ಹೆಸರು ಹಿಡಿದು ಕರೆದರೂ ‘ಬಿಗ್ ಬಾಸ್’ ವೇದಿಕೆಗೆ ಬರಲೇ ಇಲ್ಲ ‘ಚಾರ್ಲಿ’; ಮುಂದೇನು ಕಥೆ?
‘777 ಚಾರ್ಲಿ’ ಸಿನಿಮಾ ಮೂಲಕ ಚಾರ್ಲಿ ಸಾಕಷ್ಟು ಜನಪ್ರಿಯತೆ ಪಡೆಯಿತು. ಚಾರ್ಲಿ ಅನೇಕರಿಗೆ ಇಷ್ಟವಾದಳು. ಅವಳು ದೊಡ್ಮನೆಗೆ ಬರುವ ಬಗ್ಗೆ ‘ಅನುಬಂಧ ಅವಾರ್ಡ್ಸ್’ ವೇದಿಕೆ ಮೇಲೆ ಘೋಷಣೆ ಆಯಿತು. ಇದಕ್ಕಾಗಿ ಎಲ್ಲರೂ ಕಾದು ಕೂತಿದ್ದರು. ಆದರೆ, ಚಾರ್ಲಿಯ ಆಗಮನ ಆಗಿಲ್ಲ.
‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋಗೆ ಭಾನುವಾರ (ಅಕ್ಟೋಬರ್ 8) ಅದ್ದೂರಿಯಾಗಿ ಚಾಲನೆ ನೀಡಲಾಗಿದೆ. ಕಿಚ್ಚ ಸುದೀಪ್ (Kichcha Sudeep) ಅವರು ಎಂದಿನ ಗತ್ತಿನಲ್ಲಿ ಶೋ ನಡೆಸಿಕೊಟ್ಟಿದ್ದಾರೆ. ಅವರ ಡ್ರೆಸ್ ಬಗ್ಗೆ ವೀಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ವೇದಿಕೆ ಏರಿದ ಸ್ಪರ್ಧಿಗಳು ‘ನಿಮ್ಮ ಪರ್ಫ್ಯೂಮ್ ಚೆನ್ನಾಗಿದೆ’ ಎಂದು ಅಭಿಪ್ರಾಯ ತಿಳಿಸಿದರು. ಇದಕ್ಕೆ ಸುದೀಪ್ ಧನ್ಯವಾದ ಹೇಳಿದ್ದಾರೆ. ಬಿಗ್ ಬಾಸ್ ಶೋ ಮುಗಿಯುವವರೆಗೆ ಎಲ್ಲರೂ ಕಾದಿದ್ದು ಓರ್ವ ಸ್ಪರ್ಧಿಗಾಗಿ ಆಗಿತ್ತು. ಆದರೆ, ಆ ಸ್ಪರ್ಧಿ ಬರಲೇ ಇಲ್ಲ. ಅದು ಬೇರಾರೂ ಅಲ್ಲ ಚಾರ್ಲಿ Charlie.
ಬಿಗ್ ಬಾಸ್ ಮನೆಗೆ ವಿವಿಧ ಮನಸ್ಥಿತಿಯ ಸ್ಪರ್ಧಿಗಳ ಆಗಮನ ಆಗುತ್ತದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಪ್ರೊಫೆಷನ್. ಎಲ್ಲಾ ಸ್ಪರ್ಧಿಗಳಿಗೂ ತಮ್ಮದೇ ಆದ ಐಡೆಂಟಿಟಿ ಇರುತ್ತದೆ. ಆದರೆ, ಈ ಬಾರಿ ಬಿಗ್ ಬಾಸ್ಗೆ ಸಾಕು ಪ್ರಾಣಿಯನ್ನು ಕಳುಹಿಸುವ ಆಲೋಚನೆ ಕಲರ್ಸ್ ಕನ್ನಡದವರಿಗೆ ಬಂದಿತ್ತು. ರಕ್ಷಿತ್ ಶೆಟ್ಟಿ ನಟನೆಯ ಸೂಪರ್ ಹಿಟ್ ಸಿನಿಮಾ ‘777 ಚಾರ್ಲಿ’ ಚಿತ್ರದಲ್ಲಿ ನಟಿಸಿದ ಚಾರ್ಲಿ ಶ್ವಾನ ಕೂಡ ಬಿಗ್ ಬಾಸ್ಗೆ ಬರಲಿದೆ ಎಂದು ಘೋಷಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ.
‘777 ಚಾರ್ಲಿ’ ಸಿನಿಮಾ ಮೂಲಕ ಚಾರ್ಲಿ ಸಾಕಷ್ಟು ಜನಪ್ರಿಯತೆ ಪಡೆಯಿತು. ಚಾರ್ಲಿ ಅನೇಕರಿಗೆ ಇಷ್ಟವಾದಳು. ಅವಳು ದೊಡ್ಮನೆಗೆ ಬರುವ ಬಗ್ಗೆ ‘ಅನುಬಂಧ ಅವಾರ್ಡ್ಸ್’ ವೇದಿಕೆ ಮೇಲೆ ಘೋಷಣೆ ಆಯಿತು. ಇದಕ್ಕಾಗಿ ಎಲ್ಲರೂ ಕಾದು ಕೂತಿದ್ದರು. ಆದರೆ, ಚಾರ್ಲಿಯ ಆಗಮನ ಆಗಿಲ್ಲ.
‘777 ಚಾರ್ಲಿ’ ಸಿನಿಮಾ ನಾಯಕಿ ಸಂಗೀತಾ ಶೃಂಗೇರಿ ವೇದಿಕೆ ಏರಿದ್ದರು. ‘ಇಡೀ ಕರ್ನಾಟಕ ಒಂದು ಅತಿಥಿಗಾಗಿ ಕಾಯುತ್ತಿದೆ. ಅದು ಯಾರು ಅನ್ನೋದು ನಿಮಗೆ ಗೊತ್ತು’ ಎಂದರು ಸುದೀಪ್. ಇದಕ್ಕೆ ಉತ್ತರಿಸಿದ ಸಂಗೀತಾ ‘ಚಾರ್ಲಿ’ ಎಂದರು. ಚಾರ್ಲಿ ಹೆಸರನ್ನು ಕರೆಯುವಂತೆ ಸುದೀಪ್ ಹೇಳಿದರು. ‘ಚಾರ್ಲಿ.. ಚಾರ್ಲಿ.. ಟ್ರೀಟ್ ಕೊಡ್ತೀನಿ ಬಾ..’ ಎಂದು ಸಂಗೀತಾ ಕರೆದರೂ ಅವಳು ಬರಲೇ ಇಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಮನೆ ಸೇರಿದ 17 ಸ್ಪರ್ಧಿಗಳ ಫೋಟೋ ಹಾಗೂ ವಿವರ ಇಲ್ಲಿದೆ ನೋಡಿ..
‘ಬಹುಶಃ ನೀವು ಕರೆದಿದ್ದು ಕೇಳಿರುತ್ತದೆ. ಪರ್ಮಿಷನ್ ತೆಗೆದುಕೊಳ್ಳೋಕೆ ಕಾದಿರುತ್ತದೆ. ನಾರ್ತ್ ಇಂಡಿಯಾ ಹೋಗಿದೆ, ಬರುತ್ತೆ’ ಎಂದರು ಸುದೀಪ್. ಈ ಮೂಲಕ ಮುಂದಿನ ದಿನಗಳಲ್ಲಿ ಚಾರ್ಲಿಯ ಎಂಟ್ರಿ ಆಗಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:17 am, Mon, 9 October 23