ನಮ್ರತಾ ಗೌಡ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ‘ಕೃಷ್ಣ ರುಕ್ಮಣಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಪುಟ್ಟಗೌರಿ ಮದುವೆ’, ‘ನಾಗಿಣಿ 2’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಅವರು ಬಿಗ್ ಬಾಸ್ಗೆ ಕಾಲಿಟ್ಟ ಮೊದಲ ಸ್ಪರ್ಧಿ.
ಸ್ನೇಹಿತ್ ಗೌಡ ಅವರು ‘ನಮ್ಮನೆ ಯುವರಾಣಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಇದೆ. ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುವ ಅವರು ಸಂಸ್ಕರಿಸಿದ ಸಕ್ಕರೆ ಸೇವನೆ ಮಾಡುವುದಿಲ್ಲ.
ಈಶಾನಿ ಅವರು ಹುಟ್ಟಿದ್ದು ಮೈಸೂರಿನಲ್ಲಿ. ಅವರು ಬೆಳೆದಿದ್ದು ದುಬೈ ಹಾಗೂ ಲಾಸ್ ಏಂಜಲೀಸ್ನಲ್ಲಿ. ಅವರಿಗೆ ಕನ್ನಡ ಭಾಷೆ ಬರುತ್ತದೆ. ಅವರು ಕನ್ನಡದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ವೃತ್ತಿಯಲ್ಲಿ ಅವರು ರ‍್ಯಾಪರ್.
ವಿನಯ್ ಗೌಡ ಅವರು ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಫಿಟ್ನೆಸ್ಗೆ ಅವರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆದವರು ತುಕಾಲಿ ಸಂತೋಷ್. ನಾಟಕ ಒಂದರಲ್ಲಿ ತುಕಾಲಿ ಹೆಸರಿನ ಪಾತ್ರ ಮಾಡಿದ್ದರು. ಆ ಬಳಿಕ ಅವರನ್ನು ಎಲ್ಲರೂ ತುಕಾಲಿ ಸಂತು ಎಂದು ಕರೆದರು. ಆರಂಭದಲ್ಲಿ ಸಿಟ್ಟು ಬರುತ್ತಿತ್ತು. ಈಗ ಅವರಿಗೆ ಹೆಸರಿನ ಬಗ್ಗೆ ಹೆಮ್ಮೆ ಇದೆ.
ನೀತು ವನಜಾಕ್ಷಿ ಅವರು ತೃತೀಯಲಿಂಗಿ. ಅವರು ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಅವರು ಸಾಧನೆ ಮಾಡಿ ತೋರಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ನಟಿಸಿರುವ ಅವರು ಬ್ಯೂಟಿ ಪಾರ್ಲರ್ ಹಾಗೂ ಹೋಟೆಲ್ ನಡೆಸುತ್ತಿದ್ದಾರೆ. ಇವರು ಅನೇಕರಿಗೆ ಮಾದರಿ.
ಸಿರಿ ಅವರು ‘ರಂಗೋಲಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಅವರು ಕಿರುತೆರೆ ಮೂಲಕ ಗುರುತಿಸಿಕೊಂಡಿದ್ದಾರೆ. ಮದುವೆ ಆಗಬೇಕು ಎಂದರೂ ಅದು ಸಾಧ್ಯವಾಗಿಲ್ಲ. ಹೀಗಾಗಿ ಅವರು ಇನ್ನೂ ಸಿಂಗಲ್ ಆಗಿದ್ದಾರೆ.
ಸ್ನೇಕ್ ಶ್ಯಾಮ್ ಅವರು ಉರಗ ರಕ್ಷಕರು. ಮೂಲತಃ ಮೈಸೂರಿನವರು. ಸಾಕಷ್ಟು ಪ್ರಾಣಿಗಳ ರಕ್ಷಣೆಯನ್ನು ಅವರು ಮಾಡಿದ್ದಾರೆ. ಸಾವಿರಾರು ಹಾವುಗಳನ್ನು ಅವರು ರಕ್ಷಿಸಿದ್ದಾರೆ. ಅವರು ಫಿಲಾಸಫಿ ಬಗ್ಗೆ ಹೆಚ್ಚು ಆಸಕ್ತಿ ಇಟ್ಟುಕೊಂಡಂತಿದೆ.
‘ಲಕ್ಷಣ’ ಧಾರಾವಾಹಿ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಈ ಧಾರಾವಾಹಿಯಲ್ಲಿ ನಟಿಸಿದ್ದ ಭಾಗ್ಯಶ್ರೀ ಕೂಡ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ.
ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಗೌರೀಶ್ ಅಕ್ಕಿ ಅವರಿಗೆ ಇದೆ. ಅವರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರು ಬಿಗ್ ಬಾಸ್ಗೆ ಬಂದಿದ್ದಾರೆ.
ಮೈಕಲ್ ತಾಯಿ ಭಾರತದವರು, ತಂದೆ ನೈಜೀರಿಯಾದವರು. ಅವರ ಕೇಶ ವಿನ್ಯಾಸ ವಿಚಿತ್ರವಾಗಿದೆ. ಅವರು ಕಳೆದ ನಾಲ್ಕು ವರ್ಷಗಳಿಂದ ಕೂದಲನ್ನು ಬೆಳೆಸುತ್ತಿದ್ದಾರೆ. ಮೈಕಲ್ ತಮ್ಮದೇ ಬರ್ಗರ್ ಶಾಪ್ ಹೊಂದಿದ್ದಾರೆ. ಮಾಡೆಲ್ ಕೂಡ ಹೌದು.
ಡ್ರೋನ್ ಪ್ರತಾಪ್ ಎಂದೇ ಫೇಮಸ್ ಆದ ಇವರು ಬಿಗ್ ಬಾಸ್ಗೆ ಬಂದಿದ್ದಾರೆ. ತಮ್ಮನ್ನು ತಾವು ಯುವ ವಿಜ್ಞಾನಿ ಎಂದು ಅವರು ಕರೆದುಕೊಂಡಿದ್ದಾರೆ. ಅವರ ಆಗಮನ ಕುತೂಹಲ ಮೂಡಿಸಿದೆ. ಇವರು ಡೇಂಜರ್ ಜೋನ್ನಲ್ಲಿದ್ದಾರೆ.
ಸಂಗೀತಾ ಶೃಂಗೇರಿ ಅವರು ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೆ ಕಿರುತೆರೆಯಲ್ಲೂ ನಟಿಸಿದ ಅನುಭವ ಇದೆ. ಇವರು ಡೇಂಜರ್ ಜೋನ್ನಲ್ಲಿದ್ದಾರೆ.
ಬುಲೆಟ್ ಪ್ರಕಾಶ್ ಮಗ ರಕ್ಷಕ್ ಅವರು ಬಿಗ್ ಬಾಸ್ಗೆ ಆಗಮಿಸಿದ್ದಾರೆ. ಗುರು ಶಿಷ್ಯರು ಸಿನಿಮಾದಲ್ಲಿ ಅವರು ನಟಿಸಿದ್ದರು. ಅವರು ನಡೆದುಕೊಳ್ಳುವ ರೀತಿಯನ್ನು ಅನೇಕರು ಟ್ರೋಲ್ ಮಾಡಿದ್ದಾರೆ. ಇವರು ಡೇಂಜರ್ ಜೋನ್ನಲ್ಲಿದ್ದಾರೆ.
ವರ್ತೂರ್ ಸಂತೋಷ್ ಅವರು ವೃತ್ತಿಯಲ್ಲಿ ರೈತ. ತಂದೆ ಬಿಟ್ಟು ಹೋದ ಜಮೀನಿನಲ್ಲಿ ಹಲವು ರೀತಿಯ ಬೆಳೆ ಬೆಳೆದಿದ್ದಾರೆ. ಹಳ್ಳಿಕಾರ ದನದ ತಳಿಯ ಬಗ್ಗೆ ಜಗತ್ತಿಗೆ ತಿಳಿಸುವ ಕನಸು ಅವರದ್ದು. ಇವರು ಡೇಂಜರ್ ಜೋನ್ನಲ್ಲಿದ್ದಾರೆ.
ತನಿಷಾ ಕುಪ್ಪಂಡ ಅವರು ‘ಮಂಗಳ ಗೌರಿ’ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಗಮನ ಸೆಳೆದರು. ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇವರು ಡೇಂಜರ್ ಜೋನ್ನಲ್ಲಿದ್ದಾರೆ.
ಕಾರ್ತಿಕ್ ಅವರು ಕಿರುತೆರೆ ಮೂಲಕ ಗಮನ ಸೆಳೆದಿದ್ದಾರೆ. ಅವುರ ಕೂಡ ಬಿಗ್ ಬಾಸ್ಗೆ ಬಂದಿದ್ದಾರೆ. ಇವರು ಡೇಂಜರ್ ಜೋನ್ನಲ್ಲಿದ್ದಾರೆ. ‘ಡೊಳ್ಳು’ ಚಿತ್ರದಲ್ಲಿ ಅವರು ನಟಿಸಿದ್ದಾರೆ.
Published On - 7:42 am, Mon, 9 October 23