ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಮತ್ತಷ್ಟು ವಿಸ್ತರಣೆಯಾಗಲು ಸಜ್ಜಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು -ಮುಡಾ (Mysuru Urban Development Authority -MUDA) ಮಹಾರಾಷ್ಟ್ರದ ನಾಸಿಕ್ ಮಾದರಿಯಲ್ಲಿ ನೂತನ ಮೆಟ್ರೋ ನಗರ (Neo Metro) ನಿರ್ಮಾಣ ಮಾಡಲು ನಿರ್ಧರಿಸಿದೆ.
ಮೈಸೂರು ನಗರದಲ್ಲಿ ನಿಯೋ ಮೆಟ್ರೋ ನಿರ್ಮಾಣದ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಮೆಟ್ರೋ ನಗರ ನಿರ್ಮಾಣ ಸೇರಿ ಕೆಲ ಯೋಜನೆಗಳಿಗೆ ಮುಡಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಮುಡಾ ಅಧ್ಯಕ್ಷ ರಾಜೀವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರದ 3 ಭಾಗಗಳಲ್ಲಿ ಗುಂಪು ಮನೆ ನಿರ್ಮಾಣ ಯೋಜನೆ (Group Housing Scheme) ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗಿದೆ. 478 ಕೋಟಿ ರೂಪಾಯಿ ವೆಚ್ಚದ ಬಹು ಮಹಡಿ ಗುಂಪುಮನೆ ಯೋಜನೆ (Multi Floor Housing Complex) ಇದಾಗಿದೆ. ವಿಜಯನಗರ-2, 3ನೇ ಹಂತ, ದಟ್ಟಗಳ್ಳಿಯಲ್ಲಿ ನಿಯೋ ಮೆಟ್ರೋ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ.
MUDA Site Allotment Case: ಶಾಸಕರು, ಮಾಜಿ ಶಾಸಕರು ಸೇರಿ 24 ಮಂದಿಗೆ ಬೆಂಗಳೂರು ಸಿಬಿಐ ಕೋರ್ಟ್ನಿಂದ ಸಮನ್ಸ್ ಜಾರಿ
(Group Housing Neo Metro Multi Floor Housing Complex to be built in mysore by muda)
Published On - 9:58 am, Sat, 14 August 21