ಕೋಟಿ ಕೊಟ್ರು ಬಿಗ್​ಬಾಸ್​ಗೆ ಹೋಗಲ್ಲ ಎಂದಿದ್ದ ನಟಿ ಬಿಗ್​ಬಾಸ್​ಗೆ ಬಂದಿದ್ದು ಏಕೆ?

Bigg Bos 10: ಕೋಟಿ ಸಂಭಾವನೆ ಕೊಟ್ಟರೂ ಬಿಗ್​ಬಾಸ್​ಗೆ ಹೋಗಲ್ಲ ಎಂದಿದ್ದ ನಟಿಯೊಬ್ಬರು ಹಠಾತ್ತನೆ ಬಿಗ್​ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ.

ಕೋಟಿ ಕೊಟ್ರು ಬಿಗ್​ಬಾಸ್​ಗೆ ಹೋಗಲ್ಲ ಎಂದಿದ್ದ ನಟಿ ಬಿಗ್​ಬಾಸ್​ಗೆ ಬಂದಿದ್ದು ಏಕೆ?
Follow us
ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:Oct 09, 2023 | 9:04 AM

ಬಿಗ್​ಬಾಸ್ (Bigg Boss)​ ರಿಯಾಲಿಟಿ ಶೋ ಬಗ್ಗೆ ಹಾಲಿ ಸೆಲೆಬ್ರಿಟಿಗಳಿಗೆ ಎರಡು ರೀತಿಯ ಅಭಿಪ್ರಾಯಗಳಿವೆ. ಕೆಲವರು ಬಿಗ್​ಬಾಸ್​ ಅನ್ನು ತಮ್ಮ ವೃತ್ತಿಗೆ ಚಿಮ್ಮು ಹಲಗೆಯಾಗಿ ಭಾವಿಸಿದರೆ ಇನ್ನು ಕೆಲವರು ಕೆಲಸ ಇಲ್ಲದವರು, ಕನಿಷ್ಠರು ಮಾತ್ರವೇ ಬಿಗ್​ಬಾಸ್​ಗೆ ಹೋಗುತ್ತಾರೆ. ಬಿಗ್​ಬಾಸ್​ಗೆ ಹೋದರೆ ಮೌಲ್ಯ ಕಡಿಮೆ ಎಂದೆಲ್ಲ ಯೋಚಿಸುತ್ತಾರೆ. ಇದೇ ಕಾರಣಕ್ಕೆ ಇಂದಿಗೂ ಕೆಲವು ಸೆಲೆಬ್ರಿಟಿಗಳು ಅವಕಾಶ ಬಂದರೂ ಬಿಗ್​ಬಾಸ್​ನಿಂದ ದೂರವೇ ಇದ್ದಾರೆ. ಈ ನಡುವೆ ನಟಿಯೊಬ್ಬರು ಕೋಟಿ ಸಂಭಾವನೆ ಕೊಟ್ಟರೂ ಬಿಗ್​ಬಾಸ್​ಗೆ ಹೋಗಲ್ಲ ಎಂದಿದ್ದವರು, ಹಠಾತ್ತನೆ ಬಿಗ್​ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

‘777 ಚಾರ್ಲಿ’ ಸಿನಿಮಾದ ನಟಿ ಸಂಗೀತಾ ಶ್ರಿಂಗೇರಿ, ಬಿಗ್​ಬಾಸ್ ಸ್ಪರ್ಧಿಯಾಗಲೆಂದು ಬಿಗ್​ಬಾಸ್ ವೇದಿಕೆಗೆ ಬಂದಿದ್ದರು. ಆದರೆ ಅವರು ಮೊದಲ ಅವಕಾಶದಲ್ಲಿ ಸ್ಪರ್ಧಿಯಾಗಿ ಆಯ್ಕೆ ಆಗಲಿಲ್ಲ. ಸಂಗೀತಾರಿಗೆ ಕಡಿಮೆ ಮತಗಳು ದೊರೆತ ಕಾರಣ ಅವರನ್ನು ವೇಯಿಟಿಂಗ್ ಲಿಸ್ಟ್​ನಲ್ಲಿ ಇಡಲಾಯ್ತು. ತಮಗೆ ಸೂಕ್ತ ಸಂಖ್ಯೆಯ ಮತ ಬೀಳದೇ ಹೋದಾಗ ಮೇಯಿಟಿಂಗ್ ರೂಂಗೆ ಬಂದು ಕಣ್ಣೀರು ಹಾಕಿದರು ನಟಿ ಸಂಗೀತಾ.

ಅಸಲಿ ವಿಷಯವೆಂದರೆ ಈ ಮೊದಲು ಸಂಗೀತಾಗೆ ಬಿಗ್​ಬಾಸ್​ಗೆ ಬರಲು ಇಷ್ಟವಿರಲಿಲ್ಲವಂತೆ. ಪತ್ರಕರ್ತರೊಬ್ಬರು ಕರೆ ಮಾಡಿ, ‘ಮೇಡಂ ನೀವು ಬಿಗ್​ಬಾಸ್​ಗೆ ಹೋಗುತ್ತಿದ್ದೀರಂತೆ ನಿಜವೇ?’ ಎಂದು ಪ್ರಶ್ನಿಸಿದಾಗ, ಕೋಟಿ ಕೊಟ್ರು ನಾನು ಬಿಗ್​ಬಾಸ್​ಗೆ ಹೋಗಲ್ಲ ಎಂದಿದ್ದರಂತೆ. ಆ ವಿಷಯವನ್ನು ಬಿಗ್​ಬಾಸ್​ ವೇದಿಕೆ ಮೇಲೆ ನಟ ಸುದೀಪ್ ಬಹಿರಂಗಗೊಳಿಸಿ, ತಮಾಷೆಯಾಗಿ ನಟಿ ಸಂಗೀತಾರನ್ನು ಗೋಳು ಹೊಯ್ದುಕೊಂಡರು.

ಇದನ್ನೂ ಓದಿ: ಡ್ರೋನ್ ಪ್ರತಾಪ್, ಬುಲೆಕ್ ರಕ್ಷಕ್ ಸ್ಥಿತಿ ಅತಂತ್ರ: ಆರು ಜನರ ಹಣೆ ಬರಹ ನಿರ್ಧರಿಸಲಿರುವ ಬಿಗ್​ಬಾಸ್

‘ಕೋಟಿ ಕೊಟ್ಟರೂ ಬಿಗ್​ಬಾಸ್​ಗೆ ಹೋಗುವುದಿಲ್ಲ’ ಎಂದು ತಾವು ಯಾವ ಸಂದರ್ಭದಲ್ಲಿ ಹೇಳಬೇಕಾಗಿ ಬಂತು, ಆ ಸಮಯ ಹೇಗಿತ್ತು, ತನ್ನ ಮನಸ್ಥಿತಿ ಹೇಗಿತ್ತು ಎಂಬುದನ್ನೆಲ್ಲ ಸುದೀಪ್ ಅವರಿಗೆ ನಟಿ ಸಂಗೀತ ವಿವರಿಸಿದರು. ಬಳಿಕ ಸುದೀಪ್ ಸಹ ಹೋಗಲಿ ಬಿಡಿ ಎಂಬುಂತೆ ಚರ್ಚೆಯನ್ನು ಬೇರೆ ವಿಷಯಕ್ಕೆ ಬದಲಾಯಿಸಿದರು.

ಬಹಳ ಮುದ್ದಾದ ಪಾತ್ರಗಳಲ್ಲಿ ಜನರು ನನ್ನನ್ನು ಈವರೆಗೆ ನೋಡಿದ್ದಾರೆ. ಆದರೆ ನನ್ನ ಪಾತ್ರಗಳಂತೆ ಸಾಫ್ಟ್ ಅಲ್ಲ ನಾನು. ವ್ಯಕ್ತಿಯಾಗಿ ನಾನು ಬಹಳ ಬೋಲ್ಡ್, ಸಾಹಸಮಯಿ. ನನ್ನ ಪಾತ್ರಗಳಿಗಿಂತಲೂ ನನ್ನ ನಿಜ ವ್ಯಕ್ತಿತ್ವ ಹೆಚ್ಚು ಆಕರ್ಷಿಕವಾಗಿದೆ ಹಾಗಾಗಿ ಆ ನನ್ನ ನಿಜ ವ್ಯಕ್ತಿತ್ವವನ್ನು ತೋರಿಸಲು ನಾನು ಇಲ್ಲಿಗೆ ಬಂದಿದ್ದೇನೆ. ನನಗೆ ಸವಾಲುಗಳೆಂದರೆ ಬಹಳ ಇಷ್ಟ. ಬಿಗ್​ಬಾಸ್​ ನನ್ನ ವ್ಯಕ್ತಿತ್ವಕ್ಕೆ ಸವಾಲು ಹಾಕುತ್ತದೆ ಎಂದು ಅನಿಸಿದ್ದರಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ ಸಂಗೀತ.

ಆದರೆ ಸಂಗೀತಾ ಶ್ರಿಂಗೇರಿ ಅವರಿಗೆ 80ಕ್ಕಿಂತಲೂ ಕಡಿಮೆ ಮತಗಳು ದೊರೆತ ಕಾರಣ ಅವರನ್ನು ವೇಯಿಟಿಂಗ್ ರೂಂನಲ್ಲಿ ಇಡಲಾಯ್ತು. ಅಂತಿಮವಾಗಿ ಕಡಿಮೆ ಮತ ಪಡೆದ ಇತರೆ ಆರು ಮಂದಿಯ ಜೊತೆಗೆ ಸಂಗೀತಾರನ್ನು ಮನೆಯ ಒಳಗೆ ಕಳಿಸಲಾಯ್ತು. ಒಂದು ವಾರದ ಬಳಿಕ ಬಿಗ್​ಬಾಸ್ ಮನೆಯಲ್ಲಿ ಸಂಗೀತ ಉಳಿಯುತ್ತಾರಾ ಇಲ್ಲವಾ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:56 pm, Sun, 8 October 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್