Bigg Boss Kannada: ‘ರಂಗೋಲಿ’ ನಟಿ ಸಿರಿ ಈಗ ಬಿಗ್ ಬಾಸ್ ಸ್ಪರ್ಧಿ; 7ನೇ ಕಂಟೆಸ್ಟೆಂಟ್ ಆಗಿ ದೊಡ್ಮನೆ ಪ್ರವೇಶ
Rangoli Serial Actress Siri: ಪ್ರತಿಯೊಬ್ಬರೂ ಬಿಗ್ ಬಾಸ್ ವೇದಿಕೆಯಲ್ಲಿ ಆಡಿಯನ್ಸ್ ಕಡೆಯಿಂದ ಶೇಕಡ 80ಕ್ಕೂ ಹೆಚ್ಚು ವೋಟ್ ಪಡೆಯಬೇಕು. ಹಾಗಿದ್ದರೆ ಮಾತ್ರ ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಅವಕಾಶ ಸಿಗುತ್ತದೆ. ಸಿರಿ ಕೂಡ ಈ ಅಗ್ನಿಪರೀಕ್ಷೆಯನ್ನು ದಾಟಿಕೊಂಡು ದೊಡ್ಮನೆಯಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ. 7ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ.
ಕನ್ನಡದ ಕಿರುತೆರೆ ಲೋಕದಲ್ಲಿ ‘ರಂಗೋಲಿ’ ಧಾರಾವಾಹಿ (Rangoli Kannada Serial) ಸೂಪರ್ ಹಿಟ್ ಆಗಿತ್ತು. ಆ ಸೀರಿಯಲ್ ಮೂಲಕ ಭಾರಿ ಜನಪ್ರಿಯತೆ ಪಡೆದ ನಟಿ ಸಿರಿ ಅವರು ಈಗ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ಬಹಳ ಕಲರ್ಫುಲ್ ಆಗಿ ಆರಂಭ ಆಗಿದೆ. ಎಲ್ಲ ಸ್ಪರ್ಧಿಗಳು ಕೂಡ ಗೆಲ್ಲುವ ಗುರಿ ಇಟ್ಟುಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಎಲ್ಲರನ್ನೂ ಕಿಚ್ಚ ಸುದೀಪ್ ಅವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿ ಮೂಲಕ 24 ಗಂಟೆಯೂ ಪ್ರಸಾರ ಕಾಣುತ್ತಿದೆ. ನಮ್ರತಾ ಗೌಡ, ಸ್ನೇಹಿತ್, ವಿನಯ್, ತುಕಾಲಿ ಸಂತೋಷ್ ಮುಂತಾದವರು ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ. 7ನೇ ಸ್ಪರ್ಧಿಯಾಗಿ ಖ್ಯಾತ ನಟಿ ಸಿರಿ (Rangoli Serial Actress Siri) ಅವರು ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ.
ತಾವು ಬಿಗ್ ಬಾಸ್ಗೆ ಬಂದಿದ್ದು ಯಾಕೆ ಎಂದು ಸಿರಿ ವಿವರಿಸಿದ್ದಾರೆ. ‘ಇಷ್ಟು ವರ್ಷ ಜನರು ಒಂದು ಪಾತ್ರವಾಗಿ ನನ್ನನ್ನು ನೋಡಿದ್ದಾರೆ. ಈಗ ನಾನು ನಾನಾಗಿಯೇ ಇರಬೇಕು ಅಂತ ಆಸೆಪಡುತ್ತೇನೆ. ನನ್ನ ಜರ್ನಿ ನನಗೆ ತುಂಬ ಖುಷಿ ನೀಡಿದೆ. ಇಷ್ಟವಾದ ಪಾತ್ರಗಳನ್ನು ಮಾಡಿದ್ದೇನೆ. ಚಿಂತೆ ಏನೂ ಇಲ್ಲ. ಕೋಪ, ಖುಷಿಯಲ್ಲಿ ಸಿರಿ ಹೇಗೆ ಇರುತ್ತಾಳೆ ಎಂಬುದನ್ನು ಅಭಿಮಾನಿಗಳಿಗೆ ನಾನು ತೋರಿಸಬೇಕು. ನಾನು ಹೆಚ್ಚು ಸೆನ್ಸಿಟಿವ್ ಹುಡುಗಿ. ಹಾಗಾಗಿ ಸಿಂಗಲ್ ಆಗಿದ್ದೇನೆ. ನಮ್ಮ ಮನೆಗೆ ಬರುವ ಅಳಿಯ, ಒಬ್ಬ ಮಗನಾಗಿ ನಮ್ಮ ಮನೆಯಲ್ಲಿ ಇರಬೇಕು. ಈಗ ನಾನು ನಮ್ಮ ತಂದೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅವರು ಇದ್ದಿದ್ದರೆ ತುಂಬ ಸಂತೋಷಪಡುತ್ತಿದ್ದರು’ ಎಂದು ಸಿರಿ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada: ದೊಡ್ಮನೆಗೆ 5ನೇ ಸ್ಪರ್ಧಿಯಾಗಿ ತುಕಾಲಿ ಸಂತೋಷ್ ಎಂಟ್ರಿ; ಇಂಥ ಹೆಸರು ಬಂದಿದ್ದು ಯಾಕೆ?
ಪ್ರತಿಯೊಬ್ಬರೂ ಬಿಗ್ ಬಾಸ್ ವೇದಿಕೆಯಲ್ಲಿ ಆಡಿಯನ್ಸ್ ಕಡೆಯಿಂದ ಶೇಕಡ 80ಕ್ಕೂ ಹೆಚ್ಚು ವೋಟ್ ಪಡೆಯಬೇಕು. ಹಾಗಿದ್ದರೆ ಮಾತ್ರ ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಅವಕಾಶ ಸಿಗುತ್ತದೆ. ಸಿರಿ ಕೂಡ ಈ ಅಗ್ನಿ ಪರೀಕ್ಷೆಯನ್ನು ದಾಟಿಕೊಂಡು ದೊಡ್ಮನೆಯಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ. ‘ಸಿರಿ ತುಂಬ ಸೂಕ್ಷ್ಮ ವ್ಯಕ್ತಿ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಅವಳಿಗೆ ಕಷ್ಟ ಆಗಬಹುದು’ ಎಂದು ಸಿರಿ ಅವರ ತಾಯಿ ಹೇಳಿದ್ದಾರೆ.
View this post on Instagram
ಕಿರುತೆರೆಯಲ್ಲಿ ಸಿರಿ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಟಿವಿ ಪ್ರೇಕ್ಷಕರು ಅವರನ್ನು ಸಖತ್ ಇಷ್ಟಪಡುತ್ತಾರೆ. ‘ರಂಗೋಲಿ’ ಧಾರಾವಾಹಿ ಮಾಡಿದ ಮೋಡಿಯೇ ಅಂಥದ್ದು. ಈಗ ಅವರು ಮತ್ತೆ ಕಿರುತೆರೆಯ ವೀಕ್ಷಕರನ್ನು ಸೆಳೆದುಕೊಳ್ಳಲು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂಬ ಆಸೆ ಅಭಿಮಾನಿಗಳಿಗೆ ಇದೆ. ಬಿಗ್ ಬಾಸ್ ವೇದಿಕೆಯಲ್ಲಿ ಅದು ಸಾಧ್ಯವಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.