Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಜೊತೆ ಮೈತ್ರಿ ಬಳಿಕ ಜೆಡಿಎಸ್ ಪಕ್ಷದ ಶಾಸಕರು ನೈತಿಕವಾಗಿ ಕುಮಾರಸ್ವಾಮಿಯೊಂದಿಗಿಲ್ಲ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಬಿಜೆಪಿ ಜೊತೆ ಮೈತ್ರಿ ಬಳಿಕ ಜೆಡಿಎಸ್ ಪಕ್ಷದ ಶಾಸಕರು ನೈತಿಕವಾಗಿ ಕುಮಾರಸ್ವಾಮಿಯೊಂದಿಗಿಲ್ಲ: ಎಂ ಲಕ್ಷ್ಮಣ್, ಕೆಪಿಸಿಸಿ ವಕ್ತಾರ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 10, 2023 | 3:10 PM

ಶಿವಕುಮಾರ್ ಅವರನ್ನು ಯಾವ ಆಧಾರದ ಮೇಲೆ ಜೈಲಿಗೆ ಹಾಕಿಸುತ್ತಾರಂತೆ? ಅವರು ಯಾವುದೇ ಅಪರಾಧವೆಸಗಿಲ್ಲ ಮತ್ತು ಭ್ರಷ್ಟಾಚಾರ ನಡೆಸಿಲ್ಲ. ಅವರೊಬ್ಬ ಉದ್ಯಮಿ, ಶಿಕ್ಷಣ ಕೇಂದ್ರಗಳನ್ನು ನಡೆಸುತ್ತಿದ್ದಾರೆ ಮತ್ತು ರಿಯಲ್ಟರ್ ಕೂಡ ಹೌದು ಎಂದು ಲಕ್ಷ್ಮಣ್ ಹೇಳಿದರು. ಜೆಡಿಎಸ್ ಪಕ್ಷವನ್ನು ಕುಮಾರಸ್ವಾಮಿ ಫ್ಯಾಮಿಲಿ ಟ್ರಸ್ಟ್ ಮಾಡಿಕೊಂಡಿದ್ದಾರೆ, ಬಿಜೆಪಿ ಜೊತೆ ಮೈತ್ರಿ ಪಕ್ಷದ ಯಾವುದೇ ಶಾಸಕನಿಗೆ ಇಷ್ಟವಾಗಿಲ್ಲ ಎಂದು ಅವರು ಹೇಳಿದರು.

ಮೈಸೂರು: ನಗರದಲ್ಲಿಂದು ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ (M Laxman), ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟ ನಂತರವೂ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಇನ್ನೂ ತಮ್ಮ ಹುದ್ದೆಯಲ್ಲಿ ಮುಂದುರಿದಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದರು. ಅಕ್ಟೋಬರ್ 16 ರವರೆಗೆ ಗಡುವು ಅವರು ಯಾಕೆ ಕೊಟ್ಟಿದ್ದಾರೆ, ಕೂಡಲೇ ಹೊರಬಂದು ತಮಗಿಷ್ಟವಾದ ಪಕ್ಷ ಸೇರುವಂತೆ ಸಲಹೆಯನ್ನೂ ಲಕ್ಷ್ಮಣ್ ನೀಡಿದರು. ಡಿಕೆ ಶಿವಕುಮಾರ್ (DK Shivakumar) ಬಗ್ಗೆ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾಡುತ್ತಿರುವ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸಿದ ಲಕ್ಷ್ಮಣ್, ಒಬ್ಬ ಒಕ್ಕಲಿಗ ನಾಯಕನ ಏಳಿಗೆಯನ್ನು ಸಹಿಸುವುದು ಕುಮಾರಸ್ವಾಮಿಗೆ ಆಗುತ್ತಿಲ್ಲ, ಇದನ್ನು ರಾಜ್ಯದ ಒಕ್ಕಲಿಗ ಸಮುದಾಯ ಗಮನಿಸಬೇಕು ಎಂದು ಹೇಳಿದರು. ಶಿವಕುಮಾರ್ ಅವರನ್ನು ಯಾವ ಆಧಾರದ ಮೇಲೆ ಜೈಲಿಗೆ ಹಾಕಿಸುತ್ತಾರಂತೆ? ಅವರು ಯಾವುದೇ ಅಪರಾಧವೆಸಗಿಲ್ಲ ಮತ್ತು ಭ್ರಷ್ಟಾಚಾರ ನಡೆಸಿಲ್ಲ. ಅವರೊಬ್ಬ ಉದ್ಯಮಿ, ಶಿಕ್ಷಣ ಕೇಂದ್ರಗಳನ್ನು ನಡೆಸುತ್ತಿದ್ದಾರೆ ಮತ್ತು ರಿಯಲ್ಟರ್ ಕೂಡ ಹೌದು ಎಂದು ಲಕ್ಷ್ಮಣ್ ಹೇಳಿದರು. ಜೆಡಿಎಸ್ ಪಕ್ಷವನ್ನು ಕುಮಾರಸ್ವಾಮಿ ಫ್ಯಾಮಿಲಿ ಟ್ರಸ್ಟ್ ಮಾಡಿಕೊಂಡಿದ್ದಾರೆ, ಬಿಜೆಪಿ ಜೊತೆ ಮೈತ್ರಿ ಪಕ್ಷದ ಯಾವುದೇ ಶಾಸಕನಿಗೆ ಇಷ್ಟವಾಗಿಲ್ಲ, ನೈತಿಕವಾಗಿ ಒಬ್ಬೇ ಒಬ್ಬ ಶಾಸಕ ಕುಮಾರಸ್ವಾಮಿ ಅವರೊಂದಿಗಿಲ್ಲ ಎಂದು ಲಕ್ಷ್ಮಣ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ