AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿ ಬಿಗ್​ಬಾಸ್ ಹೊಸ ಸೀಸನ್ ಘೋಷಣೆ: ಸಲ್ಮಾನ್ ಖಾನ್​ಗೆ ಬಿಡುವೇ ಇಲ್ಲ

Bigg Boss Hindi: ಕಳೆದ ತಿಂಗಳಷ್ಟೆ ಬಿಗ್​ಬಾಸ್ ಒಟಿಟಿ ಸೀಸನ್ ಮುಗಿದಿದೆ. ಅದರ ಬೆನ್ನಲ್ಲೆ ಈಗ ಸಲ್ಮಾನ್ ಖಾನ್, ಬಿಗ್​ಬಾಸ್ ಸೀಸನ್ 17ರ ಘೋಷಣೆ ಮಾಡಿದ್ದಾರೆ.

ಹಿಂದಿ ಬಿಗ್​ಬಾಸ್ ಹೊಸ ಸೀಸನ್ ಘೋಷಣೆ: ಸಲ್ಮಾನ್ ಖಾನ್​ಗೆ ಬಿಡುವೇ ಇಲ್ಲ
ಬಿಗ್​ಬಾಸ್ ಸಲ್ಮಾನ್ ಖಾನ್
ಮಂಜುನಾಥ ಸಿ.
|

Updated on: Sep 24, 2023 | 10:08 AM

Share

ಇತ್ತೀಚೆಗಷ್ಟೆ ಹಿಂದಿ ಬಿಗ್​ಬಾಸ್ (Bigg Boss) ಒಟಿಟಿ ಆವೃತ್ತಿಯ ಎರಡನೇ ಸೀಸನ್​ ಮುಗಿದಿದೆ. ಅದರ ಬೆನ್ನಲ್ಲೆ ಈಗ ಹಿಂದಿ ಬಿಗ್​ಬಾಸ್ ಟಿವಿ ಆವೃತ್ತಿಯ ಹೊಸ ಸೀಸನ್ ಘೋಷಣೆ ಮಾಡಲಾಗಿದೆ. ಒಟಿಟಿ ಆವೃತ್ತಿಯನ್ನು ಸಲ್ಮಾನ್ ಖಾನ್ ನಿರೂಪಣೆ ಮಾಡಿದ್ದರು. ಇದೀಗ ಟಿವಿ ಆವೃತ್ತಿಯನ್ನೂ ಅವರೇ ನಿರೂಪಣೆ ಮಾಡಲಾಗಿದ್ದಾರೆ. ಹಿಂದಿ ಬಿಗ್​ಬಾಸ್, ಕನ್ನಡ ಬಿಗ್​ಬಾಸ್ ಜೊತೆ-ಜೊತೆಗೇ ಪ್ರಸಾರವಾಗಲಿವೆ.

ಹಿಂದಿ ಬಿಗ್​ಬಾಸ್ 17ನೇ ಸೀಸನ್​ ಪ್ರಾರಂಭಕ್ಕೆ ಮುಹೂರ್ತ ಇಡಲಾಗಿದೆ. ಬಿಗ್​ಬಾಸ್​ನ 17ನೇ ಸೀಸನ್ ಅಕ್ಟೋಬರ್ 15ರಿಂದ ಪ್ರಸಾರವಾಗಲಿದೆ. ಪ್ರತಿದಿನವೂ 10 ಗಂಟೆಗೆ ಬಿಗ್​ಬಾಸ್ 17 ಎಪಿಸೋಡ್​ಗಳು ಪ್ರಸಾರವಾಗಲಿವೆ. ಶನಿವಾರ ಮತ್ತು ಭಾನುವಾರ ಮಾತ್ರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ವಾರಾಂತ್ಯದ ಎಪಿಸೋಡ್​ಗಳಲ್ಲಿ ಯಥಾವತ್ತು ನಟ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ.

ಹೊಸ ಸೀಸನ್​ನ ಪ್ರೋಮೊ ಈಗಾಗಲೇ ಬಿಡುಗಡೆ ಆಗಿದ್ದು, ಈ ಬಾರಿ ಬಿಗ್​ಬಾಸ್​ನಲ್ಲಿ ಪಕ್ಷಪಾತ ಇರಲಿದೆ ಎಂಬುದನ್ನು ಪ್ರೋಮೋನಲ್ಲಿಯೇ ಹೇಳಲಾಗಿದೆ. ಸ್ಪರ್ಧಿಗಳಲ್ಲಿ ಕೆಲವರಿಗೆ ಸ್ವತಃ ಬಿಗ್​ಬಾಸ್ ಮಾರ್ಗದರ್ಶನ ಮಾಡಲಿದ್ದಾರಂತೆ. ಆಟಗಳಲ್ಲಿ, ಟಾಸ್ಕ್​ಗಳಲ್ಲಿ ಅವರಿಗೆ ಮಾರ್ಗದರ್ಶನ ಮಾಡಿ, ತರಬೇತಿ ನೀಡಿ ಆಟಕ್ಕೆ ತಯಾರು ಮಾಡಲಿದ್ದಾರಂತೆ.

ಇದನ್ನೂ ಓದಿ:ಎರಡೇ ವಾರಕ್ಕೆ ಬಿಗ್​ಬಾಸ್​ನಿಂದ ಹೊರಬಂದ ಶಕೀಲ, ಪಡೆದ ಸಂಭಾವನೆ ಎಷ್ಟು?

ಕೆಲವು ದಿನಗಳ ಹಿಂದೆಯಷ್ಟೆ ಬಿಗ್​ಬಾಸ್ ಒಟಿಟಿ ಎರಡನೇ ಸೀಸನ್ ಮುಗಿದಿದೆ. ಜೂನ್ 17ಕ್ಕೆ ಆರಂಭವಾಗಿದ್ದ ಬಿಗ್​ಬಾಸ್ ಒಟಿಟಿ ಸೀಸನ್ ಎರಡು ಆಗಸ್ಟ್ 14 ರಂದು ಮುಗಿದಿದೆ. ಒಟಿಟಿ ಸೀಸನ್ ಮುಗಿದು ಒಂದು ತಿಂಗಳ ಮೇಲೆ ಕೆಲವು ದಿನಗಳಾಗಿದೆ ಅಷ್ಟೆ. ಅಷ್ಟರಲ್ಲೇ ಹೊಸ ಬಿಗ್​ಬಾಸ್ ಸೀಸನ್ ಘೋಷಣೆ ಮಾಡಲಾಗಿದೆ. ಒಟ್ಟಾರೆ, ಸಲ್ಮಾನ್ ಖಾನ್ ಬಿಡುವಿಲ್ಲದೆ ಸಣ್ಣ ಪರದೆಯಲ್ಲಿ ಕಾಣಿಸಿಕೊಳ್ಳಬೇಕಿದೆ.

ಕನ್ನಡ ಬಿಗ್​ಬಾಸ್ ಹೊಸ ಸೀಸನ್ ಸಹ ಘೋಷಣೆ ಆಗಿದೆ. ಕನ್ನಡ ಬಿಗ್​ಬಾಸ್ ಸೀಸನ್ 10 ಅಕ್ಟೋಬರ್ 8ರಿಂದ ಪ್ರಾರಂಭವಾಗಲಿದೆ. ನಟ ಸುದೀಪ್ ನಟಿಸಿರುವ ಬಿಗ್​ಬಾಸ್ 10ರ ಹೊಸ ಪ್ರೋಮೋ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಈ ಬಾರಿಯ ಕನ್ನಡ ಬಿಗ್​ಬಾಸ್ ಈ ಹಿಂದಿನ ಬಿಗ್​ಬಾಸ್​ಗಳಿಗಿಂತಲೂ ತುಸು ಭಿನ್ನವಾಗಿರಲಿದೆ ಎನ್ನಲಾಗುತ್ತಿದೆ. ಈ ಬಾರಿ ಸಾಮಾನ್ಯರೂ ಬಿಗ್​ಬಾಸ್​ ನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುವ ಸಾಧ್ಯತೆ ಇದೆ.

ಇನ್ನು ಈಗಾಗಲೇ ತೆಲುಗು ಬಿಗ್​ಬಾಸ್ ಚಾಲ್ತಿಯಲ್ಲಿದೆ. ನಟ ನಾಗಾರ್ಜುನ ನಿರೂಪಣೆ ಮಾಡುತ್ತಿರುವ ಶೋ ಪ್ರಸಾರವಾಗುತ್ತಿದೆ. ನಟ ಕಮಲ್ ಹಾಸನ್, ತಮಿಳು ಬಿಗ್​ಬಾಸ್ ಅನ್ನು ಇನ್ನಷ್ಟೆ ಶುರು ಮಾಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ