ಬಿಗ್​ಬಾಸ್: ಮನೆ ಒಳಗೆ ಹೋಗುವ ಮುನ್ನವೇ ಎಲಿಮಿನೇಷನ್: ಏನಿದು ಹೊಸ ಆಟ

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10 ಇಂದು (ಅಕ್ಟೋಬರ್ 08) ಆರಂಭಗೊಳ್ಳಲಿದೆ. ಬಿಗ್​ಬಾಸ್ ಮನೆ ಪ್ರವೇಶಿಸುವ ಮೊದಲೇ ಸ್ಪರ್ಧಿಗಳು ಎಲಿಮಿನೇಶನ್ ಎದುರಿಸಲಿದ್ದಾರೆ.

ಬಿಗ್​ಬಾಸ್: ಮನೆ ಒಳಗೆ ಹೋಗುವ ಮುನ್ನವೇ ಎಲಿಮಿನೇಷನ್: ಏನಿದು ಹೊಸ ಆಟ
ಬಿಗ್​ಬಾಸ್ ಕನ್ನಡ
Follow us
ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:Oct 09, 2023 | 8:59 AM

ಬಿಗ್​ಬಾಸ್ (Bigg Boss) ಕನ್ನಡ 10ನೇ ಸೀಸನ್ ಇಂದಿನಿಂದ (ಅಕ್ಟೋಬರ್ 08) ಪ್ರಸಾರ ಆರಂಭಿಸಲಿದೆ. ಬಿಗ್​ಬಾಸ್ ಉದ್ಘಾನೆ ಕಾರ್ಯಕ್ರಮದ ಚಿತ್ರೀಕರಣ ಈಗಾಗಲೇ ಮಾಡಲಾಗಿದೆ, ಅಂತೆಯೇ ಬಿಗ್​ಬಾಸ್ ಉದ್ಘಾಟನೆ ಕಾರ್ಯಕ್ರಮದ ಪ್ರೋಮೋಗಳನ್ನು ಸಹ ಕಲರ್ಸ್ ವಾಹಿನಿ ಹಂಚಿಕೊಂಡಿದೆ. ಮನೆಯ ಒಳಗೆ ಹೋಗಲಿರುವ ಕೆಲವು ಸ್ಪರ್ಧಿಗಳ ಮಾಹಿತಿ ಪ್ರೋಮೋದಿಂದ ಬಹಿರಂಗವಾಗಿದೆ. ಮಾತ್ರವಲ್ಲದೆ, ಟಾಸ್ಕ್ ಒಂದನ್ನು ಎದುರಿಸಿ ಗೆದ್ದವರಷ್ಟೆ ಈ ಬಾರಿ ಬಿಗ್​ಬಾಸ್ ಮನೆ ಪ್ರವೇಶ ಮಾಡಲಿರುವುದು ವಿಶೇಷ.

ಹೌದು, ಸ್ಪರ್ಧಿಗಳನ್ನು ಬಿಗ್​ಬಾಸ್ ಮನೆಯ ಒಳಗೆ ಬಿಡುವ ಮೊದಲು ಅವರಿಗೊಂದು ಟಾಸ್ಕ್ ಇರಲಿದೆ. ಇದು ಬಿಗ್​ಬಾಸ್ ಮನೆಯ ಒಳಗೆ ನಡೆಯುವ ಟಾಸ್ಕ್​ಗಳ ರೀತಿಯಾದದ್ದಲ್ಲ. ಯಾವುದೇ ಸ್ಪರ್ಧಿ ಬಿಗ್​ಬಾಸ್ ಮನೆಯ ಒಳಗೆ ಹೋಗಲು ಅರ್ಹರೇ ಅಥವಾ ಅಲ್ಲವೇ ಎಂಬುದನ್ನು ಕಾರ್ಯಕ್ರಮದಲ್ಲಿ ಹಾಜರಿದ್ದ ಜನರೇ ನಿರ್ಣಯ ಮಾಡುತ್ತಾರೆ. ಜನರ ಮತ ಪಡೆದ ಸ್ಪರ್ಧಿಗಳು ಮಾತ್ರವೇ ಬಿಗ್​ಬಾಸ್ ಮನೆ ಪ್ರವೇಶಿಸಲಿದ್ದಾರೆ.

ಪ್ರತಿ ಸ್ಪರ್ಧಿಯೂ ಬಿಗ್​ಬಾಸ್ ಮನೆಯ ಒಳಗೆ ಹೋಗಬಹುದೇ ಬೇಡವೇ ಎಂದು ಜನರು ಮತ ಹಾಕುತ್ತಾರೆ. ಯಾವ ಸ್ಪರ್ಧಿ 40% ಗೂ ಹೆಚ್ಚು ಮತಗಳನ್ನು ಗಳಿಸುತ್ತಾನೆಯೋ ಆ ಸ್ಪರ್ಧಿ ಮಾತ್ರವೇ ಬಿಗ್​ಬಾಸ್ ಮನೆಯ ಒಳಗೆ ಹೋಗಲು ಅರ್ಹನಾಗುತ್ತಾನೆ. ಕಲರ್ಸ್ ವಾಹಿನಿ ಇದೀಗ ಬಿಡುಗಡೆ ಮಾಡಿರುವ ಪ್ರಮೋನಲ್ಲಿ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ಡ್ರೋನ್ ಪ್ರತಾಪ್ ಹಾಗೂ ಮಾಲೂರು ಸಂತೋಶ್ ಅವರುಗಳು ಬಿಗ್​ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಮೂವರಲ್ಲಿ ಜನರ ಮತಗಳನ್ನು ಪಡೆದು ಬಿಗ್​ಬಾಸ್ ಮನೆಯ ಒಳಗೆ ಹೋಗುವವರು ಯಾರು? ವೇದಿಕೆಯಿಂದಲೇ ಹೊರಕ್ಕೆ ನಿರ್ಗಮಿಸುವವರು ಯಾರು ಎಂಬುದು ಎಪಿಸೋಡ್ ನೋಡಿದ ಬಳಿಕವಷ್ಟೆ ತಿಳಿಯಲಿದೆ. ದಿನದ 24 ಗಂಟೆಯೂ ಜಿಯೋ ಸಿನಿಮಾ ಒಟಿಟಿ ಮೂಲಕ ಬಿಗ್ ಬಾಸ್ ಪ್ರಸಾರ ಕಾಣುತ್ತಿದ್ದು, ಇದನ್ನು ಉಚಿತವಾಗಿ ವೀಕ್ಷಿಸಬಹುದು.

ಬಿಗ್​ಬಾಸ್ 10ನೇ ಸೀಸನ್​ ಇಂದು ಆರಂಭಗೊಳ್ಳಲಿದ್ದು, ಈ ಹಿಂದಿನ ಸೀಸನ್​ಗಳ ಮಾದರಿಯಲ್ಲಿ ಸುದೀಪ್ ಅವರೇ ಈ ಸೀಸನ್​ ಅನ್ನು ನಿರೂಪಣೆ ಮಾಡಲಿದ್ದಾರೆ. ಪತ್ರಕರ್ತ ಗೌರೀಶ್ ಅಕ್ಕಿ, ಉರಗ ತಜ್ಞ ಸ್ನೇಕ್ ಶ್ಯಾಮ್, ಸಮಾಜ ಸೇವಕ ವರ್ತೂರು ಸಂತೋಶ್, ಡ್ರೋನ್ ಪ್ರತಾಪ್, ಇಶಾನಿ, ಚಾರ್ಲಿ ಸಿನಿಮಾದಲ್ಲಿ ನಟಿಸಿದ್ದ ನಾಯಿ, ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್, ನೀತು ಶೆಟ್ಟಿ ಅವರುಗಳು ಈ ಬಾರಿ ಬಿಗ್​ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:36 pm, Sun, 8 October 23

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?