Pradeep Eshwar: ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ಗೆ ಬಂದಿದ್ದರ ಹಿಂದಿನ ಅಸಲಿ ಟ್ವಿಸ್ಟ್ ಬಹಿರಂಗ
Bigg Boss Kannada: ಬಿಗ್ ಬಾಸ್ ಮನೆಗೆ ಪ್ರದೀಪ್ ಈಶ್ವರ್ ಬಂದಿದ್ದರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗಿದೆ. ಶಾಸಕ ಆಗಿರುವುದರಿಂದ ಅವರು ಇಂಥ ಶೋಗೆ ಬಂದಿದ್ದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದುಂಟು. ಅವರು ನಿಜವಾಗಿಯೂ ಸ್ಪರ್ಧಿಸುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ಕೆಲವರಿಗೆ ಅನುಮಾನ ಮೂಡಿತ್ತು. ಆ ಬಗ್ಗೆ ಈಗ ಸ್ಪಷ್ಟ ಚಿತ್ರಣ ಸಿಕ್ಕಿದೆ.
ಒಂದು ದಿನ ತಡವಾಗಿ ಪ್ರದೀಪ್ ಈಶ್ವರ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ಶೋಗೆ ಎಂಟ್ರಿ ನೀಡಿದರು. ‘ನಾನು ಈ ಶೋನಲ್ಲಿ ಸ್ಪರ್ಧಿಸುತ್ತಿರುವುದು ಖುಷಿ ನೀಡಿದೆ’ ಎಂದು ಅವರು ಮನೆಯೊಳಗೆ ಬಂದ ಕೂಡಲೇ ಹೇಳಿದರು. ಆದರೆ ಅವರು ಬಂದಿರುವುದು ಸ್ಪರ್ಧಿಯಾಗಿ ಅಲ್ಲ ಎಂಬುದು ಈಗ ಬಹಿರಂಗ ಆಗಿದೆ. ತಾವು ಕೇವಲ ಅತಿಥಿಯಾಗಿ ಬಂದಿರುವುದು ಎಂದು ಪ್ರದೀಪ್ ಈಶ್ವರ್ (Pradeep Eshwar) ಹೇಳಿದ್ದಾರೆ. ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಆಗಿರುವುದರಿಂದ ಬಿಗ್ ಬಾಸ್ಗೆ ಬಂದಿದ್ದರ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದುಂಟು. ಆದರೆ ಈಗ ಅಸಲಿ ವಿಷಯ ಏನು ಎಂಬುದನ್ನು ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ರಿವೀಲ್ ಮಾಡಲಾಗಿದೆ.
‘ತಮಾಷೆಗೆ ಮಾಡಿದ ಪ್ರ್ಯಾಂಕ್ ಇದು. ನೀವು ಮೊದಲ ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಬಂದಿದ್ದೀರಿ’ ಎಂದು ಪ್ರದೀಪ್ ಈಶ್ವರ್ಗೆ ಬಿಗ್ ಬಾಸ್ ಹೇಳಿದರು. ಅದನ್ನು ಕೇಳಿದ ಬಳಿಕ ಸ್ಪರ್ಧಿಗಳಿಗೆ ಅಚ್ಚರಿ ಆಯಿತು. ಪ್ರದೀಪ್ ಈಶ್ವರ್ ಬಂದಿದ್ದಾರೆ ಎಂದಾಗ ಕೆಲವು ಅಭ್ಯರ್ಥಿಗಳಿಗೆ ಶಾಕ್ ಆಗಿತ್ತು. ಆದರೆ ಇನ್ನೂ ಕೆಲವರಿಗೆ ಅನುಮಾನ ಮೂಡಿತ್ತು. ಹಾಲಿ ಶಾಸಕರು ಹೀಗೆಲ್ಲ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಅನೇಕರು ಊಹಿಸಿದರು. ಅದು ನಿಜವಾಗಿದೆ.
ಇದನ್ನೂ ಓದಿ: Tukali Santhosh: ‘ತುಕಾಲಿ ಅಂತ ಕರೆಯೋದು ಸರಿ ಎನಿಸುತ್ತಿಲ್ಲ’; ಸಂತೋಷ್ ಹೆಸರಿಗೆ ಬಿಗ್ ಬಾಸ್ ತಕರಾರು
ರಾಜಕಾರಣಿ ಆಗಿ ಅಲ್ಲದೇ ಮೋಟಿವೇಷನಲ್ ಸ್ಪೀಕರ್ ಆಗಿ ಪ್ರದೀಪ್ ಈಶ್ವರ್ ಅವರು ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಅವರು ಅದೇ ಕೆಲಸ ಮಾಡಿದ್ದಾರೆ. ಎಲ್ಲ ಸ್ಪರ್ಧಿಗಳನ್ನು ಎದುರುಗಡೆ ಕೂರಿಸಿಕೊಂಡು ಪ್ರೇರಣೆಯ ಮಾತುಗಳನ್ನು ಹೇಳಿದ್ದಾರೆ. ‘ಇಲ್ಲಿ ಇರುವ ಯಾವ ಸ್ಪರ್ಧಿಗಳ ಬಗ್ಗೆ ನಿಮಗೆ ಒಳ್ಳೆಯ ಮತ್ತು ಕೆಟ್ಟ ಇಂಪ್ರೆಷನ್ ಇದೆ’ ಎಂದು ಪ್ರಶ್ನೆ ಕೇಳಿ ಎಲ್ಲರಿಂದ ಉತ್ತರ ಪಡೆದುಕೊಂಡರು. ಪ್ರದೀಪ್ ಈಶ್ವರ್ ಅವರು ಬಂದಿದ್ದಕ್ಕೆ ತುಕಾಲಿ ಸಂತೋಷ್ ಅವರು ಹೆಚ್ಚು ಖುಷಿಪಟ್ಟರು. ‘ನಾನು ಕೂಡ ನಿಮ್ಮ ಊರಿನವರೇ’ ಎಂದು ಸಿರಿ ಅವರು ಹೇಳಿದ್ದಕ್ಕೆ, ‘ಓಹ್.. ನೀವು ನಮ್ಮ ಮತದಾರರು’ ಎಂದು ಪ್ರದೀಪ್ ಈಶ್ವರ್ ನಮಸ್ಕಾರ ಮಾಡಿದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನೈಜೀರಿಯಾ ಕನ್ನಡಿಗ ಮೈಕೆಲ್ ಅಜಯ್; ಏನು ಇವರ ಹಿನ್ನೆಲೆ?
ಬಿಗ್ ಬಾಸ್ ಆಟ ಈಗಷ್ಟೇ ಆರಂಭ ಆಗಿದೆ. ಈಗತಾನೇ ಟಾಸ್ಕ್ಗಳನ್ನು ನೀಡಲು ಪ್ರಾರಂಭಿಸಲಾಗಿದೆ. ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳಲು ಆರಂಭಿಸಿದ್ದಾರೆ. ದಿನ ಕಳೆದಂತೆ ದೊಡ್ಮನೆಯ ವಾತಾವರಣ ಬದಲಾಗಲಿದೆ. ಇದು 10ನೇ ಸೀಸನ್ ಆದ್ದರಿಂದ ಈ ಬಾರಿ ಸಾಕಷ್ಟು ವಿಶೇಷತೆಗಳು ಇವೆ. ಹೊಸ ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಈ ಶೋ ಉಚಿತವಾಗಿ ಪ್ರಸಾರ ಕಾಣುತ್ತಿದೆ. ಕಿಚ್ಚ ಸುದೀಪ್ ಅವರ ನಿರೂಪಣೆ ಎಲ್ಲರಿಗೂ ಇಷ್ಟ ಆಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.