Bigg Boss Kannada: ಹೊಸ ಬಿಗ್ ಬಾಸ್ ಮನೆ ಹೇಗಿದೆ ಅಂತ ತೋರಿಸಿದ ಚಂದನ್ ಶೆಟ್ಟಿ; ನೀವೂ ನೋಡಿ..
10ನೇ ಸೀಸನ್ ಆದ್ದರಿಂದ ತುಂಬ ಕಾಳಜಿ ವಹಿಸಿ ಮನೆಯ ವಿನ್ಯಾಸ ಮಾಡಲಾಗಿದೆ. ‘ಮನೆ ಮಾತ್ರ ರಾಯಲ್ ಆಗಿದೆ’ ಎಂದು ಚಂದನ್ ಶೆಟ್ಟಿ ಅವರು ಹಾಡಿ ಹೊಗಳಿದ್ದಾರೆ. ಈ ಸಾಂಗ್ನಲ್ಲಿ ಅವರ ಜೊತೆ ಕಿಚ್ಚ ಸುದೀಪ್ ಕೂಡ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಎಲ್ಲ ಮೂಲೆಗಳು ಹೊಸ ಸ್ವರೂಪ ಪಡೆದುಕೊಂಡಿವೆ.
ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂಬ ಖ್ಯಾತಿ ‘ಬಿಗ್ ಬಾಸ್’ ಕಾರ್ಯಕ್ರಮಕ್ಕಿದೆ. ಈವರೆಗೂ ಕನ್ನಡದಲ್ಲಿ 9 ಸೀಸನ್ಗಳು ಪೂರ್ಣಗೊಂಡಿವೆ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada Season 10) ಆರಂಭ ಆಗಿದೆ. ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಎಂದಿನಂತೆ ಈ ಬಾರಿ ಕೂಡ ಶೋ ಅದ್ದೂರಿಯಾಗಿ ಪ್ರಸಾರ ಆಗಲಿದೆ. ಯಾವೆಲ್ಲ ಸ್ಪರ್ಧಿಗಳು ದೊಡ್ಮನೆ ಒಳಗೆ ಕಾಲಿಡುತ್ತಾರೆ ಎಂಬ ಕುತೂಹಲ ಒಂದು ಕಡೆಯಾದರೆ, ಈ ಸಲ ಬಿಗ್ ಬಾಸ್ (Bigg Boss Kannada) ಮನೆ ಹೇಗಿದೆ ಎಂಬ ಕೌತುಕ ಇನ್ನೊಂದು ಕಡೆ. ಈ ಬಾರಿ ಬಿಗ್ ಬಾಸ್ ಮನೆಯನ್ನು ಹೊಸದಾಗಿ ನಿರ್ಮಿಸಲಾಗಿದೆ. ಅದು ಹೇಗಿದೆ ಎಂಬುದನ್ನು ಚಂದನ್ ಶೆಟ್ಟಿ (Chandan Shetty) ಅವರು ತೋರಿಸಿದ್ದಾರೆ.
ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ‘ಬಿಗ್ ಬಾಸ್ ಸೀಸನ್ 5’ರಲ್ಲಿ ಭಾಗವಹಿಸಿ ಟ್ರೋಫಿ ಗೆದ್ದಿದ್ದರು. ಆ ಶೋನಲ್ಲಿ ಭಾಗವಹಿಸಿದ ಬಳಿಕ ಅವರ ಚಾರ್ಮ್ ಹೆಚ್ಚಿತು. ಈಗ ಮತ್ತೆ ಅವರು ಬಿಗ್ ಬಾಸ್ ಮನೆಯೊಳಗೆ ಕಾಲು ಇಟ್ಟಿದ್ದಾರೆ. ಆದರೆ ಸ್ಪರ್ಧಿಯಾಗಿ ಅಲ್ಲ. ಬದಲಿಗೆ, ಬಿಗ್ ಬಾಸ್ ಮನೆಯನ್ನು ಪರಿಚಯಿಸುವ ಸಲುವಾಗಿ ಅವರು ಅಲ್ಲಿಗೆ ತೆರಳಿದ್ದಾರೆ. ತಮ್ಮದೇ ಸ್ಟೈಲ್ನಲ್ಲಿ ಹೊಸ ಹಾಡಿನ ಮೂಲಕ ಅವರು ಈ ಮನೆಯ ಪರಿಚಯ ಮಾಡಿಸಿದ್ದಾರೆ.
View this post on Instagram
ಲಿವಿಂಗ್ ಏರಿಯಾ, ಅಡುಗೆ ಮನೆ, ಕ್ಯಾಪ್ಟನ್ ರೂಮ್, ಕನ್ಫೆಷನ್ ರೂಮ್ ಸೇರಿದಂತೆ ಬಿಗ್ ಬಾಸ್ ಮನೆಯ ಎಲ್ಲ ಮೂಲೆಗಳು ಕೂಡ ಹೊಸ ಸ್ವರೂಪ ಪಡೆದುಕೊಂಡಿವೆ. ದುಬಾರಿ ವೆಚ್ಚದಲ್ಲಿ ಈ ಮನೆ ನಿರ್ಮಾಣ ಆಗಿದೆ. 10ನೇ ಸೀಸನ್ ಆದ್ದರಿಂದ ತುಂಬ ಕಾಳಜಿ ವಹಿಸಿ ಮನೆಯ ವಿನ್ಯಾಸ ಮಾಡಲಾಗಿದೆ. ‘ಮನೆ ಮಾತ್ರ ರಾಯಲ್ ಆಗಿದೆ’ ಎಂದು ಚಂದನ್ ಶೆಟ್ಟಿ ಅವರು ಹಾಡಿ ಹೊಗಳಿದ್ದಾರೆ. ಈ ಸಾಂಗ್ನಲ್ಲಿ ಅವರ ಜೊತೆ ಕಿಚ್ಚ ಸುದೀಪ್ ಕೂಡ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada: ‘ಜಿಯೋ ಸಿನಿಮಾ’ದಲ್ಲಿ ‘ಬಿಗ್ ಬಾಸ್’ ನೋಡುವ ವೀಕ್ಷಕರಿಗೆ ಸಿಗುತ್ತದೆ ಹತ್ತಾರು ಅವಕಾಶ
ಇಂದು (ಅಕ್ಟೋಬರ್ 8) ಸಂಜೆ 6 ಗಂಟೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋಗೆ ಅದ್ದೂರಿ ಚಾಲನೆ ಸಿಗಲಿದೆ. ಈಗಾಗಲೇ ಇದರ ಶೂಟಿಂಗ್ ನಡೆದಿದೆ. ವಿಶೇಷ ಪ್ರೋಮೋಗಳ ಮೂಲಕ ಲಾಂಚಿಂಗ್ ಎಪಿಸೋಡ್ನ ಝಲಕ್ ತೋರಿಸಲಾಗುತ್ತಿದೆ. ಈ ಬಾರಿ ಆಟದಲ್ಲಿ ಸಾಕಷ್ಟು ಹೊಸತನ ಇರಲಿದೆ. ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಯೊಳಗೆ ಕಳಿಸುವ ಪ್ರಕ್ರಿಯೆಯಲ್ಲೂ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. ಪ್ರತಿ ದಿನದ ಸಂಚಿಕೆಗಳು ‘ಕಲರ್ಸ್ ಕನ್ನಡ’ದಲ್ಲಿ ರಾತ್ರಿ 9.30 ಪ್ರಸಾರ ಅಗಲಿವೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಈ ಶೋ ಪ್ರಸಾರ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.