AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Namratha Gowda: ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಮೊದಲ ಸ್ಪರ್ಧಿ ನಮ್ರತಾ ಗೌಡ; ನಟಿಯ ಪರಿಚಯ ಇಲ್ಲಿದೆ..

Bigg Boss Kannada Season 10: ಮೊದಲ ಸ್ಪರ್ಧಿಯಾಗಿ ನಟಿ ನಮ್ರತಾ ಗೌಡ ಅವರು ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಅವರನ್ನು ಕಿಚ್ಚ ಸುದೀಪ್​ ಆಪ್ತವಾಗಿ ಸ್ವಾಗತಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ನಮ್ರತಾ ಗೌಡ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋಗೆ ಬಂದಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

Namratha Gowda: ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಮೊದಲ ಸ್ಪರ್ಧಿ ನಮ್ರತಾ ಗೌಡ; ನಟಿಯ ಪರಿಚಯ ಇಲ್ಲಿದೆ..
Namratha Gowda
ಮದನ್​ ಕುಮಾರ್​
|

Updated on:Oct 08, 2023 | 7:30 PM

Share

ಭಾರಿ ನಿರೀಕ್ಷೆ ಮೂಡಿಸಿರುವ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಆರಂಭ ಆಗಿದೆ. ವಿವಿಧ ಮನಸ್ಥಿತಿಯ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡುತ್ತಿದ್ದಾರೆ. ಮೊದಲ ಸ್ಪರ್ಧಿಯಾಗಿ ನಟಿ ನಮ್ರತಾ ಗೌಡ (Namratha Gowda) ಅವರು ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಕಿಚ್ಚ ಸುದೀಪ್​ ಅವರು ಎಲ್ಲ ಸ್ಪರ್ಧಿಗಳನ್ನು ಆಪ್ತವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ನಮ್ರತಾ ಗೌಡ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ರಿಯಾಲಿಟಿ ಶೋಗೆ ಬಂದಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ‘ಕಲರ್ಸ್​ ಕನ್ನಡ’ ವಾಹಿನಿ ಮತ್ತು ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಈ ಶೋ ಪ್ರಸಾರ ಆಗುತ್ತಿದೆ.

ಭರ್ಜರಿಯಾಗಿ ಡ್ಯಾನ್ಸ್​ ಮಾಡುವ ಮೂಲಕ ನಮ್ರತಾ ಗೌಡ ಅವರು ಬಿಗ್​ ಬಾಸ್​ ವೇದಿಕೆಗೆ ಎಂಟ್ರಿ ನೀಡಿದ್ದಾರೆ. 100 ದಿನಗಳ ಕಾಲ ನಡೆಯುವ ಈ ರಿಯಾಲಿಟಿ ಶೋನಲ್ಲಿ ಗೆಲ್ಲುವ ಭರವಸೆ ಇಟ್ಟುಕೊಂಡು ಎಲ್ಲ ಸ್ಪರ್ಧಿಗಳು ಬಂದಿದ್ದಾರೆ. ಇದು 10ನೇ ಸೀಸನ್​ ಆಗಿರುವುದರಿಂದ ಎಲ್ಲವೂ ಭರ್ಜರಿಯಾಗಿ ಇರಲಿದೆ. ಕೆಲವು ನಿಯಮಗಳು ಹೊಸದಾಗಿ ಸೇರ್ಪಡೆ ಆಗಿವೆ.

‘ನಾನು ನರ್ವಸ್​ ಆಗಿದ್ದೇನೆ. ಒಂದು ವಾರ ಮಾತ್ರ ತಂದೆ-ತಾಯಿಯನ್ನು ಬಿಟ್ಟು ಇದ್ದಿದ್ದು. ಇಲ್ಲಿ 100 ದಿನ ಇರುತ್ತೇವೆ ಎಂಬ ಭರವಸೆಯಿಂದ ಬಂದಿದ್ದೇನೆ. ಜೀವನದ ಬಗ್ಗೆ ಕಲಿಯಲು ಬಂದಿದ್ದೇನೆ. ಬಾಲ್ಯವನ್ನು ನಾನು ಮಿಸ್​ ಮಾಡಿಕೊಂಡಿದ್ದೇನೆ. ಅದನ್ನು ನಾನು ಇಲ್ಲಿ ನೋಡಬೇಕು’ ಎಂದು ನಮ್ರತಾ ಹೇಳಿದ್ದಾರೆ. ಅವರು ಈ ಶೋನಲ್ಲಿ ಸ್ಪರ್ಧಿಸಲು ಅರ್ಹರು ಹೌದೋ ಅಲ್ಲವೋ ಎಂದು ಓಟಿಂಗ್​ ಮೂಲಕ ನಿರ್ಧರಿಸಲಾಯಿತು. 86 ಪರ್ಸೆಂಟ್​ ಓಟ್​ ಪಡೆಯುವ ಮೂಲಕ ಅವರು ಬಿಗ್​ ಬಾಸ್​ ಮನೆ ಒಳಗೆ ಪ್ರವೇಶ ಪಡೆದರು.

ನಮ್ರತಾ ಗೌಡ ಹಿನ್ನೆಲೆ:

‘ಕೃಷ್ಣ ರುಕ್ಮಿಣಿ’ ಧಾರಾವಾಯಿ ಮೂಲಕ ನಮ್ರತಾ ಗೌಡ ಅವರು ಕಿರಿತೆರೆಯಲ್ಲಿ ಜರ್ನಿ ಆರಂಭಿಸಿದರು. ನಂತರ ‘ಪುಟ್ಟಗೌರಿ’ ಮದುವೆ ಧಾರಾವಾಹಿಯಲ್ಲಿ ಹಿಮಾ ಎಂಬ ಪಾತ್ರವನ್ನು ಮಾಡಿ ಅವರು ಫೇಮಸ್​ ಆದರು. ‘ನಾಗಿಣಿ 2’ ಧಾರಾವಾಹಿಯಲ್ಲಿ ಅವರು ಮಾಡಿದ ಶಿವಾನಿ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತು. ಡ್ಯಾನ್ಸ್​ ರಿಯಾಲಿಟಿ ಶೋಗಳಲ್ಲೂ ಅವರು ಸ್ಪರ್ಧಿಸಿದ್ದಾರೆ. ಈಗ ಬಿಗ್​ ಬಾಸ್​ ವೇದಿಕೆಗೆ ಬಂದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ನಮ್ರತಾ ಗೌಡ ಅವರು ಬಿಕಿನಿ ಫೋಟೋ ಹಾಕಿ ಸುದ್ದಿ ಆಗಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:40 pm, Sun, 8 October 23

ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?