Yuva Nidhi Scheme: 2022-23ನೇ ಸಾಲಿನಲ್ಲಿ ಪದವಿ ಪಡೆದವರಿಗೆ ‘ಯುವನಿಧಿ’, ತೃತೀಯ ಲಿಂಗಿಗಳಿಗೂ ಯೋಜನೆ ಭಾಗ್ಯ

2022-23ರಲ್ಲಿ ಉತ್ತೀರ್ಣರಾಗಿ ನಿರುದ್ಯೋಗಿಗಳಾಗಿರುವ ನೋಂದಾಯಿತ ಪದವೀಧರರಿಗೆ 24 ತಿಂಗಳ ವರೆಗೆ ಮಾಸಿಕ 3000 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಮಂಗಳಮುಖಿಯರಿಗೂ ಇದು ಅನ್ವಯವಾಗುತ್ತದೆ ಎಂದರು.

Yuva Nidhi Scheme: 2022-23ನೇ ಸಾಲಿನಲ್ಲಿ ಪದವಿ ಪಡೆದವರಿಗೆ ‘ಯುವನಿಧಿ', ತೃತೀಯ ಲಿಂಗಿಗಳಿಗೂ ಯೋಜನೆ ಭಾಗ್ಯ
ಯುವ ನಿಧಿ ಯೋಜನೆ
Follow us
|

Updated on:Jun 02, 2023 | 4:07 PM

ಬೆಂಗಳೂರು: 2022-23ರಲ್ಲಿ ಉತ್ತೀರ್ಣರಾಗಿರುವ 18ರಿಂದ 25 ವರ್ಷದೊಳಗಿನ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಮಂಗಳಮುಖಿಯರಿಗೂ (Transgender) ಇದು ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಯುವ ನಿಧಿ ಯೋಜನೆಗೆ (Yuva Nidhi Scheme) ಅರ್ಜಿ ಆಹ್ವಾನಿಸಲಾಗುವುದು. 2022-23 ರಲ್ಲಿ ವ್ಯಾಸಂಗ ಮಾಡಿ ಪಾಸ್ ಆಗಿರುವ ಎಲ್ಲಾ ಪದವೀಧರರಿಗೆ 24 ತಿಂಗಳವರೆಗೆ ಪ್ರತಿ ತಿಂಗಳು 3000 ರೂ. ಪದವೀಧರರಿಗೆ, 1500 ಡಿಪ್ಲೋಮಾ ಹೋಲ್ಡರ್ಸ್​​ಗಳಿಗೆ ಪಾವತಿ ಮಾಡಲಾಗುವುದು ಎಂದರು.

24 ತಿಂಗಳ ಒಳಗೆ ಖಾಸಗಿ ಅಥವಾ ಸರ್ಕಾರಿ ನೌಕರಿ ಪಡೆದರೆ ಅಂತಹ ಪದವೀಧರರಿಗೆ ಅಥವಾ ಡಿಪ್ಲೋಮಾ ಹೋಲ್ಡರ್ಸ್​​ಗಳಿಗೆ ಹಣ ಪಾವತಿ ಮಾಡಲಾಗುವುದಿಲ್ಲ. ನಿರುದ್ಯೋಗಿ ಅಂತಾ ಅರ್ಜಿ ಹಾಕಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಹಣ ಪಾವತಿ ಮಾಡಲಾಗುತ್ತದೆ. ನೋಂದಣಿ ಮಾಡಿಕೊಂಡ 24 ತಿಂಗಳವರೆಗೆ ಮಾತ್ರ ಭತ್ಯೆ ನೀಡಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: Gruha Jyothi Scheme: ಜುಲೈ 1ರಿಂದ 200 ಯುನಿಟ್ ವಿದ್ಯುತ್ ಉಚಿತ: ಸಿದ್ದರಾಮಯ್ಯ ಘೋಷಣೆ

ಯುವ ನಿಧಿ ಅರ್ಜಿ ಸಲ್ಲಿಕೆಗೆ ಅರ್ಜಿ ಕರೆದ 6 ತಿಂಗಳವರೆಗೆ ಅವಕಾಶ ಇರಲಿದೆ. ದುರ್ಬಳಕೆ ತಡೆಯಲು ಕೆಲವು ಷರತ್ತುಗಳನ್ನು ವಿಧಿಸುತ್ತಿದ್ದೇವೆ. 24 ತಿಂಗಳೊಳಗೆ ಖಾಸಗಿ ಅಥವಾ ಸರ್ಕಾರಿ ನೌಕರಿ ಪಡೆದರೆ ಇಲ್ಲ. ಅಂಥವರಿಗೆ ಯುವನಿಧಿ ಯೋಜನೆ ಹಣ ನೀಡುವುದನ್ನು ನಿಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕೃತವಾಗಿ ಜಾರಿ ಮಾಡಿ ಘೋಷಣೆ ಮಾಡಿದರು. ಇಂದು(ಜೂನ್ 02) ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್​ ಯೋಜನೆ ಜಾರಿ ಬಗ್ಗೆ ವಿವರಿಸಿದರು. 5 ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದ್ದು, ಯಾವುದೇ ಜಾತಿ, ಧರ್ಮ, ಭಾಷೆ ಬೇಧವಿಲ್ಲದೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:48 pm, Fri, 2 June 23

ತಾಜಾ ಸುದ್ದಿ
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಬಿಜೆಪಿ ಜತೆ ದೀರ್ಘಾವಧಿಯ ಮೈತ್ರಿ ನಮ್ಮಉದ್ದೇಶವಾಗಿದೆ: ಕುಮಾರಸ್ವಾಮಿ
ಬಿಜೆಪಿ ಜತೆ ದೀರ್ಘಾವಧಿಯ ಮೈತ್ರಿ ನಮ್ಮಉದ್ದೇಶವಾಗಿದೆ: ಕುಮಾರಸ್ವಾಮಿ
ಬಿಜೆಪಿ ವರಿಷ್ಠರೊಂದಿಗೆ ಮೈತ್ರಿ ಮಾತುಕತೆ ನಡೆಸಿ ಹಿಂತಿರುಗಿದ ಕುಮಾರಸ್ವಾಮಿ
ಬಿಜೆಪಿ ವರಿಷ್ಠರೊಂದಿಗೆ ಮೈತ್ರಿ ಮಾತುಕತೆ ನಡೆಸಿ ಹಿಂತಿರುಗಿದ ಕುಮಾರಸ್ವಾಮಿ
ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
ತುಮಕೂರು: ಅಕ್ಷರ ದಾಸೋಹ ಯೋಜನೆ ಅಕ್ಕಿ ಕದ್ದ ಸರ್ಕಾರೀ ಶಾಲೆ ಅಡುಗೆ ಸಿಬ್ಬಂದಿ
ತುಮಕೂರು: ಅಕ್ಷರ ದಾಸೋಹ ಯೋಜನೆ ಅಕ್ಕಿ ಕದ್ದ ಸರ್ಕಾರೀ ಶಾಲೆ ಅಡುಗೆ ಸಿಬ್ಬಂದಿ
ಈ ಉರಗತಜ್ಞ ಒಂದೇ ಸಲಕ್ಕೆ ನಾಲ್ಕು ಹೆಬ್ಬಾವುಗಳನ್ನು ಹಿಡಿದು ಆಡಿಸುತ್ತಾನೆ
ಈ ಉರಗತಜ್ಞ ಒಂದೇ ಸಲಕ್ಕೆ ನಾಲ್ಕು ಹೆಬ್ಬಾವುಗಳನ್ನು ಹಿಡಿದು ಆಡಿಸುತ್ತಾನೆ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ