ಇಸ್ರೇಲ್​ನಲ್ಲಿರುವ ಕನ್ನಡಿಗರು ಸುರಕ್ಷಿತ, ಆದರೆ ಕರ್ನಾಟಕದಲ್ಲಿ ಅವರ ಕುಟುಂಬಗಳು ಆತಂಕದಲ್ಲಿವೆ!

ಇಸ್ರೇಲ್​ನಲ್ಲಿರುವ ಕನ್ನಡಿಗರು ಸುರಕ್ಷಿತ, ಆದರೆ ಕರ್ನಾಟಕದಲ್ಲಿ ಅವರ ಕುಟುಂಬಗಳು ಆತಂಕದಲ್ಲಿವೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 10, 2023 | 5:42 PM

ಸಮಾಧಾನಕರ ಸಂಗತಿಯೆಂದರೆ ಅವರೆಲ್ಲ ಸುರಕ್ಷಿತವಾಗಿದ್ದಾರೆ ಮತ್ತು ಅವರ ಭದ್ರತೆಗಾಗಿ ಅಲ್ಲಿನ ಸರ್ಕಾರ ವ್ಯವಸ್ಥೆ ಮಾಡಿದೆ. ಬಾಂಬ್ ಗಳ ದಾಳಿ ಶುರುವಾದರೆ ಅವರನ್ನು ಬಂಕರ್ ಗಳಿಗೆ ಕರೆದೊಯ್ಯಲಾಗುತ್ತಂತೆ. ಕೆಲವರನ್ನು ಹೋಟೆಲ್ ಗಳಲ್ಲಿ ಸುರಕ್ಷಿತವಾಗಿಟ್ಟು ಊಟ ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಏನಾದರೂ ಹೆಚ್ಚು ಕಡಿಮೆಯಾದರೆ ಟೆಲ್ ಅವೀವ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿ ನೆರವವು ಒದಗಿಸಲು ಸಿದ್ಧವಾಗಿದೆ.

ಹಾಸನ: ಇಸ್ರೇಲ್ ನಲ್ಲಿ ಹಮಾಸ್ ಉಗ್ರರು (Hamas terrorists) ಮತ್ತು ಅಲ್ಲಿನ ಸೇನೆಯ ನಡುವೆ ಕಾದಾಟ ಮುಂದುವರಿದಿದೆ. ಆ ದೇಶದಲ್ಲಿ ಸಾಕಷ್ಟು ಭಾರತೀಯರಿದ್ದು (Indians) ಅವರಲ್ಲಿ ಕನ್ನಡಿಗರೂ ಸೇರಿದ್ದಾರೆ. ಜಿಲ್ಲೆಯ ಬೇಲೂರು ತಾಲೂಕಿನ (Belut taluk) ಹಲವು ಜನ ಇಸ್ರೇಲ್ ನ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿದ್ದು ಸ್ವದೇಶದಲ್ಲಿ ಅವರ ಕುಟುಂಬಗಳು ವಿಪರೀತ ಆತಂಕದಲ್ಲಿವೆ. ಒಬ್ಬ ಮಹಿಳೆಯ ಪತಿ ಅಲ್ಲಿಗೆ ಹೋಗಿದ್ರೆ ಒಬ್ಬ ಯುವತಿಯ ಅಕ್ಕ ಅಲ್ಲಿದ್ದಾರೆ, ಮತ್ತೊಬ್ಬರ ಮಗ ಬದುಕು ಅರಿಸಿಕೊಂಡು ಇಸ್ರೇಲ್ ಗೆ ಹೋಗಿದ್ದಾರೆ. ಆದರೆ ಸಮಾಧಾನಕರ ಸಂಗತಿಯೆಂದರೆ ಅವರೆಲ್ಲ ಸುರಕ್ಷಿತವಾಗಿದ್ದಾರೆ ಮತ್ತು ಅವರ ಭದ್ರತೆಗಾಗಿ ಅಲ್ಲಿನ ಸರ್ಕಾರ ವ್ಯವಸ್ಥೆ ಮಾಡಿದೆ. ಬಾಂಬ್ ಗಳ ದಾಳಿ ಶುರುವಾದರೆ ಅವರನ್ನು ಬಂಕರ್ ಗಳಿಗೆ ಕರೆದೊಯ್ಯಲಾಗುತ್ತಂತೆ. ಕೆಲವರನ್ನು ಹೋಟೆಲ್ ಗಳಲ್ಲಿ ಸುರಕ್ಷಿತವಾಗಿಟ್ಟು ಊಟ ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಏನಾದರೂ ಹೆಚ್ಚು ಕಡಿಮೆಯಾದರೆ ಟೆಲ್ ಅವೀವ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿ ನೆರವವು ಒದಗಿಸಲು ಸಿದ್ಧವಾಗಿದೆ. ಸಮಯ ಸಿಕ್ಕಾಗಲೆಲ್ಲ ಅಲ್ಲಿರುವ ಕನ್ನಡಿಗರು, ಕುಟುಂಬಗಳ ಸದಸ್ಯರಿಗೆ ಫೋನ್ ಮಾಡಿ ವಿದ್ಯಮಾನಗಳನ್ನು ತಿಳಿಸುತ್ತಾರಂತೆ. ಯುದ್ಧದಂಥ ಸ್ಥಿತಿ ಮುಂದುವರಿದರೆ, ಭಾರತ ಮತ್ತು ಕರ್ನಾಟಕ ಸರ್ಕಾರ ಅವರನ್ನು ವಾಪಸ್ಸು ಕರೆತರುವ ವ್ಯವಸ್ಥೆ ಮಾಡಬೇಕೆಂದಯ ಬೇಲೂರಿನ ಕುಟುಂಬಗಳು ಮನವಿ ಮಾಡುತ್ತಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ