ಬಿಜೆಪಿ, ಜೆಡಿಎಸ್ ಮೈತ್ರಿಗೆ ಎಸ್ಟಿ ಸೋಮಶೇಖರ್ ವಿರೋಧ; ಅವರಿಗೆ ಎಲ್ಲಿ ಆನಂದ ಇದೆಯೋ ಅಲ್ಲಿಗೆ ಹೋಗಲಿ ಎಂದ ಕೆಎಸ್ ಈಶ್ವರಪ್ಪ
ಕೇಂದ್ರ ತೆಗೆದುಕೊಂಡ ತೀರ್ಮಾನವನ್ನು ಪ್ರಶ್ನಿಸುವ ಅಧಿಕಾರ ಇಲ್ಲ. ಕೇಂದ್ರದ ನಿರ್ಧಾರಕ್ಕೆ ಎಲ್ಲರೂ ಬದ್ಧ ಇರಬೇಕು ಎಂದು ಶಿವಮೊಗ್ಗದಲ್ಲಿ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ, ಎಸ್ಟಿ ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಶಿವಮೊಗ್ಗ,ಅ.05: ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಎಸ್.ಟಿ.ಸೋಮಶೇಖರ್ ವಿರೋಧ ವಿಚಾರ ‘ ಬೇಕಾದರೆ ನಮ್ಮ ಜೊತೆ ಇರಲಿ, ಬೇಡವಾದರೆ ಹೋಗಲಿ. ಅವರಿಗೆ ಎಲ್ಲಿ ಆನಂದ ಇದೆಯೋ ಅಲ್ಲಿಗೆ ಹೋಗಲಿ ಎನ್ನುವ ಮೂಲಕ ಶಾಸಕ ಎಸ್.ಟಿ.ಸೋಮಶೇಖರ್(ST Somashekar)ಗೆ ಕೆ.ಎಸ್.ಈಶ್ವರಪ್ಪ (K. S. Eshwarappa) ತಿರುಗೇಟು ನೀಡಿದ್ದಾರೆ. ಕೇಂದ್ರ ತೆಗೆದುಕೊಂಡ ತೀರ್ಮಾನವನ್ನು ಪ್ರಶ್ನಿಸುವ ಅಧಿಕಾರ ಇಲ್ಲ. ಕೇಂದ್ರದ ನಿರ್ಧಾರಕ್ಕೆ ಎಲ್ಲರೂ ಬದ್ಧ ಇರಬೇಕು ಎಂದು ಶಿವಮೊಗ್ಗದಲ್ಲಿ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮೈತ್ರಿ ವಿಚಾರದ ಬಗ್ಗೆ ಅಸಮಧಾನ ಹೊರಹಾಕಿದ್ದ ಎಸ್ಟಿ ಸೋಮಶೇಖರ್
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಕುರಿತು ‘ನನಗೂ ವೈಯಕ್ತಿಕವಾಗಿ ಅಸಮಾಧಾನವಿದೆ ಎಂದು ವಿಧಾನಸೌಧದಲ್ಲಿ ಹೇಳಿದ್ದರು. ವೈಯಕ್ತಿಕವಾಗಿ 20 ವರ್ಷದಿಂದ ಸೆಣಸಾಟ ಮಾಡಿಕೊಂಡು ಬಂದಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಜೊತೆ ಮೈತ್ರಿ ನೋಡಿದ್ದೇನೆ. ಯಾವತ್ತೂ ನಮ್ಮ, ಅವರ ಕಾರ್ಯಕರ್ತರಿಗೆ ಹೊಂದಾಣಿಕೆ ಇಲ್ಲ. ಹತ್ತಿರದಿಂದ ಮಾನಸಿಕವಾಗಿ ಕಿರುಕುಳ ನೋಡಿದ್ದೇನೆ. ಅಧಿಕೃತವಾಗಿ ಮೈತ್ರಿಯಾದ ಬಳಿಕ ಮುಂದಿನ ನಿರ್ಧಾರ ಮಾಡುತ್ತೇನೆ ಎಂದು ಅಸಮಧಾನ ಹೊರ ಹಾಕಿದ್ದರು.
ಇದನ್ನೂ ಓದಿ:ಎಸ್ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವದಂತಿ ಬೆನ್ನಲ್ಲೇ ಚುರುಕಾದ ಜೆಡಿಎಸ್; ಕಾರಣವೇನು?
ಕೇವಲ ಹಿಂದೂಗಳ ಮನೆ ಟಾರ್ಗೆಟ್ ಮಾಡಿದ್ದಾರೆ ಎಂದ ಈಶ್ವರಪ್ಪ
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ‘ ಶಿವಮೊಗ್ಗದ ರಾಗಿಗುಡ್ಡಕ್ಕೆ ಬಿಜೆಪಿ ನಾಯಕರ ತಂಡ ಭೇಟಿ ನೀಡಿತ್ತು. ಕಲ್ಲು ತೂರಾಟ ಹಾಗೂ ಹಾನಿ ಬಗ್ಗೆ ಇಲ್ಲಿನ ಜನ ಮಾಹಿತಿ ನೀಡಿದ್ದಾರೆ. ಗಲಾಟೆ ವೇಳೆ ಕೇವಲ ಹಿಂದೂಗಳ ಮನೆ ಟಾರ್ಗೆಟ್ ಮಾಡಿದ್ದು, ಇದಕ್ಕೆ ರಾಜ್ಯ ಸರ್ಕಾರದ ಸಂಪೂರ್ಣ ವೈಫಲ್ಯವೇ ಕಾರಣ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹಿಂದೂಗಳು ಭಯಪಡುವ ಅಗತ್ಯವಿಲ್ಲ, ಅವರ ಜೊತೆ ಬಿಜೆಪಿ ಇದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Thu, 5 October 23