- Kannada News Photo gallery Cricket photos ICC World Cup 2023 updated Points Table after IND vs AUS match
ಆಸೀಸ್ ವಿರುದ್ಧ ಗೆದ್ದರೂ ಭಾರತಕ್ಕೆ 5ನೇ ಸ್ಥಾನ! ಇಲ್ಲಿದೆ ವಿಶ್ವಕಪ್ ಪಾಯಿಂಟ್ ಪಟ್ಟಿ
ICC World Cup 2023 Updated Points Table: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಟೀಂ ಇಂಡಿಯಾ ಗೆಲುವಿಗೆ 200 ರನ್‌ಗಳ ಸವಾಲನ್ನು ನೀಡಿತ್ತು. ಈ ಸವಾಲನ್ನು ಟೀಂ ಇಂಡಿಯಾ 41.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು.ಈ ಗೆಲುವಿನೊಂದಿಗೆ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದು, ಬಲಿಷ್ಠ ಆಸೀಸ್ ಪಡೆಯನ್ನು 6 ವಿಕೆಟ್ಗಳಿಂದ ಮಣಿಸಿದರೂ ಭಾರತಕ್ಕೆ ಟಾಪ್ 4ರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.
Updated on:Oct 09, 2023 | 11:19 AM

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ವಿಶ್ವಕಪ್ನ ಐದನೇ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ, ಬಲಿಷ್ಠ ಆಸೀಸ್ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಟೀಂ ಇಂಡಿಯಾ ಗೆಲುವಿಗೆ 200 ರನ್‌ಗಳ ಸವಾಲನ್ನು ನೀಡಿತ್ತು. ಈ ಸವಾಲನ್ನು ಟೀಂ ಇಂಡಿಯಾ 41.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು.

ಈ ಗೆಲುವಿನೊಂದಿಗೆ ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದು, ಬಲಿಷ್ಠ ಆಸೀಸ್ ಪಡೆಯನ್ನು 6 ವಿಕೆಟ್ಗಳಿಂದ ಮಣಿಸಿದರೂ ಭಾರತಕ್ಕೆ ಟಾಪ್ 4ರಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.

ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡ ಆಡಿರುವ ಏಕೈಕ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಹೀನಾಯವಾಗಿ ಸೋಲಿಸಿತು. ಈ ಮೂಲಕ +2.149 ನೆಟ್ ರನ್ರೇಟ್ ಹೊಂದಿರುವ ಕಿವೀಸ್ 2 ಅಂಕ ಪಡೆದುಕೊಂಡಿದೆ.

ಶ್ರೀಲಂಕಾ ತಂಡವನ್ನು 100 ಕ್ಕೂ ಅಧಿಕ ರನ್ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ +2.040 ನೆಟ್ ರನ್ ರೇಟ್ ಜೊತೆಗೆ 2 ಅಂಕ ಸಂಪಾದಿಸಿ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ನೆದರ್ಲೆಂಡ್ಸ್ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿದ ಪಾಕಿಸ್ತಾನ +1.620 ನೆಟ್ ರನ್ರೇಟ್ ಜೊತೆಗೆ 2 ಅಂಕ ಸಂಪಾದಿಸಿ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

ನಾಲ್ಕನೇ ಸ್ಥಾನದಲ್ಲಿರುವ ಬಾಂಗ್ಲಾದೇ ಆಡಿದ ಏಕೈಕ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿ +1.438 ನೆಟ್ ರನ್ರೇಟ್ ಜೊತೆಗೆ 2 ಅಂಕ ಸಂಪಾದಿಸಿ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಇನ್ನು ಐದನೇ ಸ್ಥಾನದಲ್ಲಿರುವ ಭಾರತ +0.883 ನೆಟ್ ರನ್ರೇಟ್ ಜೊತೆಗೆ 2 ಅಂಕ ಸಂಪಾದಿಸಿ 5ನೇ ಸ್ಥಾನದಲ್ಲಿದೆ.

ಉಳಿದಂತೆ ತಲಾ ಒಂದೊಂದು ಪಂದ್ಯ ಸೋತಿರುವ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ನೆದರ್ಲೆಂಡ್ಸ್, ಶ್ರೀಲಂಕಾ, ಇಂಗ್ಲೆಂಡ್ ಕ್ರಮವಾಗಿ 6,7,8,9,10ನೇ ಸ್ಥಾನ ಪಡೆದುಕೊಂಡಿವೆ.
Published On - 10:36 am, Mon, 9 October 23




