Rap Singer Eshani: ಬಿಗ್​​ ಬಾಸ್​ ಮನೆಯೊಳಗೆ ಕಾಲಿಟ್ಟ 3ನೇ ಸ್ಪರ್ಧಿ ಈಶಾನಿ; ದುಬೈನಲ್ಲಿ ಬೆಳೆದ ಕನ್ನಡದ ಹುಡುಗಿ

Bigg Boss Kannada Season 10: ಇದು 10ನೇ ಸೀಸನ್​ ಆಗಿರುವುದರಿಂದ ಈ ಬಾರಿ ಅದ್ದೂರಿತನ ಜಾಸ್ತಿಯೇ ಇದೆ. ವಿವಿಧ ಕ್ಷೇತ್ರಗಳ ಸ್ಪರ್ಧಿಗಳು ದೊಡ್ಮನೆಯಲ್ಲಿ ಪೈಪೋಟಿ ನೀಡುವ ಅವಕಾಶ ಪಡೆದಿದ್ದಾರೆ. ಮೂರನೇ ಸ್ಪರ್ಧಿಯಾಗಿ ರ‍್ಯಾಪ್​ ಗಾಯಕಿ ಈಶಾನಿ ಅವರಿಗೆ ಅವಕಾಶ ಸಿಕ್ಕಿದೆ.

Rap Singer Eshani: ಬಿಗ್​​ ಬಾಸ್​ ಮನೆಯೊಳಗೆ ಕಾಲಿಟ್ಟ 3ನೇ ಸ್ಪರ್ಧಿ ಈಶಾನಿ; ದುಬೈನಲ್ಲಿ ಬೆಳೆದ ಕನ್ನಡದ ಹುಡುಗಿ
ರ‍್ಯಾಪ್​ ಸಿಂಗರ್​ ಈಶಾನಿ
Follow us
ಮದನ್​ ಕುಮಾರ್​
|

Updated on: Oct 08, 2023 | 7:29 PM

ಅದ್ದೂರಿಯಾಗಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಶೋಗೆ ಚಾಲನೆ ಸಿಕ್ಕಿದೆ. ಹಲವು ಬಗೆಯ ವ್ಯಕ್ತಿತ್ವ ಇರುವ ಸ್ಪರ್ಧಿಗಳು ಬಿಗ್​ ಬಾಸ್ (Bigg Boss Kannada)​ ಮನೆಯೊಳಗೆ ಎಂಟ್ರಿ ನೀಡಿದ್ದಾರೆ. ದೊಡ್ಮನೆಗೆ ಹೋಗುವುದಕ್ಕೂ ಮುನ್ನವೇ ವೇದಿಕೆಯಲ್ಲಿ ಈ ಸ್ಪರ್ಧಿಗಳು ಅರ್ಹರು ಹೌದೋ ಅಲ್ಲವೋ ಎಂಬುದಕ್ಕೆ ಓಟಿಂಗ್​ ನಡೆಯಿತು. ಅಗತ್ಯ ಇರುವಷ್ಟು ಓಟ್​ ಪಡೆದವರಿಗೆ ಮಾತ್ರ ಬಿಗ್​ ಬಾಸ್​ ಮನೆಯನ್ನು ಪ್ರವೇಶಿಸುವ ಚಾನ್ಸ್​ ಸಿಕ್ಕಿತು. ಮೂರನೇ ಸ್ಪರ್ಧಿಯಾಗಿ ರ‍್ಯಾಪ್​ ಸಿಂಗರ್​ ಈಶಾನಿ (Rap Singer Eshani) ಅವರು ಬಿಗ್​ ಬಾಸ್​ ಮನೆ ಪ್ರವೇಶಿಸಿದ್ದಾರೆ. ಕಿಚ್ಚ ಸುದೀಪ್​ ಅವರು ಎಂದಿನ ಉತ್ಸಾಹದಲ್ಲಿ ಶೋ ನಿರೂಪಣೆ ಮಾಡುತ್ತಿದ್ದಾರೆ.

ಮೊದಲ ಸ್ಪರ್ಧಿಯಾಗಿ ನಟಿ ನಮ್ರತಾ ಗೌಡ ಅವರು ಬಿಗ್​ ಬಾಸ್​ ಮನೆಗೆ ಬಂದಿದ್ದಾರೆ. ನಂತರ ಎರಡನೇ ಸ್ಪರ್ಧಿಯಾಗಿ ಸ್ನೇಹಿತ್​ ಗೌಡ ಅವರು ದೊಡ್ಮನೆ ಪ್ರವೇಶಿಸಿದ್ದಾರೆ. ಬಿಗ್​ ಬಾಸ್​ ಮನೆಯೊಳಗೆ ಕಾಲಿಟ್ಟ ಮೂರನೇ ಸ್ಪರ್ಧಿ ಈಶಾನಿ. ಇದು 10ನೇ ಸೀಸನ್​ ಆಗಿರುವುದರಿಂದ ಈ ಬಾರಿ ಅದ್ದೂರಿತನ ಜಾಸ್ತಿಯೇ ಇದೆ. ವಿವಿಧ ಕ್ಷೇತ್ರಗಳ ಸ್ಪರ್ಧಿಗಳು ದೊಡ್ಮನೆಯಲ್ಲಿ ಪೈಪೋಟಿ ನೀಡುವ ಅವಕಾಶ ಪಡೆದಿದ್ದಾರೆ. ಈ ಸಲ ಮನೆಯ ವಿನ್ಯಾಸ ಸಖತ್​ ಗ್ರ್ಯಾಂಡ್​ ಆಗಿದೆ. 100 ದಿನಗಳ ಕಾಲ ನಡೆಯುವ ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ. ಪ್ರತಿ ದಿನದ ಎಪಿಸೋಡ್​ಗಳು ‘ಕಲರ್ಸ್​ ಕನ್ನಡ’ ವಾಹಿಯಲ್ಲಿ ರಾತ್ರಿ 9.30ಕ್ಕೆ ಬಿತ್ತರ ಆಗಲಿವೆ.

ರ‍್ಯಾಪ್​ ಸಿಂಗರ್​ ಈಶಾನಿ ಹಿನ್ನೆಲೆ:

ಲಾಸ್​ ಏಂಜಲಿಸ್​ನಲ್ಲಿ ಇದ್ದ ಈಶಾನಿ ಅವರು ನಂತರ ದುಬೈಗೆ ಹೋದರು. ಕನ್ನಡದ ಹುಡುಗಿಯೇ ಆದ ಅವರು ಮೂಲತಃ ಮೈಸೂರಿನವರು. ಬೆಳೆದಿದ್ದು ಬೆಂಗಳೂರು, ಲಾಸ್​ ಎಂಜಲೀಸ್​ ಮತ್ತು ದುಬೈನಲ್ಲಿ. ಬಳಿಕ ಬಿಗ್​ ಬಾಸ್​ಗೆ ಹೋಗಬೇಕು ಎಂದು ಅವರು ತೀರ್ಮಾನಿಸಿದರು. ಹೈಸ್ಕೂಲ್​ನಲ್ಲಿ ಇದ್ದಾಗಲೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ಅವರು ನಂತರ ರ‍್ಯಾಪ್​ ಸಿಂಗರ್​ ಆಗಿ ಬೆಳೆದರು. ಬಿಗ್​ ಬಾಸ್​ ವೇದಿಕೆಯಲ್ಲಿ 83 ಪರ್ಸೆಂಟ್​ ಓಟ್​ ಪಡೆದ ಅವರಿಗೆ ದೊಡ್ಮನೆ ಒಳಗೆ ಪ್ರವೇಶ ಮಾಡುವ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: Namratha Gowda: ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಮೊದಲ ಸ್ಪರ್ಧಿ ನಮ್ರತಾ ಗೌಡ; ನಟಿಯ ಪರಿಚಯ ಇಲ್ಲಿದೆ..

ಅಪ್ಪ-ಅಮ್ಮನನ್ನು ಬಿಟ್ಟು ಬಿಗ್​ ಬಾಸ್​ ಮನೆಯೊಳಗೆ ಹೋಗಲಾರದೇ ಈಶಾನಿ ಅವರು ವೇದಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತರು. ಸಿಕ್ಕಾಪಟ್ಟೆ ಎಮೋಷನಲ್​ ಆದ ಅವರನ್ನು ಆತ್ಮೀಯವಾಗಿ ಬಿಗ್​ ಬಾಸ್​ ಮನೆಗೆ ಕಳಿಸಿಕೊಡಲಾಯಿತು. ಈಶಾನಿ ಅವರು ವಿದೇಶದಲ್ಲಿ ಬೆಳೆದವರ ಆದ್ದರಿಂದ ಬಿಗ್​ ಬಾಸ್​ ಮನೆಯಲ್ಲಿ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.