ಪ್ರದೀಪ್ ಈಶ್ವರ್ ಬಿಗ್ ಬಾಸ್ಗೆ ಹೋಗಿದ್ದು ಯಾಕೆ? ಸ್ವತಃ ಉತ್ತರಿಸಿದ ಚಿಕ್ಕಬಳ್ಳಾಪುರ ಶಾಸಕ
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋಗೆ ಎಂಟ್ರಿ ನೀಡಿದ್ದು ಸಖತ್ ಚರ್ಚೆ ಹುಟ್ಟು ಹಾಕಿತ್ತು. ಅವರು ಸ್ಪರ್ಧಿಯಾಗಿ ತೆರಳಿದ್ದಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ಅದು ನಿಜವಲ್ಲ. ತಾವು ಬೇರೆ ಉದ್ದೇಶ ಇಟ್ಟುಕೊಂಡು ದೊಡ್ಮನೆಗೆ ತೆರಳಿದ್ದಾಗಿ ಅವರು ಹೇಳಿದ್ದಾರೆ.
ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರು ಏನೇ ಮಾಡಿದರೂ ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಹಾಗೆಯೇ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದು ಕೂಡ ಸಖತ್ ಚರ್ಚೆ ಹುಟ್ಟು ಹಾಕಿತ್ತು. ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ರಿಯಾಲಿಟಿ ಶೋಗೆ ಅವರು ಸ್ಪರ್ಧಿಯಾಗಿ ತೆರಳಿದ್ದಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ಅದು ನಿಜವಲ್ಲ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಆಗಿರುವ ಪ್ರದೀಪ್ ಈಶ್ವರ್ ಅವರು ಬೇರೆಯದೇ ಉದ್ದೇಶ ಇಟ್ಟುಕೊಂಡು ದೊಡ್ಮನೆಗೆ ತೆರಳಿದ್ದರು. ಆ ಬಗ್ಗೆ ಅವರೇ ಮಾತನಾಡಿದ್ದಾರೆ. ‘ಬಿಗ್ ಬಾಸ್ (Bigg Boss Kannada) ಎಂಬುದು ಒಂದು ದೊಡ್ಡ ವೇದಿಕೆ. ಕೇವಲ ಮೂರು ಗಂಟೆ ಮಾತ್ರ ನಾನು ಬರುತ್ತೇನೆ ಅಂತ ಅವರಿಗೆ ಹೇಳಿದ್ದೆ. ಕರುನಾಡಿನ ಯುವ ಜನರನ್ನು ಮೋಟಿವೇಟ್ ಮಾಡಲು ನಾನು ಅಲ್ಲಿಗೆ ತೆರಳಿದ್ದೆ. ಚಿಕ್ಕ ವಯಸ್ಸಿನಲ್ಲಿ ಪೋಷಕರನ್ನು ಕಳೆದುಕೊಂಡ ನಾನು ತಂದೆ-ತಾಯಿಯ ಮಹತ್ವವನ್ನು ತಿಳಿಸಿ ಹೇಳಲು ಬಿಗ್ ಬಾಸ್ಗೆ ಹೋದೆ’ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.