AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ‘ಮೋಟಿವೇಟ್​ ಮಾಡುವ ಪ್ರತಿಯೊಬ್ಬನೂ ಸಾಚಾ ಎಂದುಕೊಳ್ತಾನೆ’: ಪ್ರದೀಪ್​ ಈಶ್ವರ್​ ವಿಡಿಯೋ ವೈರಲ್​

Pradeep Eshwar Viral Video: ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ಕ್ಕೆ ಪ್ರದೀಪ್​ ಈಶ್ವರ್​ ಅವರು ಪ್ರವೇಶ ಪಡೆದಿದ್ದಾರೆ. ಒಂದು ದಿನ ತಡವಾಗಿ ಅವರು ಬಿಗ್ ಬಾಸ್​ ಮನೆಯೊಳಗೆ ಕಾಲಿಟ್ಟಿದ್ದಾರೆ. ದೊಡ್ಮನೆಗೆ ಬರುತ್ತಿದ್ದಂತೆಯೇ ಅವರು ಮೋಟಿವೇಷನ್​ ಸ್ಪೀಚ್​ ಶುರುಮಾಡಿಕೊಂಡಿದ್ದಾರೆ. ಅದನ್ನು ನೋಡಿದ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

Bigg Boss Kannada: ‘ಮೋಟಿವೇಟ್​ ಮಾಡುವ ಪ್ರತಿಯೊಬ್ಬನೂ ಸಾಚಾ ಎಂದುಕೊಳ್ತಾನೆ’: ಪ್ರದೀಪ್​ ಈಶ್ವರ್​ ವಿಡಿಯೋ ವೈರಲ್​
ಪ್ರದೀಪ್​ ಈಶ್ವರ್​
ಮದನ್​ ಕುಮಾರ್​
|

Updated on: Oct 09, 2023 | 5:33 PM

Share

ಎಲ್ಲ ವರ್ಗದ ಜನರಿಗೂ ಬಿಗ್​ ಬಾಸ್​ (Bigg Boss Kannada) ರಿಯಾಲಿಟಿ ಶೋನಲ್ಲಿ ಅವಕಾಶ ಸಿಗುತ್ತದೆ. ರಾಜಕಾರಣಿಗಳೂ ಇದಕ್ಕೆ ಹೊರತಾಗಿಲ್ಲ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್​ ಈಶ್ವರ್​ (Pradeep Eshwar) ಅವರು ಬಿಗ್​ ಬಾಸ್​ ಮನೆಗೆ ಕಾಲಿಟ್ಟಿರುವುದೇ ಇದಕ್ಕೆ ಸಾಕ್ಷಿ. ಸೋಶಿಯಲ್ ಮೀಡಿಯಾದಲ್ಲಿ ಪ್ರದೀಪ್​ ಈಶ್ವರ್​ ಅವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ಅವರು ವೇದಿಕೆಯಲ್ಲಿ ಮಾಡಿದ ಮಾತುಗಳು ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತವೆ. ‘ಬಿಗ್ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ರಿಯಾಲಿಟಿ ಶೋನಲ್ಲೂ ಅದು ಮುಂದುವರಿದಿದೆ. ಎಂಟ್ರಿಯಾದ ಮೊದಲ ದಿನವೇ ಪ್ರದೀಪ್​ ಈಶ್ವರ್ ಅವರು ಮೋಟಿವೇಷನಲ್​ ಸ್ಪೀಚ್​ ನೀಡಿದ್ದಾರೆ. ಅದರ ಪ್ರೋಮೋ ವೈರಲ್​ ಆಗಿದೆ.

ಹೊಸ ತಲೆಮಾರಿನ ಯುವಜನತೆಯನ್ನು ಮೋಟಿವೇಟ್​ ಮಾಡಲು ಪ್ರದೀಪ್​ ಈಶ್ವರ್​ ಪ್ರಯತ್ನಿಸುತ್ತಾರೆ. ಯುವಕ-ಯುವತಿಯರಿಗೆ ಜೀವನದ ಪಾಠ ಹೇಳಿಕೊಡಲು ಅವರು ಭಾಷಣಗಳನ್ನು ಮಾಡುತ್ತಾರೆ. ಶಾಸಕರಾದ ಬಳಿಕ ಅವರಿಗೆ ಭಾರಿ ಜನಪ್ರಿಯತೆ ಸಿಕ್ಕಿತು. ಟ್ರೋಲ್​ ಪೇಜ್​ಗಳಲ್ಲಿ ಪ್ರದೀಪ್​ ಈಶ್ವರ್​ ಅವರ ವಿಡಿಯೋಗಳು ಹರಿದಾಡಲು ಆರಂಭಿಸಿದವು. ಬಹುತೇಕರು ಅವರ ಮಾತುಗಳನ್ನು ಒಪ್ಪುತ್ತಾರೆ. ಅನೇಕ ವೇದಿಕೆಗಳಲ್ಲಿ ಪ್ರದೀಪ್​ ಈಶ್ವರ್​ ಹೇಳಿದ ಪಂಚಿಂಗ್​ ಡೈಲಾಗ್​ಗಳಿಗೆ ಚಪ್ಪಾಳೆ ಸಿಕ್ಕಿದೆ.

ಇದನ್ನೂ ಓದಿ: Pradeep Eshwar : ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್​ ಬಿಗ್​ ಬಾಸ್​ಗೆ ಹೋಗಿದ್ದು ಸರಿಯೇ?

ಪ್ರದೀಪ್​ ಈಶ್ವರ್​ ಅವರು ಒಂದು ದಿನ ತಡವಾಗಿ ಬಿಗ್ ಬಾಸ್​ ಮನೆಯನ್ನು ಪ್ರವೇಶಿಸಿದ್ದಾರೆ. ‘ನಾನು ನಿನ್ನೆಯೇ ಬರಬೇಕಾಗಿತ್ತು. ಸ್ಪರ್ಧಿಯಾಗಿ ಇಲ್ಲಿಗೆ ಬಂದಿದ್ದಕ್ಕೆ ನನಗೆ ಬಹಳ ಖುಷಿ ಆಯಿತು. ನಾವೆಲ್ಲ ಬೆಂಗಳೂರಿಗೆ ಸೋಲೋಕೆ ಬಂದವರು. ಗೆಲ್ಲುವುದು ನಮಗೆ ಕಾಂಪ್ಲಿಮೆಂಟರಿ’ ಎಂದು ಹೇಳುತ್ತಲೇ ಅವರು ಮೋಟಿವೇಷನ್​ ಶುರು ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ಪ್ರೊಮೋಗೆ ಜನರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಈ ಶೋ ಉಚಿತವಾಗಿ 24 ಗಂಟೆಯೂ ಪ್ರಸಾರ ಆಗುತ್ತಿದೆ.

‘ಇಲ್ಲಿ ಏನಾಗುತ್ತಿದೆ ಅಂದರೆ, ಮೋಟಿವೇಟ್​ ಮಾಡುವ ಪ್ರತಿಯೊಬ್ಬನೂ ಸಾಚಾ ಎಂದುಕೊಳ್ಳುತ್ತಿದ್ದಾನೆ. ಈ ಜನರೇಷನ್​ ಅನ್ನು ನಾವು ಸರಿಯಾಗಿ ಮೋಟಿವೇಟ್​ ಮಾಡುತ್ತಿಲ್ಲ. ತಪ್ಪಾಗಿ ಮೋಟಿವೇಟ್​ ಮಾಡುತ್ತಿದ್ದೇವೆ. ಏಣಿ ಹತ್ತುವುದೇ ಕಷ್ಟ ಅಂತ ದೊಡ್ಡವರು ಹೇಳಿಕೊಡ್ತಾರೆ. ಹೇಗೋ ಏಣಿ ಹತ್ತುತ್ತೀಯ. ಆದರೆ ತುದಿಯಲ್ಲಿ ನಿಂತುಕೊಳ್ಳುವುದು ಇನ್ನೂ ಕಷ್ಟ ಅಂತ ಕೆಲವರು ಹೇಳುತ್ತಾರೆ. ನಮ್ಮ ಜನರೇಷನ್​ಗೆ ಏಣಿಯೇ ಸಿಕ್ತಾ ಇಲ್ಲ ಬಾಸ್​’ ಎಂದು ಪ್ರದೀಪ್​ ಈಶ್ವರ್​ ಹೇಳಿರುವುದು ಬಿಗ್​ ಬಾಸ್​ ಪೋಮೋದಲ್ಲಿ ಹೈಲೈಟ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್