Village Accountant: ನೇಮಕವಾಗಿ 3 ತಿಂಗಳಾದರೂ ಕೆಲ್ಸಕ್ಕೆ ಬಾರದ ಮಹಿಳಾ ಅಧಿಕಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ

Village Accountant: ನೇಮಕವಾಗಿ 3 ತಿಂಗಳಾದರೂ ಕೆಲ್ಸಕ್ಕೆ ಬಾರದ ಮಹಿಳಾ ಅಧಿಕಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
| Updated By: ಸಾಧು ಶ್ರೀನಾಥ್​

Updated on: Oct 05, 2023 | 7:59 PM

ಗ್ರಾಮ ಲೆಕ್ಕಾಧಿಕಾರಿಯಾಗಿ VA ನೇಮಕಗೊಂಡು 3 ತಿಂಗಳಾದ್ರು ಕೆಲಸಕ್ಕೆ ಬಾರದ ಅಧಿಕಾರಿ. ಕಡೂರು ತಾಲೂಕಿನ ಮುತ್ತಣೆಗೆರೆ ಗ್ರಾಮ ಲೆಕ್ಕಾಧಿಕಾರಿಯಾಗಿ ನೇಮಕಗೊಂಡಿರುವ ದೀಪಾ. ನಾಡ ಕಚೇರಿಗೆ ತೆರಳಿ ಮಹಿಳಾ ಗ್ರಾಮ ಲೆಕ್ಕಾಧಿಕಾರಿಗೆ ಗ್ರಾಮಸ್ಥರ ಹಿಗ್ಗಾಮುಗ್ಗಾ ಕ್ಲಾಸ್.

ಗ್ರಾಮ ಲೆಕ್ಕಾಧಿಕಾರಿಯಾಗಿ (Village Accountant -VA) ನೇಮಕವಾಗಿ 3 ತಿಂಗಲೇ ಆಗಿದ್ದರೂ ಕೆಲಸಕ್ಕೆ ಬಾರದ ಮಹಿಳಾ ಅಧಿಕಾರಿ. ಚಿಕ್ಕಮಗಳೂರು ಜಿಲ್ಲೆ (Chikkamagaluru district) ಕಡೂರು (Kadur) ತಾಲೂಕಿನ ಮುತ್ತಣೆಗೆರೆ (Muttanegere) ಗ್ರಾಮ ಲೆಕ್ಕಾಧಿಕಾರಿಯಾಗಿ ನೇಮಕಗೊಂಡಿರುವ ದೀಪಾ ಅವರೇ ಈ ಕಥಾನಕದ ನಾಯಕಿ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ನಾಡ ಕಚೇರಿಗೆ ತೆರಳಿ ಮಹಿಳಾ ಗ್ರಾಮ ಲೆಕ್ಕಾಧಿಕಾರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಪಂಚನಹಳ್ಳಿ ನಾಡ ಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ಕ್ಲಾಸ್ ತೆಗೆದುಕೊಂಡ ಗ್ರಾಮಸ್ಥರು. ನೇಮಕಗೊಂಡ ದಿನದಿಂದ ದೀಪಾ ಕಚೇರಿಗೆ ಆಗಮಿಸಿರಲಿಲ್ಲ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us