‘ಜಿಯೋ ಸಿನಿಮಾ’ದಲ್ಲಿ 24 ಗಂಟೆಯೂ ಬಿಗ್​ ಬಾಸ್​ ಉಚಿತ ಪ್ರಸಾರ; ವೀಕ್ಷಕರಿಗೂ ಬಹುಮಾನ ಗೆಲ್ಲುವ ಅವಕಾಶ

Bigg Boss Kannada on Jio Cinema: ದಿನದ 24 ಗಂಟೆಯೂ ಬಿಗ್​ ಬಾಸ್​ ಮನೆಯೊಳಗೆ ಏನು ನಡೆಯುತ್ತಿದೆ ಎಂಬುದನ್ನು ಪ್ರೇಕ್ಷಕರು ಜಿಯೋ ಸಿನಿಮಾ ಒಟಿಟಿಯಲ್ಲಿ ನೋಡಬಹುದು. ಅದು ಕೂಡ ಉಚಿತವಾಗಿ! ‘ಕಲರ್ಸ್‌ ಕನ್ನಡ’ದಲ್ಲಿ ಪ್ರಸಾರ ಆಗುವ ಸಂಚಿಕೆಯ ಹೊರತಾಗಿಯೂ ಇನ್ನೂ ಅನೇಕ ಮನರಂಜನಾ ಕಂಟೆಂಟ್‌ಗಳು ಜಿಯೋ ಸಿನಿಮಾದಲ್ಲಿ ವೀಕ್ಷಣೆಗೆ ಲಭ್ಯವಾಗಲಿವೆ.

‘ಜಿಯೋ ಸಿನಿಮಾ’ದಲ್ಲಿ 24 ಗಂಟೆಯೂ ಬಿಗ್​ ಬಾಸ್​ ಉಚಿತ ಪ್ರಸಾರ; ವೀಕ್ಷಕರಿಗೂ ಬಹುಮಾನ ಗೆಲ್ಲುವ ಅವಕಾಶ
ಕಿಚ್ಚ ಸುದೀಪ್​
Follow us
ಮದನ್​ ಕುಮಾರ್​
|

Updated on: Oct 03, 2023 | 5:44 PM

ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂಬ ಖ್ಯಾತಿ ಹೊಂದಿರುವ ‘ಬಿಗ್​ ಬಾಸ್​’ ಮತ್ತೆ ಆರಂಭ ಆಗುತ್ತಿದೆ. ಕನ್ನಡದಲ್ಲಿ 10ನೇ ಸೀಸನ್​ (Bigg Boss Kannada Season 10) ಎಂಬ ಕಾರಣಕ್ಕೆ ವಿಶೇಷ ಆಸಕ್ತಿ ಮೂಡಿದೆ. ಅಕ್ಟೊಬರ್ 8ರಂದು ಈ ರಿಯಾಲಿಟಿ ಶೋ ಆರಂಭ ಆಗಲಿದೆ. ಅಂದು ಸಂಜೆ 6 ಗಂಟೆಗೆ ಅದ್ದೂರಿ ವೇದಿಕೆಯಲ್ಲಿ ಸ್ಪರ್ಧಿಗಳ ಹೆಸರು ರಿವೀಲ್​ ಆಗಲಿದೆ. ಅ.9ರಿಂದ ಪ್ರತಿ ರಾತ್ರಿ 9.30ಕ್ಕೆ ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ಸಂಚಿಕೆ ಪ್ರಸಾರ ಆಗಲಿದೆ. ಈ ಬಾರಿ ದಿನದ 24 ಗಂಟೆಯೂ ಬಿಗ್​ ಬಾಸ್​ ಮನೆಯೊಳಗೆ ಏನು ನಡೆಯುತ್ತಿದೆ ಎಂಬುದನ್ನು ಪ್ರೇಕ್ಷಕರು ಜಿಯೋ ಸಿನಿಮಾ (Jio Cinema) ಒಟಿಟಿಯಲ್ಲಿ ನೋಡಬಹುದು. ಅದು ಕೂಡ ಉಚಿತವಾಗಿ! ಈ ಸೀಸನ್​ನಲ್ಲೂ ಕಿಚ್ಚ ಸುದೀಪ್​ (Kichcha Sudeep) ಅವರು ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಟಿವಿಯಲ್ಲಿ ಬಿಗ್​ ಬಾಸ್​ ನೋಡುವುದಕ್ಕೂ ‘ಜಿಯೋ ಸಿನಿಮಾ’ ಮೂಲಕ ವೀಕ್ಷಿಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ‘ಕಲರ್ಸ್‌ ಕನ್ನಡ’ ಚಾನೆಲ್​ನಲ್ಲಿ ಪ್ರಸಾರ ಆಗುವ ಪ್ರತಿ ದಿನದ ಸಂಚಿಕೆಯ ಹೊರತಾಗಿಯೂ ಇನ್ನೂ ಅನೇಕ ಎಕ್ಸ್‌ಕ್ಲ್ಯೂಸಿವ್‌ ಹಾಗೂ ಅನ್‌ಸೀನ್‌ ಮನರಂಜನಾ ಕಂಟೆಂಟ್‌ಗಳು ಜಿಯೋ ಸಿನಿಮಾದಲ್ಲಿ ವೀಕ್ಷಣೆಗೆ ಲಭ್ಯವಾಗಲಿವೆ. ಆ ಕಾರಣದಿಂದ ಪ್ರೇಕ್ಷಕರಿಗೆ ಈ ಬಾರಿಯ ಬಿಗ್​ ಬಾಸ್​ ಶೋನಲ್ಲಿ ಮಸ್ತ್​ ಮನರಂಜನೆ ಸಿಗಲಿದೆ.

ಇದನ್ನೂ ಓದಿ: ಟ್ರೋಲ್​ ಆದ ಬಿಗ್​ ಬಾಸ್​ ಸ್ಪರ್ಧಿಗಳ ಬಗ್ಗೆ ಪ್ರಶ್ನೆ: ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್​ ಗರಂ

ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಸಂಬಂಧಿಸಿದ ‘ಅನ್‌ಸೀನ್‌ ಕಥೆಗಳು’, ‘ಬಿಗ್‌ ನ್ಯೂಸ್‌’, ‘ಡೀಪ್ ಆಗಿ ನೋಡಿ’, ‘ಜಿಯೋ ಸಿನಿಮಾ ಫನ್‌ ಫ್ರೈಡೇ’ ಸೇರಿದಂತೆ ಹಲವು ಬಗೆಯಲ್ಲಿ ದೊಡ್ಮನೆ ಒಳಗಿನ ಇಂಟರೆಸ್ಟಿಂಗ್​ ಘಟನೆಗಳನ್ನು ವೀಕ್ಷಕರಿಗೆ ತಲುಪಿಸಲು ಸಕಲ ತಯಾರಿ ನಡೆದಿದೆ. ಬಿಗ್​ ಬಾಸ್​ ಮನೆಯ ಒಳಗೆ ನಡೆಯುವ ಪ್ರತಿಯೊಂದು ನಾಟಕೀಯ ಬೆಳವಣಿಗೆಗಳನ್ನು ಚುಟುಕಾಗಿ ಕಟ್ಟಿಕೊಡುವ ‘ಲೈವ್ ಶಾರ್ಟ್‌’ ಕೂಡ ಈ ಬಾರಿಯ ಪ್ರಮುಖ ಆಕರ್ಷಣೆ ಆಗಿರಲಿದೆ.

ಇಷ್ಟೇ ಅಲ್ಲದೇ ‘ಮೀಮ್‌ ದ ಮೊಮೆಂಟ್‌’, ‘ವಾಚ್‌ ಆಂಡ್ ವಿನ್’, ‘ಹೈಪ್‌ ಚಾಟ್‌’, ‘ವಿಡಿಯೊ ವಿಚಾರ್‍‌’ ಮೂಲಕ ಬಿಗ್‌ಬಾಸ್‌ನ ವೀಕ್ಷಕರಿಗೆ ಸಂವಾದದಲ್ಲಿ ಭಾಗಿ ಆಗುವ ಅವಕಾಶ ಕೂಡ ಸಿಗಲಿದೆ. ಇದೇ ಮೊದಲ ಬಾರಿಗೆ ವೀಕ್ಷಕರಿಗೆ ಬಹುಮಾನ ಗೆಲ್ಲುವ ಚಾನ್ಸ್​ ಸಹ ನೀಡಲಾಗುತ್ತಿದೆ. ಟಿವಿಯಲ್ಲಿ ಬಿಗ್​ ಬಾಸ್​ ಸಂಚಿಕೆ ನೋಡಿ, ಅಲ್ಲಿ ಕೇಳುವ ಪ್ರಶ್ನೆಗಳಿಗೆ ಜಿಯೋ ಸಿನಿಮಾದಲ್ಲಿ ಉತ್ತರಿಸಿದರೆ ಪ್ರತಿ ದಿನ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಬಂಪರ್​ ಅವಕಾಶ ಸಿಗಲಿದೆ. ವೀಕ್ಷಕರು ನಡೆಸುವ ಸಂವಾದದಿಂದ ಸ್ಪರ್ಧಿಗಳ ಭವಿಷ್ಯ ಕೂಡ ನಿರ್ಧಾರ ಆಗಲಿದೆ.

ಇದನ್ನೂ ಓದಿ: ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಸುದ್ದಿಗೋಷ್ಠಿ: ಹೊಸ ಸೀಸನ್​ ಬಗ್ಗೆ ಕಿಚ್ಚ ಸುದೀಪ್​ ಹೇಳೋದೇನು?

ಈ ಬಾರಿಯ ಬಿಗ್​ ಬಾಸ್​ ಮನೆಯನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ. 12 ಸಾವಿರ ಚದರ ಅಡಿ ಇರುವ ಇದು ಭಾರತದಲ್ಲೇ ಅತಿ ದೊಡ್ಡ ಬಿಗ್​ ಬಾಸ್​ ಮನೆ ಎಂಬ ಖ್ಯಾತಿಗೆ ಒಳಗಾಗುತ್ತಿದೆ. ಈ ಮನೆಯ ವಿಸ್ತಾರಕ್ಕೆ ತಕ್ಕಂತೆಯೇ ಟಾಸ್ಕ್​ಗಳು ಕೂಡ ಭಿನ್ನವಾಗಿ ಮತ್ತು ದೊಡ್ಡದಾಗಿ ಇರಲಿವೆ. ಸ್ಪರ್ಧಿಗಳ ಮೇಲೆ 73 ಕ್ಯಾಮೆರಾ ಕಣ್ಣುಗಳು ಇರಲಿವೆ. ಸಾವಿರಾರು ತಂತ್ರಜ್ಞರು ಬಿಗ್​ ಬಾಸ್​ ತೆರೆಯ ಹಿಂದೆ ಕೆಲಸ ಮಾಡಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್