ಟೋಲ್ ಶುಲ್ಕ ಕಟ್ಟದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ ಮೂರ್ತಿಯ ಗೂಂಡಾವರ್ತನೆ, ಟೋಲ್ ಗೇಟ್ ಮುರಿದು ಪರಾರಿ

ಟೋಲ್ ಶುಲ್ಕ ಕಟ್ಟದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ ಮೂರ್ತಿಯ ಗೂಂಡಾವರ್ತನೆ, ಟೋಲ್ ಗೇಟ್ ಮುರಿದು ಪರಾರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 10, 2023 | 12:38 PM

ನೂರಿನ್ನೂರು ರುಪಾಯಿ ಟೋಲ್ ಕಟ್ಟಲಾಗದ ಮೂರ್ತಿ ಎನ್ನುವವನಿಗೆ ಐಷಾರಾಮಿ ಕಾರು ಬೇರೆ ಕೇಡು. ಶ್ರೀರಂಗಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂರ್ತಿಗಾಗಿ ತಲಾಶ್ ನಡೆದಿದೆ. ದಕ್ಷ ಪೊಲೀಸ್ ಆಧಿಕಾರಿ ಅಲೋಕ್ ಕುಮಾರ್ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿಯಾಗಿ ಅಲೋಕ್ ಕುಮಾರ್ ಮುಂದುವರಿದ್ದರೆ ಮೂರ್ತಿಯನ್ನು ಹೆಡೆಮುರಿ ಕಟ್ಟಿ ಠಾಣೆಗೆ ಎಳೆತಂದಿರುತ್ತಿದ್ದರು.

ಮಂಡ್ಯ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ (Dr BR Ambedkar) ಅವರ ಹೆಸರಲ್ಲಿ ಸಂಘಗಳನ್ನು ಕಟ್ಟಿಕೊಂಡು ಗೂಂಡಾಗಳಂತೆ ವರ್ತಿಸುವ ಜನ ಆ ಮಹಾನುಭಾವನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಾರೆಯೇ ಹೊರತು ಮತ್ತೇನೂ ಇಲ್ಲ! ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಹತ್ತಿರದ ಗಣಂಗೂರು ಟೋಲ್ ಪ್ಲಾಜಾ ಬಳಿ ನಿಂತಿರುವ ಬಿಳಿ ಬಣ್ಣದ ಕಾರು ಪಿ ಮೂರ್ತಿ (P Murthy) ಹೆಸರಿನ ವ್ಯಕ್ತಿಗೆ ಸೇರಿದ್ದು, ಅವನು ಅಂಬೇಡ್ಕರ್ ಸೇನೆಯ (Ambedkar Sene) ರಾಜ್ಯಾಧ್ಯಕ್ಷ ಅಂತ ಎಲ್ಲ ಕಡೆ ಹೇಳಿಕೊಳ್ಳುತ್ತಾನೆ. ಈ ಟೋಲ್ ಪ್ಲಾಜಾ ಬಳಿಯೂ ಅವನು ಅದನ್ನೇ ಹೇಳಿ ಟೋಲ್ ಕಟ್ಟಲ್ಲ ಅಂದಾಗ ಅಲ್ಲಿನ ಸಿಬ್ಬಂದಿ ನೀವು ಯಾರಾದರೇನು ಟೋಲ್ ಶುಲ್ಕ ಕಟ್ಟಲೇಬೇಕು ಅಂದಿದ್ದಾರೆ. ಸ್ವಲ್ಪ ಹೊತ್ತಿನವರೆಗೆ ಕಟ್ಟು-ಕಟ್ಟಲ್ಲ ಅಂತ ವಾಗ್ದಾದ ನಡೆದಿದೆ. ಕೊನೆಗೆ ‘ಪರಾಕ್ರಮಶಾಲಿ’ ಮೂರ್ತಿ ಮಾಡಿದ್ದೇನು ಅಂತ ನೀವೇ ನೊಡಿ. ಕಾರನ್ನು ರಿವರ್ಸ್ ತಗೊಂಡು ಹೋಗಿ ಭಯಾನಕ ವೇಗದಲ್ಲಿ ಬಂದು ಟೋಲ್ ಗೇಟ್ ಮುರಿದು ಪರಾರಿಯಾಗುತ್ತಾನೆ. ನೂರಿನ್ನೂರು ರುಪಾಯಿ ಟೋಲ್ ಕಟ್ಟಲಾಗದ ಮೂರ್ತಿ ಎನ್ನುವವನಿಗೆ ಐಷಾರಾಮಿ ಕಾರು ಬೇರೆ ಕೇಡು. ಶ್ರೀರಂಗಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂರ್ತಿಗಾಗಿ ತಲಾಶ್ ನಡೆದಿದೆ. ದಕ್ಷ ಪೊಲೀಸ್ ಆಧಿಕಾರಿ ಅಲೋಕ್ ಕುಮಾರ್ ಅವರನ್ನು ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿಯಾಗಿ ಅಲೋಕ್ ಕುಮಾರ್ ಮುಂದುವರಿದ್ದರೆ ಮೂರ್ತಿಯನ್ನು ಹೆಡೆಮುರಿ ಕಟ್ಟಿ ಠಾಣೆಗೆ ಎಳೆತಂದಿರುತ್ತಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ