ಗ್ರೀನ್‌ಸಿಗ್ನಲ್ ನೀಡಿದೆ. ಜೂನ್ 02 ಐದು ಗ್ಯಾರಂಟಿಗಳನ್ನು ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಜಾರಿ ಮಾಡಿ ಘೋಷಣೆ ಮಾಡಿದ್ದಾರೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿ ಬಗ್ಗೆ ವಿವರಿಸಿದ್ದಾರೆ. ಸದ್ಯ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ರಾಜ್ಯ ಸರ್ಕಾರ ಮಾನದಂಡ ಪ್ರಕಟಿಸಿದೆ.
ಯುವನಿಧಿ ಯೋಜನೆಗೆ ಮಾನದಂಡಗಳೇನು?
- ಪದವಿ/ ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಸಿಗದ ಕನ್ನಡಿಗರು ಮಾತ್ರ ಯುವ ನಿಧಿ ಯೋಜನೆಗೆ ಅರ್ಹರಾಗಿರುತ್ತಾರೆ.
- 2 ವರ್ಷಗಳ ಅವಧಿಗೆ ಮಾತ್ರ ಯುವ ನಿಧಿ ಯೋಜನೆ ಭತ್ಯೆ ಪಡೆಯಬಹುದು.
- 2 ವರ್ಷದೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗಳಿಗೆ ಸೌಲಭ್ಯ ಸ್ಥಗಿತ
- ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು
- ಫಲಾನುಭವಿಗಳಿಗೆ ಡಿಬಿಟಿ ಮೂಲಕ ಯುವ ನಿಧಿ ಯೋಜನೆ ಭತ್ಯೆ ಪಾವತಿ
- ಉದ್ಯೋಗ ಪಡೆದ ಬಳಿಕ ತಪ್ಪು ಘೋಷಣೆ ಮಾಡಿದರೆ ದಂಡ ಹಾಕಲಾಗುತ್ತೆ
- ಪದವಿ/ ಡಿಪ್ಲೋಮಾ ಬಳಿಕ ಉನ್ನತ ವ್ಯಾಸಂಗ ಮುಂದುವರಿಸಿದ್ರೆ ಭತ್ಯೆ ಇಲ್ಲ
- ಅಪ್ರೆಂಟಿಸ್ ವೇತನ ಪಡೆಯುತ್ತಿರುವವರಿಗೆ ಯುವ ನಿಧಿ ಯೋಜನೆ ಭತ್ಯೆ ಇಲ್ಲ
ಇದನ್ನೂ ಓದಿ: Yuva Nidhi Scheme: 2022-23ನೇ ಸಾಲಿನಲ್ಲಿ ಪದವಿ ಪಡೆದವರಿಗೆ ‘ಯುವನಿಧಿ’, ತೃತೀಯ ಲಿಂಗಿಗಳಿಗೂ ಯೋಜನೆ ಭಾಗ್ಯ
2022-23ರಲ್ಲಿ ಉತ್ತೀರ್ಣರಾಗಿರುವ 18ರಿಂದ 25 ವರ್ಷದೊಳಗಿನ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಮಂಗಳಮುಖಿಯರಿಗೂ ಇದು ಅನ್ವಯವಾಗುತ್ತದೆ ಎಂದು ನಿನ್ನೆ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು.
5 ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದ್ದು, ಯಾವುದೇ ಜಾತಿ, ಧರ್ಮ, ಭಾಷೆ ಬೇಧವಿಲ್ಲದೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:21 pm, Sat, 3 June 23