ತಮ್ಮ ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ನಿಲ್ಲಿಸಿದ್ದಾರೆ: ಕೆಎಸ್ ಈಶ್ವರಪ್ಪ
ಒಬ್ಬ ಪತ್ರಕರ್ತ ಅಂದ್ರೆ ನೀವು ತೃಪ್ತರಾಗಿದ್ದೀರಾ ಸರ್ ಅಂತ ಕೇಳುತ್ತಾರೆ. ಅವರ ಮಾತಿಗೆ ಹಾಸ್ಯದ ಧಾಟಿಯಲ್ಲಿ ಉತ್ತರಿಸುವ ಈಶ್ವರಪ್ಪ,‘ತೃಪ್ತನಾಗಿರಲು ನಿಂಗೆ ಮತ್ತೇನಯ್ಯ ಬೇಕು, ಇವತ್ತು ಸಾಯಂಕಾಲ ನಿಮ್ಮ ಮನೆಗೆ ಬಂದು ನಿಮ್ಮ ಪತ್ನಿಯನ್ನು, ಯಾಕಮ್ಮ ನಿಮ್ಮ ಯಜಮಾನರು ತೃಪ್ತರನ್ನಾಗಿಟ್ಟಿಲ್ಲ,’ ಅಂತ ಕೇಳುತ್ತೇನೆ ಅಂದಾಗ, ಅಲ್ಲಿದ್ದವರೆಲ್ಲ ಗೊಳ್ಳನೆ ನಕ್ಕರು.
ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa), ಸಿದ್ದರಾಮಯ್ಯ ಸರಕಾರ (Siddaramaiah government) ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಸ್ಥಗಿತಗೊಳಿಸಿದೆಯೆಂದು ಅರೋಪಿಸಿ ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (DK Shivakumar) ತಾವು ಅಧಿಕಾರಕ್ಕೆ ಬಂದು ಸುಖವಾಗಿರುವುದಕ್ಕೋಸ್ಕರ ಜನರಿಗೆ ಗ್ಯಾರಂಟಿಗಳನ್ನು ನೀಡಿದ್ದಾರೆ, ಅವರ ಸ್ವಾರ್ಥಕ್ಕಾಗಿ ನಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಯಾಕೆ ಸ್ಥಗಿತಗೊಳ್ಳಬೇಕು ಅಂತ ಪ್ರಶ್ನಿಸಿದರು. ಇವರ ವರಸೆಯಿಂದ ಭ್ರಮನಿರಸನಗೊಳ್ಳುವ ಕಾಂಗ್ರೆಸ್ ಶಾಸಕರು ಮುಂದೆ ಬಿಜೆಪಿ ಬರುತ್ತಾತೆ ಯಾಕೆಂದರೆ ಬಿಜೆಪಿ ಪುನಃ ಆಧಿಕಾರಕ್ಕೆ ಬರುತ್ತದೆ ಅಂತ ಮನವರಿಕೆಯಾಗಿರುತ್ತದೆ ಎಂದು ಈಶ್ವರಪ್ಪ ಹೇಳಿದರು. ಪ್ರಸ್ತುತವಾಗಿ ಬಿಜೆಪಿಯಲ್ಲಿ ತನ್ನ ಸ್ಥಾನಮಾನದ ಬಗ್ಗೆ ಕೇಳಿದಾಗ ಈಶ್ವರಪ್ಪ, ಜನ ಮತ್ತು ಪಕ್ಷ ತನಗೆ ಸಾಕಷ್ಟು ಸ್ಥಾನಮಾನ ನೀಡಿದೆ, ಕೂಲಿ ಮಾಡುತ್ತಿದ್ದ ಮಹಿಳೆಯ ಮಗನನ್ನು ರಾಜ್ಯದ ಉಪ ಮುಖ್ಯಮಂತ್ರಿಯಾಗುವರೆಗೆ ಬೆಳೆಸಿದೆ, ಸಂತೃಪ್ತನಾಗಿದ್ದೇನೆ ಮತ್ತೇನೂ ಬೇಡ ಎಂದು ಹೇಳಿದಾಗ, ಒಬ್ಬ ಪತ್ರಕರ್ತ ಅಂದ್ರೆ ನೀವು ತೃಪ್ತರಾಗಿದ್ದೀರಾ ಸರ್ ಅಂತ ಕೇಳುತ್ತಾರೆ. ಅವರ ಮಾತಿಗೆ ಹಾಸ್ಯದ ಧಾಟಿಯಲ್ಲಿ ಉತ್ತರಿಸುವ ಈಶ್ವರಪ್ಪ,‘ತೃಪ್ತನಾಗಿರಲು ನಿಂಗೆ ಮತ್ತೇನಯ್ಯ ಬೇಕು, ಇವತ್ತು ಸಾಯಂಕಾಲ ನಿಮ್ಮ ಮನೆಗೆ ಬಂದು ನಿಮ್ಮ ಪತ್ನಿಯನ್ನು, ಯಾಕಮ್ಮ ನಿಮ್ಮ ಯಜಮಾನರು ತೃಪ್ತರನ್ನಾಗಿಟ್ಟಿಲ್ಲ,’ ಅಂತ ಕೇಳುತ್ತೇನೆ ಅಂದಾಗ, ಅಲ್ಲಿದ್ದವರೆಲ್ಲ ಗೊಳ್ಳನೆ ನಕ್ಕರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ