ಬಿಗ್​ಬಾಸ್ ಮನೆ ಪ್ರವೇಶಿಸಿದ ಮತ್ತೊಬ್ಬ ಪತ್ರಕರ್ತ

Bigg Boss 10: ಬಿಗ್​ಬಾಸ್ ಮನೆಗೆ ಪತ್ರಕರ್ತರನ್ನು ಕಳಿಸುವ ಪರಿಪಾಠ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದ್ದು ಈ ಸೀಸನ್​ನಲ್ಲಿ ಪತ್ರಕರ್ತ ಗೌರೀಶ್ ಅಕ್ಕಿ ಬಿಗ್​ಬಾಸ್ ಮನೆಗೆ ಹೋಗಿದ್ದಾರೆ.

ಬಿಗ್​ಬಾಸ್ ಮನೆ ಪ್ರವೇಶಿಸಿದ ಮತ್ತೊಬ್ಬ ಪತ್ರಕರ್ತ
ಗೌರೀಶ್ ಅಕ್ಕಿ
Follow us
| Updated By: ರಾಜೇಶ್ ದುಗ್ಗುಮನೆ

Updated on:Oct 09, 2023 | 9:04 AM

ಬಿಗ್​ಬಾಸ್ (Bigg Boss) ಮನೆಯೊಳಗೆ ನಟ, ನಟಿಯರು, ಧಾರಾವಾಹಿ, ಚಿತ್ರರಂಗಕ್ಕೆ ಕ್ಷೇತ್ರಕ್ಕೆ ಸೇರಿದವರನ್ನು ಮಾತ್ರ ಸ್ಪರ್ಧಿಗಳನ್ನಾಗಿ ಕಳಿಸಲಾಗುತ್ತದೆ ಎಂಬ ದೂರಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಕೇವಲ ನಟ-ನಟಿಯರಿಗೆ ಮಾತ್ರವೇ ಅಲ್ಲದೆ, ಗಾಯಕರು, ಸಮಾಜ ಸೇವಕರು, ಹೋರಾಟಗಾರರು, ಸಾಮಾಜಿಕ ಜಾಲತಾಣದ ಕಂಟೆಂಟ್ ಕ್ರಿಯೇಟರ್​ಗಳ ಜೊತೆಗೆ ಪತ್ರಕರ್ತರನ್ನೂ ಒಳಗೆ ಕಳಿಸಲಾಗುತ್ತಿದೆ. ಈ ಸೀಸನ್​ನಲ್ಲಿಯೂ ಸಹ ಒಬ್ಬ ಪತ್ರಕರ್ತರು ಬಿಗ್​ಬಾಸ್ ಮನೆ ಪ್ರವೇಶಿಸಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

ಕನ್ನಡದ ಜನಪ್ರಿಯ ಪತ್ರಕರ್ತರಲ್ಲಿ ಒಬ್ಬರಾದ ಗೌರೀಶ್ ಅಕ್ಕಿ ಅವರು ಬಿಗ್​ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಪತ್ರಕರ್ತನಾಗಿ ಮನುಷ್ಯರನ್ನು ಅರ್ಥ ಮಾಡಿಕೊಳ್ಳುವುದು ನನ್ನ ಕೆಲಸ, ಅದರ ಜೊತೆಗೆ ನನ್ನನ್ನು ನಾನು ಅರ್ಥ ಮಾಡಿಕೊಳ್ಳುವುದು ಸಹ ನನ್ನ ಕೆಲಸ. ಕೆಲವು ಗಂಟೆಗಳು ಅಥವಾ ನಿಮಿಷಗಳಿಗೆ ಕ್ಯಾಮೆರಾ ಎದುರು ಹೇಗೆ ವರ್ತಿಸಬೇಕು ಎಂಬುದನ್ನು ನಾವು ಪ್ಲ್ಯಾನ್ ಮಾಡಬಹುದು ಆದರೆ ಎಲ್ಲೆಡೆ, ಎಲ್ಲ ಸಮಯದಲ್ಲಿಯೂ ಕ್ಯಾಮೆರಾ ಇದ್ದಾಗ ಅದನ್ನು ಮರೆಯಲೇ ಬೇಕು, ಹಾಗಾಗಿ ಬಿಗ್​ಬಾಸ್ ಮನೆಯಲ್ಲಿ ನಟಿಸಲು ಸಾಧ್ಯವಿಲ್ಲ ಎಂದರು.

ನಾನು ಹಲವರಿಗೆ ಪ್ರಶ್ನೆ ಕೇಳಿದ್ದೇನೆ, ಹಲವರಿಗೆ ನನ್ನ ಬಗ್ಗೆ ಪ್ರಶ್ನೆಗಳು ಇರಬಹುದು. ಅಂಥಹಾ ಪ್ರಶ್ನೆಗಳಿಗೆ ಇಲ್ಲಿ ಉತ್ತರ ದೊರೆಯಬಹುದು. ಹೊಸ ಪ್ರಶ್ನೆಗಳು ಹುಟ್ಟಲೂ ಬಹುದು ಎಂದ ಗೌರೀಶ್ ಅಕ್ಕಿ, ಈ ಮನೆಯಲ್ಲಿ ಕನಿಷ್ಟ ಒಂದು ತಿಂಗಳು ಉಳಿಯಬೇಕು ಎಂದು ಕೊಂಡಿದ್ದೇನೆ. ಸ್ವಭಾವತಃ ತುಸು ನಾಚಿಕೆ ಸ್ವಭಾವದ ವ್ಯಕ್ತಿ ಅದರಲ್ಲಿಯೂ ಮಹಿಳೆಯರ ಬಳಿ ತುಸು ನಾಚಿಕೆ ಸ್ವಭಾವದ ವ್ಯಕ್ತಿ ಅದನ್ನೆಲ್ಲ ಸರಿ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

ಇದನ್ನೂ ಓದಿ:ಸಮಾಜದ ಸವಾಲುಗಳ ಎದುರಿಸಿ ಗೆದ್ದಿರುವ ಮಂಗಳಮುಖಿ ನೀತು ಬಿಗ್​ಬಾಸ್ ಮನೆಯಲ್ಲಿ ಗೆಲ್ಲುತ್ತಾರಾ?

ಈ ಹಿಂದೆ ಬಿಗ್​ಬಾಸ್ ಒಟಿಟಿ ನಡೆದಾಗ ಪತ್ರಕರ್ತ ಸೋಮಣ್ಣ ಮಾಚಿಮಾಡ ಸ್ಪರ್ಧಿಯಾಗಿ ಹೋಗಿದ್ದರು. ಹಿರಿಯ ಪತ್ರಕರ್ತ ರವಿ ಬೆಳಗೆರೆ ಸಹ ಬಿಗ್​ಬಾಸ್ ಮನೆಗೆ ಹೋಗಿದ್ದರು, ಆದರೆ ಅನಾರೋಗ್ಯ ಇನ್ನಿತರೆ ಕಾರಣಗಳಿಂದ ಬೇಗನೆ ಬಿಗ್​ಬಾಸ್ ಮನೆಯಿಂದ ಹೊರಗೆ ಬಂದರು ಸಹ. ರೆಹಮಾನ್ ಸಹ ಬಿಗ್​ಬಾಸ್ ಮನೆಗೆ ಹೋಗಿದ್ದರು. ಈಗ ಗೌರೀಶ್ ಅಕ್ಕಿ ಬಿಗ್​ಬಾಸ್ ಮನೆ ಪ್ರವೇಶಿಸಿದ್ದು, ಎಷ್ಟು ದಿನ ಅಲ್ಲಿ ಉಳಿಯುತ್ತಾರೆ ಎಂದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:54 pm, Sun, 8 October 23

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ