ATM ಚೋರಿಗೆ ಯತ್ನ, ಸ್ಥಳೀಯರು ಜಾಗ್ರತೆ ವಹಿಸದಿದ್ದರೆ 40 ಲಕ್ಷ ರೂ ಕಳ್ಳರ ಪಾಲಾಗುತಿತ್ತು! ಅಸಲಿಗೆ ಅಲ್ಲಿ ನಡೆದದ್ದಾರೂ ಏನು?

ATM ಚೋರಿಗೆ ಯತ್ನ, ಸ್ಥಳೀಯರು ಜಾಗ್ರತೆ ವಹಿಸದಿದ್ದರೆ 40 ಲಕ್ಷ ರೂ ಕಳ್ಳರ ಪಾಲಾಗುತಿತ್ತು! ಅಸಲಿಗೆ ಅಲ್ಲಿ ನಡೆದದ್ದಾರೂ ಏನು?

ಸಾಧು ಶ್ರೀನಾಥ್​
|

Updated on: Oct 10, 2023 | 1:36 PM

ಅಂಕ್ಸಾಪುರದಲ್ಲಿ ಯೂನಿಯನ್ ಬ್ಯಾಂಕ್ ಏಟಿಎಂ ಚೋರಿಗೆ ಕೆಲ ಕಳ್ಳರು ಪ್ರಯತ್ನಿಸಿದರು. ಎಟಿಎಂ ಅನ್ನು ಧ್ವಂಸ ಮಾಡಿ, ಅದರಲ್ಲಿರುವ ಹಣವನ್ನು ದೋಚಿಕೊಂಡು ಹೋಗುವುದು ಅವರ ಪ್ರಯತ್ನವಾಗಿತ್ತು. ಆದರೆ ಅದು ಸಾಧ್ಯವಾಗದ ಕಾರಣ.. ಇಡಿಯಾಗಿ ಏಟಿಎಂ ಮೆಷೀನ್‌ ಅನ್ನೇ ಎತ್ತಿಕೊಂಡು ಹೋಗುವ ಪ್ರಯತ್ನ ಮಾಡಿದರು. ಇಂತಹ ಪ್ರಯತ್ನದಲ್ಲಿದ್ದಾಗ...

ನಿಜಾಮಾಬಾದ್, ಅಕ್ಟೋಬರ್ 10: ಕಳ್ಳತನಕ್ಕೆ ಸದಾ ನೂರೆಂಟು ದಾರಿಗಳು ಇರುತ್ತವಂತೆ, ಸ್ಟೈಲ್ ಯಾವುದಾದರೂ.. ಪ್ಲಾನ್ ಯಾವುದಾದರೂ.. ಟಾರ್ಗೆಟ್ ಮಾತ್ರ ದೋಚುವುದೇ. ಹಾಗಾದರೂ, ಕಳ್ಳರು ಹಾಕಿದ ಯೋಜನೆಗಳೆಲ್ಲಾ ಸಕ್ಸಸ್​ ಆಗುತ್ತವೆ ಅಂತೇನೂ ಅಲ್ಲ. ಅನೆಕ ಸಂದರ್ಭಗಳಲ್ಲಿ ಅಟ್ಟರ್ ಫ್ಲಾಪ್ ಕಟ್ಟಿಟ್ಟ ಬುತ್ತಿ ಆಗಿರುತ್ತದೆ. ಇತ್ತೀಚೆಗೆ ಅಂತಹ ಘಟನೆಯೊಂದು ಜರುಗಿದೆ. ನಿಜಾಮಾಬಾದ್ ಜಿಲ್ಲೆಯಲ್ಲಿ ಕೆಲವು ಕಳ್ಳರು ಅಂತಹ ಸಂದರ್ಭದವನ್ನು ಎದುರಿಸಬೇಕಾಯಿತು.

ಅವರು ಸಣ್ಣಪುಟ್ಟ ಕಳ್ಳರು ಇರಬೇಕೇನೋ.. ಆದರೆ ಏಕಾಏಕಿ ಎಟಿಎಂ ಅನ್ನೇ ಟಾರ್ಗೆಟ್ ಮಾಡಿಕೊಂಡರು. ಆದರೆ, ಆ ಪ್ರಯತ್ನ ಜಸ್ಟ್​ ಫೇಲ್​ ಆಗಿದೆ ಅಷ್ಟೆ. ತಾವು ಹಾಕಿಕೊಂಡು ಬಂದಿದ್ದ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಘಟನೆ ವೇಲ್ಪೂರು ಮಂಡಲ ಅಂಕ್ಸಾಪುರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿವರಗಳು ಹೀಗಿವೆ.

ಅಂಕ್ಸಾಪುರದಲ್ಲಿ ಯೂನಿಯನ್ ಬ್ಯಾಂಕ್ ಏಟಿಎಂ ಚೋರಿಗೆ ಕೆಲ ಕಳ್ಳರು ಪ್ರಯತ್ನಿಸಿದರು. ಎಟಿಎಂ ಅನ್ನು ಧ್ವಂಸ ಮಾಡಿ, ಅದರಲ್ಲಿರುವ ಹಣವನ್ನು ದೋಚಿಕೊಂಡು ಹೋಗುವುದು ಅವರ ಪ್ರಯತ್ನವಾಗಿತ್ತು. ಆದರೆ ಅದು ಸಾಧ್ಯವಾಗದ ಕಾರಣ.. ಇಡಿಯಾಗಿ ಏಟಿಎಂ ಮೆಷೀನ್‌ ಅನ್ನೇ ಎತ್ತಿಕೊಂಡು ಹೋಗುವ ಪ್ರಯತ್ನ ಮಾಡಿದರು. ಇಂತಹ ಪ್ರಯತ್ನದಲ್ಲಿದ್ದಾಗ ಕೆಲವು ಸ್ಥಳೀಯರು ಆ ಚೋರಿಯನ್ನು ಗಮನಿಸಿದರು.

ಜೋರಾಗಿ ಕಿರುಚಿಕೊಳ್ಳುತ್ತಾ, ಕೇಕೆ ಹಾಕತೊಡಗಿದರು. ಅದರಿಂದ ಕಳ್ಳರು ಬೆದರಿಹೋದರು. ಏಟಿಎಂ ಮೆಷೀನ್‌ನನ್ನು ಅಲ್ಲಿಯೇ ಬಿಟ್ಟುಬಿಟ್ಟು ಹಿಂದಿರುಗಿ ನೋಡದೆ ಓಟ ಕಿತ್ತರು. ಅತ್ತ ವಿಷಯ ಪೊಲೀಸರಿಗೆ ತಲುಪಿ, ಘಟನೆ ಸ್ಥಳಕ್ಕೆ ದೌಡಾಯಿಸಿ ಬಂದಿದ್ದಾರೆ. ಸಾಕ್ಷ್ಯ ಸಂಗ್ರಹಿಸಿದರು. ಏಟಿಎಂ ಮೆಷೀನ್‌ನಲ್ಲಿ ಸುಮಾರು ರೂ. 40 ಲಕ್ಷ ಇತ್ತೆಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ