Mysore Dasara: ಚಾಮುಂಡಿ ಬೆಟ್ಟದ ಮಹಿಷನ ಪ್ರತಿಮೆಗೆ ಬಟ್ಟೆ ಸುತ್ತಿದ ಆಡಳಿತ ಮಂಡಳಿ

Edited By:

Updated on: Oct 09, 2023 | 10:10 PM

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಇಡೀ ಸಾಂಸ್ಕೃತಿಕ ನಗರ ಸಜ್ಜಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಆಡಳಿತ ಮಂಡಳಿ ಮಹಿಷನ ಪ್ರತಿಮೆಗೆ ಬಣ್ಣ ಬಳಿಯಲು ಬಟ್ಟೆ ಸುತ್ತಿದೆ. ಪ್ರತಿ ವರ್ಷ ದಸರಾ ಉದ್ಘಾಟನೆಗೂ ಮುನ್ನ ಪ್ರತಿಮೆಗೆ ಬಣ್ಣ ಬಳಿಯಲಾಗುತ್ತದೆ.

ಮೈಸೂರು, ಅ.9: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ (Mysuru Dasara) ಇಡೀ ಸಾಂಸ್ಕೃತಿಕ ನಗರ ಸಜ್ಜಾಗುತ್ತಿದೆ. ಮಹಿಷಾ ದಸರಾ ವಿವಾದವೂ ಹುಟ್ಟುಹಾಕಲಾಗಿದೆ. ಮಹಿಷ ದಸರಾ ಹಾಗೂ ಚಾಮುಂಡಿ ಬೆಟ್ಟ ಚಲೋಗೆ ಎರಡು ಬಣಗಳು ಅನುಮತಿ ಕೋರಿವೆ. ಈ ನಡುವೆ ಆಡಳಿತ ಮಂಡಳಿಯು ಚಾಮುಂಡಿ ಬಿಟ್ಟದಲ್ಲಿರುವ ಮಹಿಷನ ಪ್ರತಿಮೆಗೆ ಬಣ್ಣ ಬಳಿಯಲು ಮುಂದಾಗಿದೆ. ಪ್ರತಿ ವರ್ಷ ದಸರಾ ಉದ್ಘಾಟನೆಗೂ ಮುನ್ನ ಪ್ರತಿಮೆಗೆ ಬಣ್ಣ ಬಳಿಯಲಾಗುತ್ತಿದೆ. ಈ ಬಾರಿಯೂ ಬಣ್ಣ ಬಳಿಯಲು ಆರಂಭಿಸಿದ್ದು, ಧೂಳಿನಿಂದ ರಕ್ಷಿಸಲು ಪ್ರತಿಮೆಯನ್ನು ಬಟ್ಟೆಗಳಿಂದ ಸುತ್ತಲಾಗಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ