Bigg Boss Kannada: ದೊಡ್ಮನೆಗೆ 5ನೇ ಸ್ಪರ್ಧಿಯಾಗಿ ತುಕಾಲಿ ಸಂತೋಷ್ ಎಂಟ್ರಿ; ಇಂಥ ಹೆಸರು ಬಂದಿದ್ದು ಯಾಕೆ?
Tukali Santhosh: ಈವರೆಗೂ ಕನ್ನಡದಲ್ಲಿ ‘ಬಿಗ್ ಬಾಸ್’ ರಿಯಾಲಿಟಿ ಶೋನ 9 ಸೀಸನ್ಗಳನ್ನು ಪೂರೈಸಲಾಗಿದೆ. ಈ ಎಲ್ಲ ಸೀಸನ್ಗಳನ್ನು ಕಿಚ್ಚ ಸುದೀಪ್ ಅವರು ನಡೆಸಿಕೊಟ್ಟಿದ್ದಾರೆ. ಈಗ 10ನೇ ಸೀಸನ್ಗೂ ಅವರೇ ಸಾರಥ್ಯ ವಹಿಸಿದ್ದಾರೆ. ಈ ಸೀಸನ್ನ ಸ್ಪರ್ಧಿಗಳನ್ನು ದೊಡ್ಮನೆಗೆ ವೆಲ್ಕಮ್ ಮಾಡಲಾಗಿದೆ. 5ನೇ ಸ್ಪರ್ಧಿಯಾಗಿ ತುಕಾಲಿ ಸಂತೋಷ್ ಪ್ರವೇಶ ಪಡೆದಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ಆರಂಭ ಆಗಿದೆ. ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಅದ್ದೂರಿಯಾಗಿ ಈ ರಿಯಾಲಿಟಿ ಶೋಗೆ ಚಾಲನೆ ಸಿಕ್ಕಿದೆ. ಈಗಾಗಲೇ ನಮ್ರತಾ ಗೌಡ, ಸ್ನೇಹಿತ್ ಗೌಡ, ಈಶಾನಿ, ವಿನಯ್ ಅವರು ಬಿಗ್ ಬಾಸ್ (Bigg Boss Kannada) ಮನೆಗೆ ಕಾಲಿಟ್ಟಿದ್ದಾರೆ. ಪ್ರತಿಯೊಬ್ಬರು ಕೂಡ ಅಗತ್ಯ ಮಟ್ಟದ ಓಟಿಂಗ್ ಪಡೆದರೆ ಮಾತ್ರ ದೊಡ್ಮನೆ ಪ್ರವೇಶಿಸಲು ಅರ್ಹರಾಗುತ್ತಾರೆ. ಅದೇ ರೀತಿ 5ನೇ ಸ್ಪರ್ಧಿಯಾಗಿ ತುಕಾಲಿ ಸಂತೋಷ್ (Tukali Santhosh) ಅವರು ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಎಲ್ಲರೂ ಕೂಡ 100 ದಿನಗಳ ಕಾಲ ದೊಡ್ಮನೆಯೊಳಗೆ ಇರುವ ಆಕ್ಷಾಂಕ್ಷೆ ಇಟ್ಟುಕೊಂಡು ಈ ರಿಯಾಲಿಟಿ ಶೋಗೆ ಬಂದಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.
‘ಬಿಗ್ ಬಾಸ್’ ರಿಯಾಲಿಟಿ ಶೋಗೆ ದೊಡ್ಡ ಪ್ರೇಕ್ಷಕ ವರ್ಗ ಇದೆ. ಈವರೆಗೂ ಕನ್ನಡದಲ್ಲಿ 9 ಸೀಸನ್ಗಳನ್ನು ಪೂರೈಸಲಾಗಿದೆ. ಈ ಎಲ್ಲ ಸೀಸನ್ಗಳನ್ನು ಕಿಚ್ಚ ಸುದೀಪ್ ಅವರು ನಡೆಸಿಕೊಟ್ಟಿದ್ದಾರೆ. ಈಗ 10ನೇ ಸೀಸನ್ಗೂ ಅವರೇ ಸಾರಥ್ಯ ವಹಿಸಿದ್ದಾರೆ. ಬಿಗ್ ಬಾಸ್ಗೆ ಬಂದ ಎಲ್ಲ ಸ್ಪರ್ಧಿಗಳನ್ನು ವೇದಿಕೆ ಮೇಲೆ ಸುದೀಪ್ ಅವರು ಪರಿಚಯಿಸಿದ್ದಾರೆ. ಇಂದು (ಅಕ್ಟೋಬರ್ 8) ಮೊದಲ ದಿನ ಆದ್ದರಿಂದ ಮನೆಯ ವಾತಾವರಣ ಕೂಲ್ ಆಗಿದೆ. ಎರಡನೇ ದಿನದಿಂದ ಪೈಪೋಟಿ ಹೆಚ್ಚಲಿದೆ.
View this post on Instagram
ಇದೆಂಥ ಹೆಸರು?
ಕಾಮಿಡಿ ಶೋಗಳ ಮೂಲಕ ಗುರುತಿಸಿಕೊಂಡಿರುವ ತುಕಾಲಿ ಸಂತೋಷ್ ಅವರು ಈಗ ಬಿಗ್ ಬಾಸ್ ಮನೆ ಒಳಗೆ ಕಾಲಿಡುವ ಅವಕಾಶ ಪಡೆದಿದ್ದಾರೆ. ಒಂದು ಸ್ಕಿಟ್ನಲ್ಲಿ ತುಕಾಲಿ ಎಂಬ ಹೆಸರು ಇಟ್ಟುಕೊಂಡಿದ್ದರು ಸಂತೋಷ್. ಆ ಬಳಿಕ ತುಕಾಲಿ ಸಂತು ಎಂದೇ ಅವರು ಫೇಮಸ್ ಆದರು. ಆ ಬಗ್ಗೆ ಸಂತೋಷ್ ಅವರಿಗೆ ಖುಷಿ ಇದೆ.
ಇದನ್ನೂ ಓದಿ: Namratha Gowda: ‘ಬಿಗ್ ಬಾಸ್ ಕನ್ನಡ ಸೀಸನ್ 10’ ಮೊದಲ ಸ್ಪರ್ಧಿ ನಮ್ರತಾ ಗೌಡ; ನಟಿಯ ಪರಿಚಯ ಇಲ್ಲಿದೆ..
ಪತ್ನಿ ಸಮೇತರಾಗಿ ಸಂತೋಷ್ ಅವರು ಬಿಗ್ ಬಾಸ್ ವೇದಿಕೆಗೆ ಬಂದಿದ್ದರು. ಹೆಂಡತಿಯ ಜೊತೆಗೇ ನೀವು ದೊಡ್ಮನೆ ಒಳಗೆ ಸ್ಪರ್ಧಿಸುವುದು ಒಳ್ಳೆಯದು ಎಂದು ಸುದೀಪ್ ಅಭಿಪ್ರಾಯಪಟ್ಟರು. ಆ ಕುರಿತು ವೇದಿಕೆಯಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯಿತು. ಕಡೆಗೂ ಪತ್ನಿಯನ್ನು ಬಿಟ್ಟು ಸಂತೋಷ್ ಒಬ್ಬರೇ ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:31 pm, Sun, 8 October 23