Bigg Boss: ಸಾಧಿಸುವ ಛಲದ ಸ್ನೇಹಿತ್ ಗೌಡ, ಉಳಿಯುತ್ತಾರಾ ನೂರು ದಿನ

Bigg Boss 10: ಬಿಗ್​ಬಾಸ್ ಕನ್ನಡ 10ನೇ ಸೀಸನ್​ನ ಎರಡನೇ ಸ್ಪರ್ಧಿಯಾಗಿ ಸ್ನೇಹಿತ್ ಗೌಡ ಮನೆಯೊಳಗೆ ಕಾಲಿಟ್ಟಿದ್ದಾರೆ. ಇವರ ಪ್ಲಸ್​ ಏನು? ಮೈನಸ್ ಏನು? ಹಿನ್ನೆಲೆ ಏನು? ಎಲ್ಲ ಮಾಹಿತಿ ಇಲ್ಲಿದೆ.

Bigg Boss: ಸಾಧಿಸುವ ಛಲದ ಸ್ನೇಹಿತ್ ಗೌಡ, ಉಳಿಯುತ್ತಾರಾ ನೂರು ದಿನ
Follow us
ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:Oct 09, 2023 | 9:01 AM

ಬಿಗ್​ಬಾಸ್ (Bigg Boss) ಕನ್ನಡ ಸೀಸನ್ 10 (Bigg Boss Kannada) ಪ್ರಾರಂಭವಾಗಿದೆ. ಪ್ರತಿ ಭಾರಿಯಂತೆಯೂ ಈ ಬಾರಿಯೂ ಹಲವು ಜನಪ್ರಿಯ ನಟ-ನಟಿಯರು ಬಿಗ್​ಬಾಸ್ ಮನೆಗೆ ಸ್ಪರ್ಧಿಗಳಾಗಿ ಬರುವವರಿದ್ದಾರೆ. ಕಲರ್ಸ್​ ವಾಹಿನಿಯ ಧಾರಾವಾಹಿಗಳಲ್ಲಿ ನಟಿಸುವ ನಟ-ನಟಿಯರಿಗೆ ಸಾಮಾನ್ಯವಾಗಿ ಬಿಗ್​ಬಾಸ್​ನಲ್ಲಿ ಆದ್ಯತೆ ಹೆಚ್ಚಿರುತ್ತದೆ. ಅಂತೆಯೇ ಈ ಬಾರಿಯೂ ಕಲರ್ಸ್​ನ ನಟ-ನಟಿಯರು ಬಿಗ್​ಬಾಸ್ ಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಈ ಬಾರಿ ಬಿಗ್​ಬಾಸ್​ನ ಎರಡನೇ ಸ್ಪರ್ಧಿಯಾಗಿ ನಮ್ಮ ಮನೆ ಯುವರಾಣಿ ಧಾರಾವಾಹಿ ನಟ ಸ್ನೇಹಿತ್ ಗೌಡ (Snehit Gowda) ಕಾಲಿಟ್ಟಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

ಜೀವನದಲ್ಲಿ ಅಗಾಧ ಶಿಸ್ತು, ಸ್ಪಷ್ಟ ಗುರಿಯನ್ನು ಹೊಂದಿರುವ ಸ್ನೇಹಿತ್ ಗೌಡ, ತುಸು ಭಾವುಕ ಜೀವಿಯೂ ಹೌದು. ನಟನಾಗಲೇ ಬೇಕೆಂಬ ಅಛಲ ಗುರಿಯಿಂದ ಹಲವು ವರ್ಷಗಳ ಕಾಲ ಕಷ್ಟಪಟ್ಟು ಇದೀಗ ‘ನಮ್ಮ ಮನೆ ಯುವರಾಣಿ’ ಧಾರಾವಾಹಿಯ ಲೀಡ್ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಈಗ ಧಾರಾವಾಹಿಯಿಂದ ರಿಯಾಲಿಟಿ ಶೋಗೆ ಬಂದಿದ್ದಾರೆ. ‘ನಿನ್ನ ಕಂಡ ಕ್ಷಣದಿಂದ’ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಬಿಗ್​ಬಾಸ್ ವೇದಿಕೆ ಬಂದರು ಸ್ನೇಹಿತ್ ಗೌಡ.

ಒಳ್ಳೆ ನಟ ಆಗುವ ಅದರ ಜೊತೆಯಲ್ಲಿ ಒಳ್ಳೆಯ ಮನುಷ್ಯ ಆಗುವ ಆಸೆ ಸ್ನೇಹಿತ್​ಗೆ. ನಟನೆಯ ಬಗ್ಗೆ ಅಪಾರ ಒಲವು ಹೊಂದಿರುವ ಸ್ನೇಹಿತ್, ಪಾತ್ರಕ್ಕೆ ತಯಾರಾಗುವುದರಿಂದ ಹಿಡಿದು ನಟನೆಯ ಪ್ರೋಸೆಸ್ ಮೇಲೆ ಅತೀವ ಪ್ರೀತಿ ಇರಿಸಿಕೊಂಡಿದ್ದಾರಂತೆ. ನಟಿಸುವಾಗಲೇ ಹೆಚ್ಚು ಮನುಷ್ಯನಾಗಿರುತ್ತೀನಿ ಎಂಬುದು ಸ್ನೇಹಿತ್ ಗೌಡ ನಂಬಿಕೆ.

ಇದನ್ನೂ ಓದಿ:ಬಿಗ್​ಬಾಸ್: ಮನೆ ಒಳಗೆ ಹೋಗುವ ಮುನ್ನವೇ ಎಲಿಮಿನೇಷನ್: ಏನಿದು ಹೊಸ ಆಟ

ನಟನಾಗುವ ಆಸೆಯಿಂದ ಹಲವು ವರ್ಷಗಳ ಕಾಲ ಕಷ್ಟಪಟ್ಟಿದ್ದಾರೆ ಸ್ನೇಹಿತ್ ಗೌಡ. ಹಲವು ನಾಟಕಗಳಲ್ಲಿ ನಟಿಸಿದ್ದಾರೆ. ಪಂಜಾಬಿ, ಹೈದರಾಬಾದಿ, ಇಂಗ್ಲೀಷ್ ಹೀಗೆ ಸಿಕ್ಕ ಯಾವ ಅವಕಾಶವನ್ನೂ ಬಿಟ್ಟಿಲ್ಲ. ಆ ಬಳಿಕವೂ ಕಲರ್ಸ್​ ವಾಹಿನಿಯ ಬಹುತೇಕ ಎಲ್ಲ ಪ್ರಮುಖ ಧಾರಾವಾಹಿಗಳಿಗೂ ಆಡಿಷನ್ ಕೊಟ್ಟಿದ್ದರಂತೆ ಸ್ನೇಹಿತ್ ಹಲವು ವರ್ಷಗಳ ಕಾಲ ಸೈಕಲ್ ತುಳಿದ ಬಳಿಕ 2019ರಲ್ಲಿ ‘ನಮ್ಮ ಮನೆ ಯುವರಾಣಿ’ ಧಾರಾವಾಹಿಯಲ್ಲಿ ಅವರಿಗೆ ಲೀಡ್ ಪಾತ್ರ ದೊರೆಯಿತು.

ಬಿಗ್​ಬಾಸ್​ನ ಭಾಗವಾಗಬೇಕು ಎಂಬುದು ಸಹ ಸ್ನೇಹಿತ್​ರ ಕನಸುಗಳಲ್ಲಿ ಒಂದು ಕಳೆದ ವರ್ಷವೇ ಬಿಗ್​ಬಾಸ್ ಮನೆಯಿಂದ ಬುಲಾವ್ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದರಂತೆ ಆದರೆ ಅದು ಈ ವರ್ಷ ಸಾಕಾರವಾಗಿದೆ. ಬಹಳ ಶಿಸ್ತಿನ ಜೀವನ ಶೈಲಿಯನ್ನು ಪಾಲಿಸುತ್ತಿದ್ದಾರೆ ಸ್ನೇಹಿತ್. ಫಿಟ್​ನೆಸ್ ಹಾಗೂ ಡಯಟ್ ಕಾನ್ಶಿಯಸ್ ಆಗಿರುವ ಸ್ನೇಹಿತ್​ ಸಕ್ಕರೆ, ಉಪ್ಪು ಸೇವಿಸುವುದಿಲ್ಲ. ಕೆಫಿನ್ ಇರುತ್ತದೆ ಎಂಬ ಕಾರಣಕ್ಕೆ ಕಾಫಿ ಸಹ ಸೇವಿಸುವುದಿಲ್ಲ.

ಬಿಗ್​ಬಾಸ್​ನಲ್ಲಿ ತೀರಾ ಶಿಸ್ತಿನ ಜೀವನ ಶೈಲಿ ಇರುವವರಿಗೆ ಸುಲಭವಾಗಿರುವುದಿಲ್ಲ. ಸ್ನೇಹಿತ್​ಗೆ ಬಿಗ್​ಬಾಸ್​ನಲ್ಲಿ ಸಾಕಷ್ಟು ಸವಾಲುಗಳು ಎದುರಾಗುವುದಂತೂ ಪಕ್ಕಾ. ಎಲ್ಲವನ್ನೂ ಹೇಗೆ ಎದುರಿಸಿ ಎಷ್ಟು ದಿನ ಮನೆಯಲ್ಲಿ ಉಳಿಯಲಿದ್ದಾರೆ ಎಂಬುದು ಕುತೂಹಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:34 pm, Sun, 8 October 23