ಮಹಿಷ ದಸರಾಗೆ ವಿರೋಧ: ಬರಿಗಾಲಲ್ಲಿ ಬೆಟ್ಟ ಹತ್ತಿ, ದುಷ್ಟರನ್ನು ಶಿಕ್ಷಿಸು ಎಂದು ಚಾಮುಂಡೇಶ್ವರಿಗೆ ಪಾರ್ಥನೆ
ತಾಯಿ ಚಾಮುಂಡೇಶ್ವರಿ ಅಸುರ ಮಹಿಷನನ್ನು ಸಂಹಾರ ಮಾಡುತ್ತಾಳೆ. ನಂತರ ಬರುವುದೇ ವಿಜಯದಶಮಿ ಇದನ್ನು ಆರ್ಥ ಮಾಡಿಕೊಳ್ಳಿ. ಜಗತ್ತು ಚಾಮುಂಡೇಶ್ವರಿ ತಾಯಿಯನ್ನು ಒಪ್ಪಿಕೊಂಡಿದೆ. ಮಹಿಷಾ ದಸರಾ ಮಾಡುವಂತವರಿಗೆ ಚಾಮುಂಡೇಶ್ವರಿ ಒಳ್ಳೆ ಬುದ್ದಿ ಕೊಟ್ಟು ಆಚರಣೆ ಕೈಬಿಡಲಿ ಎಂದು ಪ್ರಾರ್ಥಿಸಿದರು.
ಮೈಸೂರು ಅ.10: ಮಹಿಷ ದಸರಾ ಸಮಿತಿ, ಮಹಿಷ ದಸರಾವನ್ನು (Mahisha Dasara) ಆಚರಿಸಲು ಮುಂದಾಗಿದ್ದು, ಇದಕ್ಕೆ ಪರ-ವಿರೋಧದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಮಹಿಷಾ ದಸರಾ ಕೈಬಿಡಿ ಎಂದು ಚಾಮುಂಡೇಶ್ವರಿ (Chamundeshwari) ಭಕ್ತರು 1001 ಮೆಟ್ಟಿಲನ್ನು ಬರಿಗಾಲಿನಲ್ಲಿ ಹತ್ತಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಮತ್ತು ಕರ್ಪೂರ ಹಚ್ಚಿ ಈಡುಗಾಯಿ ಹೊಡೆದು ಪ್ರಾರ್ಥನೆ ಸಲ್ಲಿಸಿದ್ದಾರೆ. “ತಾಯಿ ಚಾಮುಂಡೇಶ್ವರಿ ಮಹಿಷಾ ದಸರಾ ಮಾಡುವವರಿಗೆ ಒಳ್ಳೆಯ ಬುದ್ದಿಕೊಡು. ದುಷ್ಟರನ್ನು ಶಿಕ್ಷಿಸಿ, ಶಿಷ್ಠರನ್ನು ರಕ್ಷಿಸು. ಮಹಿಷಾ ದಸರಾ ಮಾಡುತ್ತೇನೆ ಎನ್ನುವ ನಿನ್ನ ಮಕ್ಕಳಿಗೆ ಒಳ್ಳೆಯ ಬುದ್ದಿ ಕೊಡು” ಎಂದು ಪ್ರಾರ್ಥಿಸಿದ್ದಾರೆ.
ನವರಾತ್ರಿಯಲ್ಲಿ ಕಾಳರಾತ್ರಿ ಕೂಡ ಒಂದು. ಅದರಲ್ಲಿ ತಾಯಿ ಚಾಮುಂಡೇಶ್ವರಿ ಅಸುರ ಮಹಿಷನನ್ನು ಸಂಹಾರ ಮಾಡುತ್ತಾಳೆ. ನಂತರ ಬರುವುದೇ ವಿಜಯದಶಮಿ ಇದನ್ನು ಆರ್ಥ ಮಾಡಿಕೊಳ್ಳಿ. ಜಗತ್ತು ಚಾಮುಂಡೇಶ್ವರಿ ತಾಯಿಯನ್ನು ಒಪ್ಪಿಕೊಂಡಿದೆ. ಮಹಿಷಾ ದಸರಾ ಮಾಡುವಂತವರಿಗೆ ಚಾಮುಂಡೇಶ್ವರಿ ಒಳ್ಳೆ ಬುದ್ದಿ ಕೊಟ್ಟು ಆಚರಣೆ ಕೈಬಿಡಲಿ ಎಂದರು.
ಚಲೋ ಚಾಮುಂಡಿಬೆಟ್ಟ
ಇನ್ನು ಮಹಿಷಾ ದಸರಾ ವಿರೋಧಿಸಿ ಸಂಸದ ಪ್ರತಾಪ ಸಿಂಹ ಚಲೋ ಚಾಮುಂಡಿಬೆಟ್ಟ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ ಸಿಂಹ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಅ.13 ರಂದು ಬೆಳಿಗ್ಗೆ 8 ಗಂಟೆಗೆ ಚಲೋ ಚಾಮುಂಡಿಬೆಟ್ಟ ಜಾಥ ಹೊರಡಲಿದೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮಹಿಷನ ಪ್ರತಿಮೆಗೆ ಬಟ್ಟೆ ಸುತ್ತಿದ ಆಡಳಿತ ಮಂಡಳಿ
ಈ ಸಂಬಂಧ ಮೈಸೂರಿನ ತಿಲಕ್ ನಗರದ ರಾಮಮಂದಿರದಲ್ಲಿ ಸಂಸದ ಪ್ರತಾಪ್ ಸಿಂಹ ಇಂದು ವಾರ್ಡ್ವಾರು ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.
ದಿಢೀರ್ ಸೃಷ್ಟಿಯಾದ ಮಹಿಷ ದಸರಾ ಆಚರಣೆ ಇತಿಹಾಸ
2015ರಲ್ಲಿ ಆರಂಭವಾದ ಮಹಿಷ ದಸರಾ ಆಚರಣೆಗೆ ದಿಢೀರ್ 50 ವರ್ಷದ ಇತಿಹಾಸ ಸೃಷ್ಟಿಯಾಗಿದೆ. ಈ ಬಾರಿ 50ನೇ ವರ್ಷದ ಮಹಿಷ ದಸರಾ ಆಚರಣೆ ನಡೆಸಲಾಗುತ್ತಿದೆ ಎಂದು ಮಹಿಷ ದಸರಾ ಆಚರಣೆ ಸಮಿತಿಯಿಂದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ