ಬಿಗ್ಬಾಸ್ 10ಕ್ಕೆ ವೇದಿಕೆ ರೆಡಿ: ಪ್ರಸಾರದ ದಿನಾಂಕ ಬಹಿರಂಗ
Bigg Boss 10: ಬಿಗ್ಬಾಸ್ 10 ಇನ್ನೇನು ಆರಂಭವಾಗಲಿದೆ ಎಂದು ಕೆಲವು ದಿನಗಳ ಹಿಂದಷ್ಟೆ ಪ್ರೋಮೋ ಬಿಡುಗಡೆ ಮಾಡಲಾಗಿತ್ತು. ಇದೀಗ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಬಿಗ್ಬಾಸ್ 10 ಯಾವ ದಿನದಿಂದ ಆರಂಭವಾಗಲಿದೆ ಎಂಬ ಮಾಹಿತಿ ನೀಡಲಾಗಿದೆ.
ಬಿಗ್ಬಾಸ್ (Bigg Boss) ಮತ್ತೆ ಬಂದಿದೆ. ಯಶಸ್ವಿಯಾಗಿ ಒಂಬತ್ತು ಸೀಸನ್ಗಳನ್ನು ಮುಗಿಸಿ ಇದೀಗ ಹತ್ತನೇ ಸೀಸನ್ಗೆ ಆರಂಭಕ್ಕೆ ವೇದಿಕೆ ರೆಡಿಯಾಗಿದೆ. ಸೆಪ್ಟೆಂಬರ್ 14 ಬಿಗ್ಬಾಸ್ ಸೀಸನ್ 10ರ ಎರಡನೇ ಪ್ರೋಮೋ ಬಿಡುಗಡೆ ಮಾಡಲಾಗಿತ್ತು. ಸುದೀಪ್ ಕಾಣಿಸಿಕೊಂಡಿದ್ದ ಈ ಪ್ರೋಮೋನಲ್ಲಿ ಬಿಗ್ಬಾಸ್ ಆರಂಭವಾಗಲಿದೆ ಎಂದಷ್ಟೆ ಹೇಳಲಾಗಿತ್ತು. ಈಗ ಬಿಡುಗಡೆ ಆಗಿರುವ ಹೊಸ ಪ್ರೋಮೋನಲ್ಲಿ ಬಿಗ್ಬಾಸ್ 10 ಆರಂಭದ ದಿನಾಂಕದ ಬಗ್ಗೆ ಮಾಹಿತಿ ನೀಡಲಾಗಿದೆ.
ಕನ್ನಡ ಬಿಗ್ಬಾಸ್ 10ನೇ ಸೀಸನ್ ಪ್ರಸಾರ ಅಕ್ಟೋಬರ್ 08 ರಿಂದ ಆರಂಭವಾಗಲಿದೆ. ಅಕ್ಟೋಬರ್ 8ರಂದು ಬಿಗ್ಬಾಸ್ 10ಕ್ಕೆ ಅದ್ಧೂರಿ ಚಾಲನೆ ದೊರೆಯಲಿದೆ. ಈ ಹಿಂದೆ ಸೆಪ್ಟೆಂಬರ್ 14ರಂದು ಬಿಡುಗಡೆ ಮಾಡಲಾಗಿದ್ದ ಪ್ರೋಮೋ ಅನ್ನೇ ಇಂದು ಮತ್ತೊಮ್ಮೆ ಬಿಡುಗಡೆ ಮಾಡಲಾಗಿದ್ದು, ಪ್ರೋಮೋನ ಅಂತ್ಯದಲ್ಲಿ ಅಕ್ಟೋಬರ್ 8ರಿಂದ ಪ್ರಸಾರ ಆರಂಭವಾಗಲಿದೆ ಎಂದು ಸೇರಿಸಲಾಗಿದೆ. ‘ಊರ ಹಬ್ಬಕ್ಕೆ ಇಲ್ಲಿದೆ ರೀಸನ್; ಶುರುವಾಗ್ತಿದೆ ಹ್ಯಾಪಿ ‘ಬಿಗ್ಬಾಸ್ ಕನ್ನಡ’ ಹತ್ತನೇ ಸೀಸನ್ ಅಕ್ಟೋಬರ್ 8 ರಿಂದ” ಎಂದು ಮಾಹಿತಿಯನ್ನು ಪ್ರೋಮೋ ಜೊತೆಗೆ ಹಂಚಿಕೊಳ್ಳಲಾಗಿದೆ.
ಊರ ಹಬ್ಬಕ್ಕೆ ಇಲ್ಲಿದೆ ರೀಸನ್; ಶುರುವಾಗ್ತಿದೆ HAPPY ‘BIGG BOSS KANNADA’ ಹತ್ತನೇ ಸೀಸನ್ ಅಕ್ಟೋಬರ್ 8 ರಿಂದ!
ಅಕ್ಟೋಬರ್ 8 ರಿಂದ | #BiggBossKannada #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/VlS12Fhm3C
— Colors Kannada (@ColorsKannada) September 22, 2023
ಈ ಹಿಂದಿನ ಬಾರಿಯಂತೆ ಈ ಬಾರಿಯೂ ಜನಪ್ರಿಯ ಟಿವಿ, ಸಿನಿಮಾ ತಾರೆಯರ ಜೊತೆಗೆ ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಸಹ ಬಿಗ್ಬಾಸ್ ಮನೆ ಸೇರಲಿದ್ದಾರೆ. ಈ ಬಾರಿ ಯಾರ್ಯಾರು ಬಿಗ್ಬಾಸ್ ಮನೆ ಸೇರಲಿದ್ದಾರೆ ಎಂಬ ಲೆಕ್ಕಾಚಾರ ಈಗಾಗಲೇ ಆರಂಭವಾಗಲಿದೆ. ಆದರೆ ಸ್ಪರ್ಧಿಗಳ ಪಟ್ಟಿಯನ್ನು ಪ್ರತಿಭಾರಿಯಂತೆ ಗೌಪ್ಯವಾಗಿಟ್ಟಿರುವ ವಾಹಿನಿ, ಕಾರ್ಯಕ್ರಮದ ಲಾಂಚ್ ದಿನವೇ ಪ್ರೇಕ್ಷಕರಿಗೆ ಸ್ಪರ್ಧಿಗಳ ಮಾಹಿತಿ ತಿಳಿಯುವಂತೆ ಜಾಗೃತೆ ವಹಿಸಿದೆ.
ಇದನ್ನೂ ಓದಿ:ಎರಡೇ ವಾರಕ್ಕೆ ಬಿಗ್ಬಾಸ್ನಿಂದ ಹೊರಬಂದ ಶಕೀಲ, ಪಡೆದ ಸಂಭಾವನೆ ಎಷ್ಟು?
ಇದು ಹತ್ತನೇ ಸೀಸನ್ ಆಗಿರುವ ಕಾರಣ ತುಸು ಭಿನ್ನವಾಗಿ, ಅದ್ಧೂರಿಯಾಗಿ ಬಿಗ್ಬಾಸ್ ರಿಯಾಲಿಟಿ ಶೋ ಇರಲಿದೆ ಎನ್ನಲಾಗುತ್ತಿದೆ. ಸಾಮಾನ್ಯರೂ ಈ ಬಾರಿ ಬಿಗ್ಬಾಸ್ ಮನೆ ಸೇರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಬಿಗ್ಬಾಸ್ 10ರ ಮೊದಲ ಪ್ರೋಮೋ ಈ ಬಗ್ಗೆ ಸಣ್ಣ ಸುಳಿವೊಂದನ್ನು ಬಿಟ್ಟುಕೊಟ್ಟಿದೆ.
ಇನ್ನು ಈ ಬಾರಿ ಯಾವ ಯಾವ ಸ್ಪರ್ಧಿಗಳು ಬಿಗ್ಬಾಸ್ ಮನೆ ಸೇರಲಿದ್ದಾರೆ ಎಂಬ ಕುತೂಹಲ ಸಾಮಾನ್ಯ. ಕಳೆದ ಬಾರಿಯಂತೆ ಅನುಭವಿ ಸ್ಪರ್ಧಿಗಳು ಹಾಗೂ ಹೊಸ ಸ್ಪರ್ಧಿಗಳ ನಡುವೆ ಸ್ಪರ್ಧೆ ಮಾಡಿಸುತ್ತಾರೆಯೇ? ಅಥವಾ ಈ ಬಾರಿ ಸಂಪೂರ್ಣ ಹೊಸಬರನ್ನೇ ಕರೆತರುತ್ತಾರೆಯೋ ಕಾದು ನೋಡಬೇಕಿದೆ.