ದಾಸನಪುರದಲ್ಲಿ ಕೊಳೆತ ಸ್ಥಿತಿಯಲ್ಲಿ ಗಂಡು ಹುಲಿ ಮೃತದೇಹ ಪತ್ತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 12, 2022 | 7:01 AM

ವಿಶೇಷ ದಂತವನ್ನು ಹೊಂದಿದ್ದ ಆನೆ ಬಂಡೀಪುರ ವ್ಯಾಪ್ತಿಯ ಗುಂಡ ವಲಯದ ಅರಣ್ಯದಲ್ಲಿ ಶನಿವಾರ ಸಾವನ್ನಪ್ಪಿರುವಂತಹ ಘಟನೆ ಮೈಸೂರು ಜಿಲ್ಲೆ ಹೆಚ್​.ಡಿ ಕೋಟೆ ತಾಲ್ಲೂಕಿನ ಕಬಿನಿಯಲ್ಲಿ ನಡೆದಿದೆ.

ದಾಸನಪುರದಲ್ಲಿ ಕೊಳೆತ ಸ್ಥಿತಿಯಲ್ಲಿ ಗಂಡು ಹುಲಿ ಮೃತದೇಹ ಪತ್ತೆ
ಗಂಡು ಹುಲಿ ಮೃತದೇಹ
Follow us on

ಮೈಸೂರು: ಸುಮಾರು 6 ರಿಂದ 7ವರ್ಷದ ಗಂಡು ಹುಲಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವಂತಹ ಘಟನೆ ಮೇಟಿಕುಪ್ಪೆ ಅರಣ್ಯ ಹೆಚ್​.ಡಿ ಕೋಟೆ ತಾಲ್ಲೂಕಿನ ವ್ಯಾಪ್ತಿಯ ದಾಸನಪುರದಲ್ಲಿ ನಡೆದಿದೆ. ಸ್ಥಳಕ್ಕೆ ಮೇಟಿಕುಪ್ಪೆ ಮತ್ತು ಅಂತರಸಂತೆ ವಲಯ ಅರಣ್ಯಾಧಿಕಾರಿಗಳ ತಂಡ ದೌಡಾಯಿಸಿ ಪರಿಶೀಲನೆ ಮಾಡಿದರು. ಹುಲಿಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹುಲಿಯ ಮೃತದೇಹದ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ: Horoscope Today- ದಿನ ಭವಿಷ್ಯ; ಭಾನುವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

ವಿಶೇಷ ದಂತವನ್ನು ಹೊಂದಿದ್ದ ಆನೆ ಸಾವು

ವಿಶೇಷ ದಂತವನ್ನು ಹೊಂದಿದ್ದ ಆನೆ ಬಂಡೀಪುರ ವ್ಯಾಪ್ತಿಯ ಗುಂಡ ವಲಯದ ಅರಣ್ಯದಲ್ಲಿ ಶನಿವಾರ ಸಾವನ್ನಪ್ಪಿರುವಂತಹ ಘಟನೆ ಮೈಸೂರು ಜಿಲ್ಲೆ ಹೆಚ್​.ಡಿ ಕೋಟೆ ತಾಲ್ಲೂಕಿನ ಕಬಿನಿಯಲ್ಲಿ ನಡೆದಿದೆ. ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯ ಕಬಿನಿ ಹಿನ್ನೀರಿನಲ್ಲಿ ಆನೆ ಕಾಣ ಸಿಗುತ್ತಿತ್ತ. ಮಿಸ್ಟರ್ ಕಬಿನಿ ಖ್ಯಾತಿಯ ಭೋಗೇಶ್ವರ ಗಂಡಾನೆ ತನ್ನ ಉದ್ದನೆಯ ದಂತಗಳಿಂದಲೇ ಸಾಕಷ್ಟು ಪ್ರಖ್ಯಾತಿ ಗಳಿಸಿತ್ತು. ಅಲ್ಲದೆ, ವನ್ಯಜೀವಿ ಪ್ರಿಯರ ನೆಚ್ಚಿನ ಆನೆಯಾಗಿತ್ತು. ಸಫಾರಿ ವೇಳೆಯೂ ಆಗಾಗ ಆನೆ ಕಾಣಿಸಿ ಕೊಳ್ಳುತ್ತಿತ್ತು. ಅರಣ್ಯ ಇಲಾಖೆ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಿದರು.

ಸಾರಿಗೆ ಬಸ್ ಹಾಗೂ ಬೈಕ್ ಡಿಕ್ಕಿ, ಬೈಕ್​ ಸವಾರ ಸಾವು

ಚಿಕ್ಕೋಡಿ: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ರಾಜಶೇಖರ ಪಾತ್ರೂಟ (34) ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ರಾಜಶೇಖರ ಪಾತ್ರೂಟ ರಾಯಬಾಗ ತಾಲೂಕಿನ ದೇವಪುರಹಟ್ಟಿ ಗ್ರಾಮದ ನಿವಾಸಿ. ಮಹಾಲಿಂಗಪುರ ಪಟ್ಟಣದಿಂದ ದೇವಪೂರಹಟ್ಟಿ ಗ್ರಾಮಕ್ಕೆ ಬರುತ್ತಿದ್ದ. ಇಂಚಲಕರಂಜಿಯಿಂದ ಬಾಗಲಕೋಟ ಕಡೆಗೆ ಸಾರಿಗೆ ಬಸ್​ ಹೋಗುತ್ತಿತ್ತು. ಈ ವೇಳೆ ಕಪ್ಪಲಗುದ್ದಿ ಗ್ರಾಮ ಬಳಿ ಅಪಘಾತ ಸಂಭವಿಸಿದೆ. ಘಟನೆ ಕುರಿತು ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.