ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಸ್ಥಿತಿ ಅತಂತ್ರ: ಆರು ಜನರ ಹಣೆ ಬರಹ ನಿರ್ಧರಿಸಲಿರುವ ಬಿಗ್​ಬಾಸ್

Bigg Boss 10: ಅತಂತ್ರ ಸ್ಥಿತಿಯಲ್ಲಿರುವ ಡ್ರೋನ್ ಪ್ರತಾಪ್, ರಕ್ಷಕ್ ಬುಲೆಟ್ ಹಾಗೂ ಇನ್ನೂ ನಾಲ್ಕು ಜನ ಅಂತೂ ಇಂತು ಬಿಗ್​ಬಾಸ್​ ಮನೆ ಪ್ರವೇಶಿಸಿದ್ದು, ಅವರ ಭವಿಷ್ಯ ಸ್ವತಃ ಬಿಗ್​ಬಾಸ್ ಕೈಯಲ್ಲಿದೆ.

ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಸ್ಥಿತಿ ಅತಂತ್ರ: ಆರು ಜನರ ಹಣೆ ಬರಹ ನಿರ್ಧರಿಸಲಿರುವ ಬಿಗ್​ಬಾಸ್
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 09, 2023 | 6:36 AM

ಬಿಗ್​ಬಾಸ್ (Bigg Boss) ಕನ್ನಡ ಸೀಸನ್ 10 ಅಕ್ಟೋಬರ್ 8ರಂದು ಪ್ರಸಾರ ಆರಂಭಿಸಿದೆ. ಬಿಗ್​ಬಾಸ್ ಸ್ಪರ್ಧಿಗಳನ್ನು ಚಾನೆಲ್​ನವರು ಆರಿಸುವ ಪರಿಪಾಠ ಇತ್ತು. ಇದೇ ಪರಿಪಾಠ ಈ ಬಾರಿಯೂ ಮುಂದುವರೆದಿದೆಯಾದರೂ ಇದಕ್ಕೆ ಸಣ್ಣ ಟ್ವಿಸ್ಟ್ ಸೇರಿಸಲಾಗಿದೆ. ಹೀಗೆ ಆಯ್ಕೆ ಆಗಿ ಬಿಗ್​ಬಾಸ್ ವೇದಿಕೆಗೆ ಬರುವ ಸ್ಪರ್ಧಿಗಳನ್ನು ಬಿಗ್​ಬಾಸ್ ಮನೆಯ ಒಳಗೆ ಕಳಿಸುವ ಅಧಿಕಾರ ಕಾರ್ಯಕ್ರಮದಲ್ಲಿ ಹಾಜರಿದ್ದ ವೀಕ್ಷಕರಿಗೆ ನೀಡಲಾಗಿತ್ತು. ವೀಕ್ಷಕರು ಮತ ಹಾಕಿದ ಸ್ಪರ್ಧಿಗಳಷ್ಟೆ ಬಿಗ್​ಬಾಸ್ ಮನೆಯೊಳಗೆ ಎಂಟ್ರಿ ಪಡೆದರು. ಮತ ಗಳಿಸದವರು ತಮ್ಮ ಮನೆಗೆ ವಾಪಸ್ಸಾದರು. ಅರ್ಧಂಬರ್ಧ ಮತ ಗಳಿಸಿದವರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ಶೇಕಡ 80ಕ್ಕೂ ಹೆಚ್ಚು ಮತಗಳನ್ನು ಗಳಿಸಿದ ಸ್ಪರ್ಧಿಗಳಿಗೆ ಬಿಗ್​ಬಾಸ ಮನೆಯ ಒಳಕ್ಕೆ ಹೋಗುವ ಅವಕಾಶ ಲಭಿಸುತ್ತಿತ್ತು. ಯಾರಿಗೆ 40ಕ್ಕೂ ಕಡಿಮೆ ಮತಗಳು ಬರುತ್ತವೆಯೋ ಅವರು ವಾಪಸ್ ತಮ್ಮ ಮನೆಗೆ ಹೋಗಬೇಕಿತ್ತು. ಯಾರಿಗೆ 80ಕ್ಕಿಂತಲೂ ಕಡಿಮೆ, 40ಕ್ಕಿಂತಲೂ ಹೆಚ್ಚು ಮತಗಳು ಬರುತ್ತವೆಯೋ ಅವರು ಬಿಗ್​ಬಾಸ್​ನ ನಿರ್ಣಯಕ್ಕಾಗಿ ಕಾಯಬೇಕಿತ್ತು. ಈ ರೀತಿಯ ಹೊಸ ವ್ಯವಸ್ಥೆಯನ್ನು ಈ ಬಾರಿ ಪರಿಚಯಿಸಲಾಗಿತ್ತು.

ಇದನ್ನೂ ಓದಿ:ಟ್ರೋಲ್​ ಆದ ಬಿಗ್​ ಬಾಸ್​ ಸ್ಪರ್ಧಿಗಳ ಬಗ್ಗೆ ಪ್ರಶ್ನೆ: ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್​ ಗರಂ

ಡ್ರೋನ್ ಪ್ರತಾಪ್, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ನಟಿ ತನಿಷಾ, ‘777 ಚಾರ್ಲಿ’ ನಟಿ ಸಂಗೀತಾ, ಹಳ್ಳಿಕಾರ್ ತಳಿ ರಕ್ಷಕ, ರೈ ಹಳ್ಳಿಕಾರ್ ಸಂತೋಶ್, ಹಲವು ಧಾರಾವಾಹಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ‘ಡೊಳ್ಳು’ ಸಿನಿಮಾದಲ್ಲಿ ನಟಿಸಿರುವ ಕಾರ್ತಿಕ್ ಮಹೇಶ್ ಅವರುಗಳು 80ಕ್ಕಿಂತಲೂ ಕಡಿಮೆ 40ಕ್ಕಿಂತಲೂ ಹೆಚ್ಚು ಮತಗಳನ್ನು ಪಡೆದು ಅತಂತ್ರ ಸ್ಥಿತಿಯಲ್ಲಿದ್ದರು. ಸೋಷಿಯಲ್ ಮೀಡಿಯಾ ಸ್ಟಾರ್ ಸುರಸುಂದರ ಅವಿನಾಶ್ ಹಾಗೂ ನಟಿಯೊಬ್ಬರು 40ಕ್ಕಿಂತಲೂ ಕಡಿಮೆ ಅಂಕ ಪಡೆದು ಬಿಗ್​ಬಾಸ್ ವೇದಿಕೆಯಿಂದ ನಿರಾಸೆಗೊಂಡು ಮನೆಗೆ ವಾಪಸ್ಸಾದರು.

ಅತಂತ್ರ ಸ್ಥಿತಿಯಲ್ಲಿದ್ದ ಆರು ಮಂದಿ ಸ್ಪರ್ಧಿಗಳನ್ನು ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆ ಕರೆದ ಸುದೀಪ್, ನಿಮ್ಮ ಮುಂದಿನ ಸ್ಥಿತಿಯನ್ನು ಬಿಗ್​ಬಾಸ್ ನಿರ್ಣಯ ಮಾಡಲಿದ್ದಾರೆ. ಸದ್ಯಕ್ಕೆ ನೀವುಗಳು ಬಿಗ್​ಬಾಸ್ ಮನೆಯ ಒಳಗೆ ಹೋಗಬಹುದು ಆದರೆ ನೀವು ನೀಡುವ ಫರ್ಪಾಮೆನ್ಸ್, ನಿಮ್ಮ ತೊಡಗಿಕೊಳ್ಳುವಿಕೆ, ವ್ಯಕ್ತಿತ್ವ ಇನ್ನಿತರೆಗಳನ್ನು ಗಮನಿಸಿ, ನಿಮ್ಮಲ್ಲಿ ಯಾರು ಉಳಿದುಕೊಳ್ಳಬೇಕು, ಯಾರು ಉಳಿದುಕೊಳ್ಳಬಾರದು ಎಂಬುದನ್ನು ಬಿಗ್​ಬಾಸ್ ನಿರ್ಣಯ ಮಾಡುತ್ತಾರೆ. ಹಾಗಾಗಿ ಈ ಒಂದು ವಾರ ಚೆನ್ನಾಗಿ ಆಟವಾಡಿ ಎಂದು ಸಲಹೆ ನೀಡಿ, ಎಲ್ಲರಿಗೂ ಮೈಕ್ ನೀಡಿ ಮನೆಯ ಒಳಗೆ ಕಳಿಸಿದರು ಸುದೀಪ್.

ಇಂದು ಬಿಗ್​ಬಾಸ್ ವೇದಿಕೆ ಮೇಲೆ 19 ಜನ ಸ್ಪರ್ಧಿಗಳು ಬಂದಿದ್ದರು. ಅದರಲ್ಲಿ 11 ಜನ ನೇರವಾಗಿ ಬಿಗ್​ಬಾಸ್ ಮನೆ ಪ್ರವೇಶ ಮಾಡಿದರು. 6 ಮಂದಿ ಅತಂತ್ರ ಸ್ಥಿತಿಯಲ್ಲಿ ಬಿಗ್​ಬಾಸ್ ಮನೆ ಪ್ರವೇಶಿಸಿದರು. ಇಬ್ಬರು ನಿರಾಶರಾಗಿ ಮರಳಿ ತಮ್ಮ ಮನೆಗೆ ವಾಪಸ್ಸಾದರು. ಮೊದಲ ವಾರದ ಎಲಿಮಿನೇಶನ್​ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಆರು ಮಂದಿಯಲ್ಲಿ ಯಾರಾದರೂ ಒಬ್ಬರು ಎಲಿಮಿನೇಟ್ ಆಗುವ ಸಾಧ್ಯತೆಯೇ ಹೆಚ್ಚಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:46 pm, Sun, 8 October 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ