Bigg Boss Kannada: ‘ಜಿಯೋ ಸಿನಿಮಾ’ದಲ್ಲಿ ‘ಬಿಗ್​ ಬಾಸ್​’ ನೋಡುವ ವೀಕ್ಷಕರಿಗೆ ಸಿಗುತ್ತದೆ ಹತ್ತಾರು ಅವಕಾಶ

Jio Cinema: ಈ ಬಾರಿ ‘ಬಿಗ್​ ಬಾಸ್​ ಕನ್ನಡ’ ರಿಯಾಲಿಟಿ ಶೋ ತುಂಬ ವಿಶೇಷವಾಗಿರಲಿದೆ. ಕಿಚ್ಚ ಸುದೀಪ್​ ಅವರ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಕಾರ್ಯಕ್ರಮವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದು. ನೋಡುವುದು ಮಾತ್ರವಲ್ಲದೇ ವೀಕ್ಷಕರು ಸಂವಾದ ಕೂಡ ನಡೆಸಬಹುದು, ಬಹುಮಾನ ಗೆಲ್ಲಬಹುದು. ಅದೇ ಈ ಸಲದ ವಿಶೇಷ.

Bigg Boss Kannada: ‘ಜಿಯೋ ಸಿನಿಮಾ’ದಲ್ಲಿ ‘ಬಿಗ್​ ಬಾಸ್​’ ನೋಡುವ ವೀಕ್ಷಕರಿಗೆ ಸಿಗುತ್ತದೆ ಹತ್ತಾರು ಅವಕಾಶ
ಕಿಚ್ಚ ಸುದೀಪ್​
Follow us
TV9 Web
| Updated By: ಮದನ್​ ಕುಮಾರ್​

Updated on: Oct 08, 2023 | 3:32 PM

‘ಬಿಗ್‌ ಬಾಸ್‌ ಕನ್ನಡ ಸೀಸನ್​ 10’ (Bigg Boss Kannada Season 10) ಕಾರ್ಯಕ್ರಮದ ವೇದಿಕೆ ಝಗಮಗಿಸುತ್ತಿದೆ. ಇದು 10ನೇ ಸೀಸನ್​ ಆದ್ದರಿಂದ ಹಲವು ವಿಶೇಷತೆಗಳು ಪ್ರೇಕ್ಷಕರಿಗೆ ಸಿಗುತ್ತಿವೆ. ಇಂದು (ಅಕ್ಟೋಬರ್​ 8) ಸಂಜೆ 6 ಗಂಟೆಯಿಂದ ಬಿಗ್‌ ಬಾಸ್‌ ಪ್ರಸಾರ ಆರಂಭ ಆಗಲಿದೆ. ಕೇವಲ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಮಾತ್ರವಲ್ಲದೇ ಒಟಿಟಿ ಮೂಲಕವೂ ಈ ರಿಯಾಲಿಟಿ ಶೋ ವೀಕ್ಷಿಸಬಹುದು. ‘ಜಿಯೋ ಸಿನಿಮಾ’ (Jio Cinema) ಮೂಲಕ 24 ಗಂಟೆಯೂ ಈ ಶೋ ನೇರಪ್ರಸಾರ ಕಾಣಲಿದೆ. ಬರೀ ಅಷ್ಟೇ ಅಲ್ಲ, ವೀಕ್ಷಕರಿಗಾಗಿ ಹಲವಾರು ವಿಶೇಷತೆಗಳನ್ನು ಪರಿಚಯಿಸಲಾಗುತ್ತಿದೆ. ಅದರಿಂದಾಗಿ ಈ ಬಾರಿ ಬಿಗ್​ ಬಾಸ್​ (Bigg Boss Kannada) ವೀಕ್ಷಣೆ ಬೇರೆಯದೇ ಫೀಲ್​ ನೀಡಲಿದೆ. ‘ಜಿಯೋ ಸಿನಿಮಾ’ದಲ್ಲಿ ಸಿಗಲಿರುವ ಆ ಎಲ್ಲ ವಿಶೇಷಗಳ ಬಗ್ಗೆ ಇಲ್ಲಿದೆ ಮಾಹಿತಿ…

‘ಬಿಗ್‌ ನ್ಯೂಸ್‌’ ಮಿಸ್​ ಮಾಡಿಕೊಳ್ಳಬೇಡಿ:

ಬಿಗ್‌ ಬಾಸ್‌ ಮನೆಯ ಒಳಗೆ ನಡೆದ ಎಲ್ಲ ಘಟನೆಗಳನ್ನು, ಟಾಸ್ಕ್‌ಗಳ ವಿವರಗಳನ್ನು ‘ಬಿಗ್‌ ನ್ಯೂಸ್‌’ ಬುಲೆಟಿನ್‌ ಮೂಲಕ ಪ್ರೇಕ್ಷಕರಿಗೆ ತಲುಪಿಸಲಾಗುತ್ತದೆ. ದೊಡ್ಮನೆಯೊಳಗಿನ ಎಲ್ಲ ರೋಚಕ ಸಂಗತಿಗಳ ಪೂರ್ತಿ ವರದಿಯನ್ನು ‘ಬಿಗ್‌ ನ್ಯೂಸ್‌’ ಬುಲೆಟಿನ್‌ ಮೂಲಕ ಜನರು ನೋಡಿ ಎಂಜಾಯ್​ ಮಾಡಹುದು.

ಹೇಗಿರಲಿದೆ ‘ಅನ್‌ಸೀನ್‌ ಕಥೆಗಳು’?

ಬಿಗ್‌ ಬಾಸ್‌ ಶೋ ಎಂದರೆ ಅಲ್ಲಿ ಹಲವು ಕಥೆಗಳು ಸಿಗುತ್ತವೆ. ನಿತ್ಯವೂ ಅನೇಕ ರೋಚಕ ಕಹಾನಿಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಪೈಕಿ ಕೆಲವನ್ನು ಮಾತ್ರ ಪ್ರತಿ ದಿನದ ಟಿವಿ ಎಪಿಸೋಡ್‌ನಲ್ಲಿ ನೋಡಬಹುದು. ಆದರೆ ತೆರೆಹಿಂದೆ ನಡೆದ ಇನ್ನೂ ಅನೇಕ ಕಥೆಗಳನ್ನು ವೀಕ್ಷಕರು ಜಿಯೋ ಸಿನಿಮಾದ ‘ಅನ್‌ಸೀನ್‌ ಕಥೆಗಳು’ ಮೂಲಕ ನೋಡಬಹುದು.

‘ಲೈವ್ ಶಾರ್ಟ್ಸ್‌’ ಎಂದರೇನು?

ದೊಡ್ಮನೆಯ ಒಳಗೆ ಆಯಾ ದಿನ ನಡೆದ ಪ್ರಮುಖ ಘಟನಾವಳಿಗಳನ್ನು ಶಾರ್ಟ್​ ಆಗಿ ರಿಕ್ಯಾಪ್ ಮಾಡಿ ವೀಕ್ಷಕರ ಎದುರು ಪ್ರಸ್ತುತ ಪಡಿಸುವ ಪ್ರಯತ್ನವೇ ‘ಲೈವ್ ಶಾರ್ಟ್ಸ್‌’. ಒಂದು ವೇಳೆ ಪ್ರೇಕ್ಷಕರು ಲೈವ್‌ನಲ್ಲಿ ಮಿಸ್‌ ಮಾಡಿಕೊಂಡರೂ ಕೂಡ ಎಲ್ಲ ಪ್ರಮುಖ ಘಟನೆಗಳನ್ನು ‘ಲೈವ್ ಶಾರ್ಟ್ಸ್‌’ ಮೂಲಕ ನೋಡಿ ತಿಳಿದುಕೊಳ್ಳಲು ಅವಕಾಶ ಇರುತ್ತದೆ.

Bigg Boss History: ಜಗತ್ತಿನಲ್ಲಿ ಈವರೆಗೂ ನಡೆದಿವೆ 508 ಬಿಗ್​ ಬಾಸ್​ ಸೀಸನ್​ಗಳು; ಇಲ್ಲಿದೆ ದೀರ್ಘ ಇತಿಹಾಸ

‘ಹೈಪ್ ಚಾಟ್‌’ ಮತ್ತು ‘ವಿಡಿಯೊ ವಿಚಾರ’:

‘ಜಿಯೋ ಸಿನಿಮಾ’ ವೀಕ್ಷಕರು ಬಿಗ್‌ ಬಾಸ್‌ ಮನೆಯಲ್ಲಿನ ಘಟನೆಗಳಿಗೆ ‘ಹೈಪ್ ಚಾಟ್‌’ ಮೂಲಕ ಪ್ರತಿಕ್ರಿಯಿಸಬಹುದು. ಜನರು ತಮ್ಮ ಅಭಿಪ್ರಾಯ ತಿಳಿಸಲು ಈ ಮೂಲಕ ಅವಕಾಶ ಮಾಡಿಕೊಡಲಾಗುತ್ತಿದೆ. ಪ್ರೇಕ್ಷಕರು ಚಾಟ್‌ ಮಾಡುವ ಮೂಲಕ ಅಭಿಪ್ರಾಯಗಳನ್ನು ದಾಖಲಿಸಲು ಸಾಧ್ಯವಿದೆ. ಹಾಗೆಯೇ, ‘ವಿಡಿಯೊ ವಿಚಾರ’ ಮೂಲಕ ಬಿಗ್‌ ಬಾಸ್‌ ಕಾರ್ಯಕ್ರಮದ ಭಾಗವಾಗಲು ಪ್ರೇಕ್ಷಕರಿಗೆ ಅವಕಾಶ ಇದೆ. ಬಿಗ್​ ಬಾಸ್​ ಸ್ಪರ್ಧಿಗಳ ಕುರಿತು, ಅವರ ಟಾಸ್ಕ್‌ಗಳ ಕುರಿತು ವೀಕ್ಷಕರು ತಮ್ಮ ಅಭಿಪ್ರಾಯವನ್ನು ವಿಡಿಯೊ ಮಾಡಿ ತಿಳಿಸಬಹುದು.

‘ವಾಚ್‌ ಆ್ಯಂಡ್ ವಿನ್’:

ಈ ಬಾರಿ ಜಿಯೋ ಸಿನಿಮಾದಲ್ಲಿ ‘ಬಿಗ್‌ ಬಾಸ್‌’ ಕಾರ್ಯಕ್ರಮನ್ನು ಫ್ರೀ ಆಗಿ ನೋಡುವುದು ಮಾತ್ರವಲ್ಲದೇ ವೀಕ್ಷಕರು ಬಹುಮಾನವನ್ನೂ ಗೆಲ್ಲಬಹುದು! ‘ಕಲರ್ಸ್‌ ಕನ್ನಡ’ ವಾಹಿನಿಯ ಪ್ರತಿದಿನದ ಸಂಚಿಕೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವುಗಳಿಗೆ ಜಿಯೋ ಸಿನಿಮಾದಲ್ಲಿ ಉತ್ತರ ನೀಡಬೇಕು. ಸರಿಯಾದ ಉತ್ತರ ನೀಡಿದ ಒಬ್ಬರಿಗೆ ಪ್ರತಿ ದಿನ ಬಹುಮಾನ ಗೆಲ್ಲುವ ಚಾನ್ಸ್​ ಸಿಗುತ್ತದೆ.

ಟ್ರೋಲ್​ ಆದ ಬಿಗ್​ ಬಾಸ್​ ಸ್ಪರ್ಧಿಗಳ ಬಗ್ಗೆ ಪ್ರಶ್ನೆ: ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್​ ಗರಂ

‘ಮೀಮ್‌ ದ ಮೊಮೆಂಟ್’:

ಬಿಗ್‌ ಬಾಸ್‌ ಮನೆಯ ಒಳಗಡೆ ರಸವತ್ತಾದ ಕ್ಷಣಗಳಿಗೆ ಕೊರತೆ ಇರುವುದಿಲ್ಲ. ಅದಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​ ಮಾಡುವುದು ಗೊತ್ತೇ ಇದೆ. ಅದೇ ರೀತಿ ಈಗ ವೀಕ್ಷಕರು ಕೂಡ ಮೀಮ್ಸ್‌ ಮಾಡಿ ಸ್ಪಂದಿಸಬಹುದು. ಅದಕ್ಕಾಗಿ ಜಿಯೋ ಸಿನಿಮಾದಲ್ಲಿ ‘ಮೀಮ್‌ ದ ಮೊಮೆಂಟ್’ ವೇದಿಕೆ ರೆಡಿಯಾಗಿದೆ. ಬಿಗ್​ ಬಾಸ್​ ಸ್ಪರ್ಧಿಗಳ ವರ್ತನೆಗಳ ಮೇಲೆ ಮೀಮ್ಸ್ ಮಾಡುವ ಅವಕಾಶ ಇದರಲ್ಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.