Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾಜದ ಸವಾಲುಗಳ ಎದುರಿಸಿ ಗೆದ್ದಿರುವ ಮಂಗಳಮುಖಿ ನೀತು ಬಿಗ್​ಬಾಸ್ ಮನೆಯಲ್ಲಿ ಗೆಲ್ಲುತ್ತಾರಾ?

Neetu Vanajakshi: ಸಮಾಜ ಒಡ್ಡಿರುವ ಸವಾಲುಗಳನ್ನು ಎದುರಿಸಿ ಗೆದ್ದು ಯಶಸ್ವಿ ಉದ್ಯಮಿ ಆಗಿರುವ ನೀತು ವನಜಾಕ್ಷಿ, ಬಿಗ್​ಬಾಸ್ ಮನೆ ಪ್ರವೇಶಿಸಿದ್ದು ಇಲ್ಲಿ ಎದುರಾಗುವ ಸವಾಲುಗಳನ್ನು ಗೆಲ್ಲುತ್ತಾರಾ?

ಸಮಾಜದ ಸವಾಲುಗಳ ಎದುರಿಸಿ ಗೆದ್ದಿರುವ ಮಂಗಳಮುಖಿ ನೀತು ಬಿಗ್​ಬಾಸ್ ಮನೆಯಲ್ಲಿ ಗೆಲ್ಲುತ್ತಾರಾ?
Follow us
ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:Oct 09, 2023 | 9:03 AM

ವಿವಿಧತೆಯಲ್ಲಿ ಏಕತೆ ಎಂಬುದು ಬಿಗ್​ಬಾಸ್ (Bigg Boss) ಮನೆಯ ಧ್ಯೇಯ. ಅದಕ್ಕೆ ತಕ್ಕಂತೆ ಇದೀಗ ಬಿಗ್​ಬಾಸ್ ಮನೆಗೆ ಟ್ರಾನ್ಸ್​ಜೆಂಡರ್ ಮಹಿಳೆ ನೀತು ವನಜಾಕ್ಷಿ ಎಂಟ್ರಿ ನೀಡಿದ್ದಾರೆ. ಗಂಡಾಗಿ ಹುಟ್ಟಿ ಪ್ರಕೃತಿ ನಿಯಮದಂತೆ ಹೆಣ್ಣಾಗಿ ಬದಲಾದ ನೀತು, ಸಮಾಜ ತಮ್ಮ ಮೇಲೆ ಎಸೆದ ಎಲ್ಲ ಸವಾಲುಗಳನ್ನು ಧೀರತೆಯಿಂದ ಮೆಟ್ಟಿನಿಂತು ಲಕ್ಷಾಂತರ ಮಂದಿಗೆ ಸ್ಪೂರ್ತಿಯಾಗುವಂಥಹಾ ಉದ್ಯಮಿಯಾಗಿ ಬೆಳೆದಿದ್ದಾರೆ. ಬಿಗ್​ಬಾಸ್ ಮನೆಗೆ ಕಾಲಿಟ್ಟಿರುವ ನೀತು ವನಜಾಕ್ಷಿ, ತನ್ನಂಥಹಾ ಅನೇಕರ ಬದುಕಿನಲ್ಲಿ ಸ್ಪೂರ್ತಿ ತುಂಬಲೆಂದು ತಾವಿಲ್ಲಿ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

ಗದಗದಲ್ಲಿ ಮಂಜುನಾಥನಾಗಿ ಹುಟ್ಟಿ ಬಳಿಕ ಹೆಣ್ಣಾಗಿ ಬದಲಾಗಿ ನೀತು ಎಂದಾದರು. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ನೀತು ಅದನ್ನೇ ಬಂಡವಾಳವಾಗಿಟ್ಟುಕೊಂಡು ಟ್ಯಾಟೂ ಕಲಾವಿದೆ ಆದರು. ಅದರಿಂದ ಬಂದ ಹಣದಲ್ಲಿ ಬ್ಯೂಟಿ ಪಾರ್ಲರ್ ತೆರೆದರು. ಅದಾದ ಬಳಿಕ ಉತ್ತರ ಕರ್ನಾಟಕದ ಸೊಗಡಿನ ಆಹಾರವನ್ನು ಗ್ರಾಹಕರಿಗೆ ಉಣಬಡಿಸುವ ಹೋಟೆಲ್ ಒಂದನ್ನು ಅಮ್ಮನೊಂದಿಗೆ ಸೇರಿ ತೆರೆದರು. ಮಾಡೆಲಿಂಗ್ ಮಾಡಿದರು, ಫ್ಯಾಷನ್ ಶೋಗಳಲ್ಲಿ ಟ್ರ್ಯಾನ್ಸ್​ಜೆಂಡರ್ ಬ್ಯೂಟಿ ಪೆಜೆಟ್​ಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ಮನೆಯಲ್ಲಿ ಹರ ಹರ ಮಹಾದೇವ: ಹೃದಯ ಗೆಲ್ಲಬಲ್ಲರೇ ವಿನಯ್?

ಮಂಗಳಮುಖಿಯವರನ್ನು ಸಮಾಜ ನೋಡುವ ವಿಧಾನವನ್ನು ಬದಲಾಯಿಸಬೇಕು ಎಂಬ ಅಪಾರ ಆಸೆಯಿಟ್ಟುಕೊಂಡಿರುವ ನೀತು, ತಮ್ಮ ಸಮುದಾಯವರು ಶಿಕ್ಷಣದಲ್ಲಿ ಹಿಂದುಳಿದಿದ್ದಾರೆ ಎಂದು ಗಮನಿಸಿ, ಅದಕ್ಕೆ ಒತ್ತು ನೀಡುವ ಕಾರ್ಯ ಮಾಡುತ್ತಿದ್ದಾರೆ. ನಾನು ಗೆದ್ದಿದ್ದೀನಿ ಎಂದು ಹಲವರಿಗೆ ಗೊತ್ತಿದೆ. ಆದರೆ ಆ ಗೆಲುವಿನ ಹಾದಿಯಲ್ಲಿ ಏನೇನು ಅಡ್ಡಿ ಇತ್ತು ಎಂಬುದನ್ನು ನಾನು ಹೇಳಬೇಕಿದೆ. ಅಲ್ಲಿ ನಿಂತು ನನ್ನಂಥಹಾ ಹಲವರಿಗೆ ನಾನು ಸ್ಪೂರ್ತಿ ತುಂಬಬೇಕಿದೆ ಎಂದರು ನೀತು.

ತಮ್ಮ ತಾಯಿ ತಮಗೆ ನೀಡಿರುವ ಬೆಂಬಲದಿಂದ ತಮ್ಮ ತಾಯಿ ವನಜಾಕ್ಷಿ ಹೆಸರನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ನೀತು ಅವರನ್ನು ಒಳಗೆ ಕಳಿಸುವ ಮುಂಚೆ ನಟಿ, ಮಾಜಿ ಬಿಗ್​ಬಾಸ್ ವಿನ್ನರ್ ಶ್ರುತಿ ಮಾತನಾಡಿ, ಮಹಿಳೆಯರಿಗೇ ಸವಾಲುಗಳು ಇರುತ್ತವೆ, ಅದರಲ್ಲಿ ನೀವು ಎದುರಿಸಿರುವ ಸವಾಲುಗಳನ್ನು ಊಹಿಸಬಹುದು, ನೀವು ಸಾಧ್ಯವಾದಷ್ಟು ಹೆಚ್ಚು ಸಮಯ ಆ ಮನೆಯಲ್ಲಿ ಕಳೆಯಿರಿ, ನೀವು ಅಲ್ಲಿ ಹೆಚ್ಚು ಸಮಯ ಕಳೆದಷ್ಟು ಹೆಚ್ಚು ಜನರಿಗೆ ಸ್ಪೂರ್ತಿ ತುಂಬುತ್ತೀರಿ, ನಿಮ್ಮನ್ನು ಅಲ್ಲಿನ ಜನ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನೂ ಸಹ ರಾಜ್ಯದ ಜನ ನೋಡುತ್ತಿರುತ್ತಾರೆ ಎಂದು ಶುಭ ಹಾರೈಸಿದರು.

ಸಿನಿಮಾ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:10 pm, Sun, 8 October 23

ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್