ಚಡ್ಡಿ ಬಗ್ಗೆ ಮಾತನಾಡುವ ಜಮೀರ್ ಅಹ್ಮದ್ ಖಾನ್, ಸಿಟಿ ರವಿ ಜೊತೆ ಚಡ್ಡಿ ಹಾಕಿ ನಿಂತವ್ರಲ್ಲಾ! ಜಮೀರನ್ನ ಹುಟ್ಟಿಸಿದ್ದೇ ಜೆಡಿಎಸ್ ಎಂದ ಚನ್ನಪಟ್ಟಣ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ
ಮುಸ್ಲಿಂ ಹೆಸರೇಳಿ ರಾಜಕೀಯ ಮಾಡ್ತಾ ಇರೋದು ನೀವು. ಚಡ್ಡಿ ಗಿಡ್ಡಿ ಅಂತೆಲ್ಲಾ ಹೇಳಬೇಡಿ. ಜಮೀರ್ ಅವರೇ ನಿಮ್ಮನ್ ಹುಟ್ಟಿಸಿದ್ದೇ ಜೆಡಿಎಸ್. ನಿಮ್ಮ ತಾಯಿನೇ ಜೆಡಿಎಸ್, ಸಿದ್ರಾಮಯ್ಯ ಅವರನ್ನೂ ಹುಟ್ಟಿಸಿದ್ದು ಇದೇ ಜೆಡಿ ಎಸ್ ಪಕ್ಷ. ಇಲ್ದಿದ್ರೆ ಜಮೀರ್ ಬಸ್ ಓಡಿಸಿಕೊಂಡೇ ಇರಬೇಕಿತ್ತು -ಚನ್ನಪಟ್ಟಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮೋರ್ಚಾ ಸೈಯ್ಯದ್ ಫಾಜಿಲ್
ರಾಮನಗರ: ಚನ್ನಪಟ್ಟಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ನಿನ್ನೆ ಬುಧವಾರ ಸೈಯ್ಯದ್ ಫಾಜಿಲ್ ಪತ್ರಿಕಾಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿ ವಿವರ ಹೀಗಿದೆ. ಎನ್ ಆರ್ ಸಿ , ಹಲಾಲ್ ಕಟ್, ಹಿಜಾಬ್ ವಿಚಾರದಲ್ಲಿ ನಮ್ಮ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಮ್ ಜೊತೆ ಇದ್ರು. ಕುಮಾರಸ್ವಾಮಿ ಅವರು ಮುಸ್ಲಿಂ ಪಕ್ಷಕ್ಕೆ ಏನಾದ್ರೂ ದ್ರೋಹ ಮಾಡಿದ್ದಾರಾ? ಅವರೇನು ಬಿಜೆಪಿ ಹೋಗ್ತಾ ಇದ್ದಾರಾ? ಅವರು ಜೆಡಿಎಸ್ ನಲ್ಲೇ ಇದ್ದಾರೆ. ಕಾಂಗ್ರೆಸ್ ನವರು ಬಿಜೆಪಿಗೆ ಹೋಗೇ ಇಲ್ವಾ? ಚನ್ನಪಟ್ಟಣ ವಿಚಾರವಾಗಿ ಕುಮಾರಸ್ವಾಮಿ ಮಾಡಿರುವ ಅಭಿವೃದ್ಧಿ ಯಾರೂ ಮಾಡಿಲ್ಲ.
ಜೆಡಿಎಸ್ ಇಲ್ದಿದ್ರೆ ಜಮೀರ್ ಬಸ್ ಓಡಿಸಿಕೊಂಡೇ ಇರಬೇಕಿತ್ತು…
ಕುಮಾರಸ್ವಾಮಿಯವರು ಚಡ್ಡಿ ಹಾಕ್ತಾರೋ, ಲುಂಗಿ ಹಾಕ್ತಾರೋ ಬೇ್ರೆಯರಿಗೆ ಯಾಕೆ? ಸಿ ಟಿ ರವಿ ಜತೆ ಜಮೀರ್ ಅಹ್ಮದ್ ಚಡ್ಡಿ ಹಾಕಿ ನಿಂತಿದ್ದಾರಲ್ಲ! 2006 ರಲ್ಲಿ ಅವರ ಜತೆನೇ ಇದ್ದೀರಲ್ಲ. ರಾಜ್ಯದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಬದುಕ್ತಾ ಇದ್ದೀವಿ. ಕುಮಾರಸ್ವಾಮಿ ಯವರು ನಮಗೆ ಯಾವತ್ತೂ ಬೇಜಾರ್ ಮಾಡಿಲ್ಲ. ನಾವು ತೋಟಕ್ಕೆ ಹೋದಗಲೆಲ್ಲಾ ಸಿಕ್ತಾರೆ. ಯಾವಾಗ ಬೇಕಾದ್ರೂ ಹೋಗಲಿ ಅವರು ನಮಗೆ ಸಿಕ್ತಾರೆ. ಮುಸ್ಲಿಂ ಹೆಸರೇಳಿ ರಾಜಕೀಯ ಮಾಡ್ತಾ ಇರೋದು ನೀವು. ಚಡ್ಡಿ ಗಿಡ್ಡಿ ಅಂತೆಲ್ಲಾ ಹೇಳಬೇಡಿ. ಜಮೀರ್ ಅವರೇ ನಿಮ್ಮನ್ ಹುಟ್ಟಿಸಿದ್ದೇ ಜೆಡಿಎಸ್. ನಿಮ್ಮ ತಾಯಿನೇ ಜೆಡಿಎಸ್, ಸಿದ್ರಾಮಯ್ಯ ಅವರನ್ನೂ ಹುಟ್ಟಿಸಿದ್ದು ಇದೇ ಜೆಡಿ ಎಸ್ ಪಕ್ಷ. ಇಲ್ದಿದ್ರೆ ಜಮೀರ್ ಬಸ್ ಓಡಿಸಿಕೊಂಡೇ ಇರಬೇಕಿತ್ತು. ಕುಮಾರಸ್ವಾಮಿ ಯವರು ಎಲ್ಲಿ ಹೋಗ್ತಾರೆ ಅನ್ನೋದೇ ಗೊತ್ತಿಲ್ಲ. ನಾವು ಕುಮಾರಸ್ವಾಮಿ ಯವರಿಗೆ ಬೆಂಬಲ ಕೊಡ್ತೀವಿ ಎಂದು ಸೈಯ್ಯದ್ ಫಾಜಿಲ್ ಹೇಳಿದರು.