AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಯಲ್ಲಿ ಹರ ಹರ ಮಹಾದೇವ: ಹೃದಯ ಗೆಲ್ಲಬಲ್ಲರೇ ವಿನಯ್?

Bigg Boss: ಬಿಗ್​ಬಾಸ್ ಕನ್ನಡ ಸೀಸನ್​ 10ರ ನಾಲ್ಕನೇ ಸ್ಪರ್ಧಿಯಾಗಿ ವಿನಯ್ ಬಿಗ್​ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಸಂಕಷ್ಟದ ಬಾಲ್ಯ ಹೊಂದಿದ್ದ ವಿನಯ್, ಬಿಗ್​ಬಾಸ್​ನ ಹಿರಿಯ ಸದಸ್ಯರಾಗುವ ಸಾಧ್ಯತೆ ಇದೆ. ಅಂದಹಾಗೆ ಇವರ ಹಿನ್ನೆಲೆ ಏನು?

ಬಿಗ್​ಬಾಸ್ ಮನೆಯಲ್ಲಿ ಹರ ಹರ ಮಹಾದೇವ: ಹೃದಯ ಗೆಲ್ಲಬಲ್ಲರೇ ವಿನಯ್?
ವಿನಯ್
Follow us
ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:Oct 09, 2023 | 9:02 AM

ಬಿಗ್​ಬಾಸ್ (Bigg Boss) ಮನೆಗೆ ನಾಲ್ಕನೇ ಸ್ಪರ್ಧಿಯಾಗಿ ‘ಹರ ಹರ ಮಹಾದೇವ’ ಧಾರಾವಾಹಿ ನಟ ವಿನಯ್ ಗೌಡ ಮನೆ ಪ್ರವೇಶಿಸಿದ್ದಾರೆ. ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಶಿವ ಪಾತ್ರಧಾರಿಯಾಗಿ ನಟಿಸಿರುವ ವಿನಯ್ ಅದ್ಧೂರಿಯಾಗಿ ಬಿಗ್​ಬಾಸ್ ಮನೆ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಸುರಸುಂದರ ಅವಿನಾಶ್ ಅವರು ನಾಲ್ಕನೇ ಸ್ಪರ್ಧಿ ಆಗಿದ್ದರು, ಆದರೆ ಅವರು ಕಡಿಮೆ ಮತ ಪಡೆದ ಕಾರಣ ಅವರನ್ನು ಮನೆಯ ಒಳಗೆ ಕಳಿಸಲಿಲ್ಲ. ಹಾಗಾಗಿ ನಾಲ್ಕನೇ ಸ್ಪರ್ಧಿಯಾಗಿ ವಿನಯ್ ಮನೆಗೆ ಎಂಟ್ರಿ ಪಡೆದರು. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

ತಂದೆ-ತಾಯಿ ವಿಚ್ಛೇದನದಿಂದಾಗಿ ಮಾನಸಿಕ ಏರಿಳಿತಗಳ ಬಾಲ್ಯ ಕಳೆದ ವಿನಯ್, ತಂದೆ-ತಾಯಿಯ ಸಮಸ್ಯೆಯಿಂದಲೇ ಮನೆ ಬಿಟ್ಟು ಹೊರಬಂದು ಸ್ವತಂತ್ರ್ಯವಾಗಿ ಬದುಕಲು ಆರಂಭಿಸಿದರು. ಎಳವೆಯಿಂದಲೇ ಸವಾಲುಗಳನ್ನು ಎದುರಿಸುತ್ತಾ, ಭಿನ್ನ ಹಾದಿಯನ್ನು ತುಳಿಯುತ್ತಾ ಬಂದಿರುವ ವಿನಯ್ ಅವರಿಗೆ ಬಾಡಿಬಿಲ್ಡಿಂಗ್ ಬಹಳ ಮೆಚ್ಚಿನ ಹವ್ಯಾಸ.

ಇದನ್ನೂ ಓದಿ:ಹಿಂದಿ ಬಿಗ್​ಬಾಸ್ ಹೊಸ ಸೀಸನ್ ಘೋಷಣೆ: ಸಲ್ಮಾನ್ ಖಾನ್​ಗೆ ಬಿಡುವೇ ಇಲ್ಲ

‘ಹರ ಹರ ಮಹದೇವ್’ ಧಾರಾವಾಹಿಯಲ್ಲಿ ಶಿವನ ಪಾತ್ರಧಾರಿಯಾಗಿ ಕರ್ನಾಟಕದಲ್ಲಿ ಲಕ್ಷಾಂತರ ಮನ ಗೆದ್ದಿರುವ ವಿನಯ್​ಗೆ ಪ್ರಪಂಚವೆಂದರೆ ಅವರ 14 ವರ್ಷದ ಮಗ ಹಾಗೂ ಪತ್ನಿ ಇಬ್ಬರೇ. ತನ್ನ ಬಾಲ್ಯದಂತೆ ಮಗನ ಬಾಲ್ಯ ಆಗಬಾರದೆಂಬ ಕಾಳಜಿಯಿಂದ ಮಗನೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತಾ, ಆರೋಗ್ಯಕರ ವಾತಾವರಣದಲ್ಲಿ ಮಗನನ್ನು ಬೆಳೆಸುತ್ತಿದ್ದಾರೆ.

ಅಂದಹಾಗೆ ವಿನಯ್​ಗೆ ಒಸಿಡಿ ಸಮಸ್ಯೆ ಇದೆ. ಅಂದರೆ ವಿನಯ್​ಗೆ ಎಲ್ಲವೂ ಶುಚಿಯಾಗಿರಬೇಕು. ಅದರಲ್ಲಿಯೂ ಬಾತ್​ರೂಂಗಳು ಕೊಳಕಾಗಿದ್ದರೆ, ವಾಸನೆ ಬರುವಂತಿದ್ದರೆ ವಿನಯ್​ ಸಹಿಸಲಾರರು. ಆದರೆ ಬಿಗ್​ಬಾಸ್​ನಲ್ಲಿ ಅದಕ್ಕೆ ವಿರುದ್ಧವಾಗಿ ನಡೆಯುತ್ತದೆ. ಅದರಲ್ಲಿಯೂ ಪುರುಷರ ಬಾತ್​ರೂಂ ಬಹಳ ಕೊಳಕಾಗಿರುತ್ತದೆ. ಬಾತ್​ರೂಂ ಏರಿಯಾ ಅಂತೂ ಕೊಳಕು ಬಟ್ಟೆಗಳಿಂದಲೇ ತುಂಬಿರುತ್ತದೆ. ಇದನ್ನು ವಿನಯ್ ಹೇಗೆ ಸಹಿಸಿಕೊಳ್ಳುತ್ತಾರೋ ನೋಡಬೇಕು. ಈವರೆಗೆ ನಮ್ರತಾ, ಸ್ನೇಹಿತ್ ಗೌಡ, ಈಶಾನಿ ಹಾಗೂ ನಾಲ್ಕನೇ ಸ್ಪರ್ಧಿಯಾಗಿ ವಿನಯ್ ಕಾಲಿಟ್ಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:01 pm, Sun, 8 October 23

ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ಭಾರಿ ಮಳೆಯಿಂದ ಶಿರಾಡಿ ಘಾಟ್​​ ರಸ್ತೆಯಲ್ಲಿ ಭೂ ಕುಸಿತ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ರಶ್ಮಿಕಾಗೆ ಮೈಸೂರು ಸ್ಯಾಂಡಲ್​ ಅವಕಾಶ ಕೊಡಬಹುದಿತ್ತು: ಕುಮಾರ್ ಬಂಗಾರಪ್ಪ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ
ಭಾರತದ ನೆಲದಲ್ಲಿ ಭಯೋತ್ಪಾದಕರ ಅಂತ್ಯಕ್ರಿಯೆಗೆ ಅವಕಾಶವಿಲ್ಲ: ಇಲ್ಯಾಸಿ