Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ಪಬ್ಲಿಸಿಟಿ ಬೇಕಷ್ಟೆ’; ಸುದೀಪ್ ಎದುರು ಟ್ರೋಲ್ ಬಗ್ಗೆ ಮಾತನಾಡಿದ ಬುಲೆಟ್ ಪ್ರಕಾಶ್ ಮಗ ರಕ್ಷಕ್

‘ಹೆಚ್ಚು ಜನರಿಗೆ ರೀಚ್ ಆಗಬೇಕು. ಯಾವುದೂ ನನಗೆ ನೆಗೆಟಿವ್ ಎನಿಸಿಲ್ಲ. ನನಗೆ ಪಬ್ಲಿಸಿಟಿ ಬೇಕು ಅಷ್ಟೇ. ನಾನು ಏನೇ ಮಾಡಿದರೂ ಮಾತನಾಡುತ್ತಾರೆ’ ಎಂದರು ರಕ್ಷಕ್.

‘ನನಗೆ ಪಬ್ಲಿಸಿಟಿ ಬೇಕಷ್ಟೆ’; ಸುದೀಪ್ ಎದುರು ಟ್ರೋಲ್ ಬಗ್ಗೆ ಮಾತನಾಡಿದ ಬುಲೆಟ್ ಪ್ರಕಾಶ್ ಮಗ ರಕ್ಷಕ್
ರಕ್ಷಕ್
Follow us
ರಾಜೇಶ್ ದುಗ್ಗುಮನೆ
|

Updated on:Oct 09, 2023 | 12:30 PM

ರಕ್ಷಕ್ ಬುಲೆಟ್ (Rakshak Bullet) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ಕ್ಕೆ ಎಂಟ್ರಿ ನೀಡಿದ್ದಾರೆ. ಅವರು ‘ಗುರು ಶಿಷ್ಯರು’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ. ಬುಲೆಟ್ ಪ್ರಕಾಶ್ ಮಗ ಎನ್ನುವ ಕಾರಣಕ್ಕೆ ರಕ್ಷಕ್​ಗೆ ಜನಪ್ರಿಯತೆ ಸಿಕ್ಕಿತು. ಅವರು ತಮ್ಮ ಬಗ್ಗೆ ಬಡಾಯಿ ಕೊಚ್ಚಿಕೊಂಡು ಟ್ರೋಲ್ ಆಗಿದ್ದರು. ಈಗ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ಹೋಗುವುದಕ್ಕೂ ಮೊದಲು ಸುದೀಪ್ ಈ ಬಗ್ಗೆ ಕೇಳಿದ್ದರು. ಎಲ್ಲದಕ್ಕೂ ಅವರು ನೇರ ಉತ್ತರ ನೀಡಿದ್ದಾರೆ.

‘ನನ್ನ ನಿಜವಾದ ಮಖ ತೋರಿಸಬೇಕು. ನನ್ನ ಬಗ್ಗೆ ನೆಗೆಟಿವ್ ವಿಚಾರಗಳನ್ನು ಹರಡಿದರು. ನೆಗೆಟಿವ್ ಹಾಗೂ ಪಾಸಿಟಿವಿಟಿ ಇದ್ದಾಗ ಮಾತ್ರ ಜೀವನ ನಡೆಸೋಕೆ ಸಾಧ್ಯ. ಜೀವನದಲ್ಲಿ ಏನೇ ಬಂದರೂ ಮುಂದಕ್ಕೆ ಹೋಗುತ್ತೇನೆ. ರಕ್ಷಕ್ ಹೇಗಿರ್ತಾನೆ ಅನ್ನೋದು ಜನಕ್ಕೆ ಗೊತ್ತಾಗಬೇಕು’ ಎಂದರು ರಕ್ಷಕ್.

‘ನಿಮ್ಮ ಬಗ್ಗೆ ನೆಗೆಟಿವ್ ಯಾಕೆ’ ಎಂದು ಕೇಳಿದರು ಸುದೀಪ್. ‘ನನಗೂ ಶಾಕ್ ಆಯಿತು. ನೆಗೆಟಿವ್ ಯಾಕೆ ಅನ್ನೋದು ಗೊತ್ತಿಲ್ಲ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ. ಪಬ್ಲಿಸಿಟಿಯಲ್ಲಿರಬೇಕು. ನನಗೆ ಬೇಗ ಕೋಪ ಬರುತ್ತದೆ. ಒಂದೊಳ್ಳೆಯ ಜರ್ನಿ ಮಾಡಬೇಕು ಎಂದು ಬಂದಿದ್ದೀನಿ’ ಎಂದಿದ್ದಾರೆ ರಕ್ಷಕ್. ‘ನಿಮ್ಮ ಸುತ್ತ ಒಂದು ಗ್ಯಾಂಗ್ ಇರುತ್ತದೆ ಎನ್ನುವ ಮಾತಿದೆಯಲ್ಲ’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಇದಕ್ಕೆ ರಕ್ಷಕ್ ಉತ್ತರಿಸಿದ್ದಾರೆ. ‘ಗ್ಯಾಂಗ್ ಅಂತ ಏನೂ ಇಲ್ಲ. ಓರ್ವ ಹುಡುಗ ಕಾರು ಓಡಿಸ್ತಾನೆ. ಮತ್ತೋರ್ವ ಜೊತೆಗಿರ್ತಾನೆ ಅಷ್ಟೇ. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಜನರು ಮುತ್ತಿಕೊಳ್ತಾರೆ. ಅಪ್ಪನ ಪ್ರೀತಿಸುವ ವರ್ಗ ನನಗೂ ಪ್ರೀತಿ ತೋರಿಸುತ್ತಿದೆ. ಅಪ್ಪನ ಮಿಸ್ ಮಾಡಿಕೊಳ್ತಾ ಇರ್ತೀನಿ’ ಎಂದು ಭಾವುಕರಾದರು ಅವರು.

‘ನಮ್ಮ ಕೆಲಸನ ನಾವು ಮಾಡಬೇಕು. ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿದ್ದೀನಿ. ಟ್ರೋಲ್ ಆಗಿರುವುದಕ್ಕೆ ನಾನು ಮನೆ ಒಳಗೆ ಹೋಗ್ತಿಲ್ಲ. ನನ್ನನ್ನು ನಾನು ಪ್ರೂವ್ ಮಾಡಿಕೊಂಡಿದ್ದಕ್ಕೆ ಹೋಗ್ತಾ ಇದ್ದೀನಿ. ಹೆಚ್ಚು ಜನರಿಗೆ ರೀಚ್ ಆಗಬೇಕು. ಯಾವುದೂ ನನಗೆ ನೆಗೆಟಿವ್ ಎನಿಸಿಲ್ಲ. ನನಗೆ ಪಬ್ಲಿಸಿಟಿ ಬೇಕು ಅಷ್ಟೇ. ನಾನು ಏನೇ ಮಾಡಿದರೂ ಮಾತನಾಡುತ್ತಾರೆ’ ಎಂದರು ರಕ್ಷಕ್.

ಇದನ್ನೂ ಓದಿ: ಬಿಗ್ ಬಾಸ್ ಮನೆ ಸೇರಿದ 17 ಸ್ಪರ್ಧಿಗಳ ಫೋಟೋ ಹಾಗೂ ವಿವರ ಇಲ್ಲಿದೆ ನೋಡಿ..

ಈ ಬಾರಿ ಬಿಗ್ ಬಾಸ್ ಮನೆ ಒಳಗೆ ಹೋಗಬೇಕು ಎಂದರೆ ಅಲ್ಲಿದ್ದ ಪ್ರೇಕ್ಷಕರಿಂದ ಕನಿಷ್ಠ 80ರಷ್ಟು ಓಟಿಂಗ್ ಪಡೆಯಬೇಕಿತ್ತು. ಆದರೆ, ರಕ್ಷಕ್​ಗೆ ಸಿಕ್ಕಿದ್ದು ಕೇವಲ 53 ಪರ್ಸೆಂಟ್. ಈ ಕಾರಣಕ್ಕೆ ಅವರನ್ನು ಹೋಲ್ಡ್​ನಲ್ಲಿ ಇಟ್ಟಿದ್ದರು. ಆ ಬಳಿಕ ಅವರನ್ನು ಒಳಗೆ ಕಳುಹಿಸಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:12 am, Mon, 9 October 23