Bigg Boss Kannada: ಬಿಗ್ ಬಾಸ್ಗೆ ಬಂದ ನೈಜೀರಿಯಾ ಕನ್ನಡಿಗ; ವೇಷ, ಭಾಷೆ ನೋಡಿ ಎಲ್ಲರಿಗೂ ಅಚ್ಚರಿ
ಮೈಕೆಲ್ ಅವರು ಎಲ್ಲರಂತಿಲ್ಲ. ಅವರ ಗೆಟಪ್ ಎಷ್ಟು ಭಿನ್ನವಾಗಿದೆಯೋ ಆಲೋಚನೆಗಳು ಕೂಡ ಡಿಫರೆಂಟ್ ಆಗಿವೆ. ಎಲ್ಲರೂ ಹೀರೋ ಆಗಬೇಕು ಎಂದು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಮೈಕೆಲ್ ಅವರು ವಿಲನ್ ಆಗಬೇಕು ಎಂದು ಇಷ್ಟಪಟ್ಟಿದ್ದಾರೆ. ಅವರ ಕೇಶವಿನ್ಯಾಸ, ಬಟ್ಟೆ, ಹಾವ-ಭಾವ ಎಲ್ಲವೂ ಭಿನ್ನವಾದಂತಹ ಫೀಲ್ ನೀಡುವಂತಿವೆ.
ಒಂದಷ್ಟು ಕಾರಣಗಳಿಂದಾಗಿ ಈ ಬಾರಿಯ ಬಿಗ್ ಬಾಸ್ (Bigg Boss Kannada Season 10) ವಿಶೇಷ ಎನಿಸಿಕೊಂಡಿದೆ. ಅನಿವಾಸಿ ಭಾರತೀಯರಿಗೂ ಈ ಬಾರಿ ಬಿಗ್ ಬಾಸ್ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಲಾಸ್ ಏಂಜಲಿಸ್ ಹಾಗು ದುಬೈನಲ್ಲಿ ಬೆಳೆದ ಕನ್ನಡದ ಹುಡುಗಿ ಈಶಾನಿ ಅವರು ಬಿಗ್ ಬಾಸ್ ಮನೆ ಸೇರಿಕೊಂಡರು. ಅದೇ ರೀತಿ, ನೈಜೀರಿಯಾದ ಕನ್ನಡಿಗ ಮೈಕೆಲ್ (Michael) ಅವರು ಕೂಡ ಈ ಬಾರಿ ದೊಡ್ಮನೆಗೆ ಪ್ರವೇಶ ಪಡೆದಿದ್ದಾರೆ. ಇವರು ವಿದೇಶದಲ್ಲಿ ಬೆಳೆದಿದ್ದರೂ ಕೂಡ ಕನ್ನಡವನ್ನು ಮರೆತಿಲ್ಲ. ಹಾಗಂತ ಸ್ಪಷ್ಟವಾಗಿ ಕನ್ನಡ ಬರುತ್ತದೆ ಎಂದೇನೂ ಅಲ್ಲ. ಸಾಧ್ಯವಾದಷ್ಟು ಕನ್ನಡದಲ್ಲಿಯೇ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ವೀಕ್ಷಕರಿಂದ 81 ಪರ್ಸೆಂಟ್ ವೋಟ್ ಪಡೆಯುವ ಮೂಲಕ ಮೈಕೆಲ್ ಅವರು ಬಿಗ್ ಬಾಸ್ (Bigg Boss Kannada) ಮನೆಗೆ ಕಾಲಿಟ್ಟಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.
ಮೈಕೆಲ್ ಅವರು ಎಲ್ಲರಂತಿಲ್ಲ. ಅವರ ಗೆಟಪ್ ಎಷ್ಟು ಭಿನ್ನವಾಗಿದೆಯೋ ಆಲೋಚನೆಗಳು ಕೂಡ ಡಿಫರೆಂಟ್ ಆಗಿವೆ. ಎಲ್ಲರೂ ಹೀರೋ ಆಗಬೇಕು ಎಂದು ಚಿತ್ರರಂಗಕ್ಕೆ ಬರುತ್ತಾರೆ. ಆದರೆ ಮೈಕೆಲ್ ಅವರು ವಿಲನ್ ಆಗಬೇಕು ಎಂದು ಇಷ್ಟಪಟ್ಟಿದ್ದಾರೆ. ಅವರ ಕೇಶವಿನ್ಯಾಸ, ಬಟ್ಟೆ, ಹಾವ-ಭಾವ ಎಲ್ಲವೂ ಭಿನ್ನವಾದಂತಹ ಫೀಲ್ ನೀಡುವಂತಿವೆ. ಬಾಸ್ಕೆಟ್‌ಬಾಲ್ ಆಡುವ ಅವರು ಮಾಡೆಲ್ ಆಗಿಯೂ ಕೆಲಸ ಮಾಡಿದ್ದಾರೆ. ತಮ್ಮದೇ ಬರ್ಗರ್ ಶಾಪ್ ಹೊಂದಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಕಾಲಿಡುವ ಮೂಲಕ ಬೇರೆಯದೇ ಬೆರುಗು ತಂದಿದ್ದಾರೆ. ಫಿಟ್ನೆಸ್ ಬಗ್ಗೆ ಅವರು ಸಖತ್ ಕಾಳಜಿ ಇಟ್ಟುಕೊಂಡಿದ್ದಾರೆ.
View this post on Instagram
ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳನ್ನು ಕಳಿಸುವ ಪ್ರಕ್ರಿಯೆ ಸ್ವಲ್ಪ ಭಿನ್ನವಾಗಿತ್ತು. ವೀಕ್ಷಕರು ನೀಡಿದ ವೋಟ್ಗಳ ಆಧಾರದ ಮೇಲೆ ಆ ಸ್ಪರ್ಧಿಯ ಅರ್ಹತೆಯನ್ನು ನಿರ್ಧರಿಸಲಾಗಿದೆ. ಗೌರೀಶ್ ಅಕ್ಕಿ, ಭಾಗ್ಯಶ್ರೀ, ನಮ್ರತಾ ಗೌಡ, ನೀತು ವನಜಾಕ್ಷಿ, ಈಶಾನಿ, ತುಕಾಲಿ ಸಂತೋಷ್, ಸ್ನೇಕ್ ಶ್ಯಾಮ್, ಸಿರಿ, ವಿನಯ್, ಸ್ನೇಹಿತ್ ಗೌಡ, ಮೈಕೆಲ್ ಮುಂತಾದವರು ಶೇಕಡ 80ಕ್ಕಿಂತಲೂ ಹೆಚ್ಚು ವೋಟ್ ಪಡೆದು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
Bigg Boss Kannada: ‘ರಂಗೋಲಿ’ ನಟಿ ಸಿರಿ ಈಗ ಬಿಗ್ ಬಾಸ್ ಸ್ಪರ್ಧಿ; 7ನೇ ಕಂಟೆಸ್ಟೆಂಟ್ ಆಗಿ ದೊಡ್ಮನೆ ಪ್ರವೇಶ
‘ನೋಡೋಕೆ ನಾನು ವಿಲನ್ ರೀತಿ ಇದ್ದೀನಿ. ಆದರೆ ನಾನು ಕೂಡ ಒಳ್ಳೆಯ ಹುಡುಗ. ಬರೀ ಪಾಸಿಟಿವ್ ಆಗಿ ಇದ್ದರೆ ಚೆನ್ನಾಗಿರುವುದಿಲ್ಲ. ಚೂರು ನೆಗೆಟಿವ್ ಕೂಡ ಇರಬೇಕು. ಕನ್ನಡ ಚಿತ್ರರಂಗದಲ್ಲಿ ನನಗೆ ವಿಲನ್ ಪಾತ್ರ ಸಿಕ್ಕರೆ ಚೆನ್ನಾಗಿರುತ್ತದೆ. ಹೀರೋ ಪಾತ್ರವನ್ನು ನೋಡಿದರೆ ಅನ್‌ರಿಯಲಿಸ್ಟಿಕ್ ಫೀಲ್ ಬರುತ್ತದೆ. ಆದರೆ ಖಳರ ಪಾತ್ರ ರಿಯಲಿಸ್ಟಿಕ್ ಆಗಿರುತ್ತದೆ’ ಎನ್ನುತ್ತಲೇ ಮೈಕೆಲ್ ಅವರು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದಾರೆ.
Bigg Boss Kannada: ‘ಬಿಗ್ ಬಾಸ್’ ಮನೆಗೆ ಬಂದ ‘ಲಕ್ಷಣ’ ಧಾರಾವಾಹಿ ನಟಿ ಭಾಗ್ಯಶ್ರೀ; ವೀಕ್ಷಕರಿಂದ ಸಖತ್ ಮೆಚ್ಚುಗೆ
100 ದಿನಗಳ ಕಾಲ ಬಿಗ್ ಬಾಸ್ ಶೋ ನಡೆಯಲಿದೆ. ವಿನ್ನರ್ ಆಗಬೇಕು ಎಂಬುದೇ ಎಲ್ಲರ ಆಸೆ. ಇಂದು (ಅಕ್ಟೋಬರ್ 8) ಮೊದಲ ದಿನ ಆದ್ದರಿಂದ ಸ್ಪರ್ಧಿಗಳು ಪರಸ್ಪರ ಪರಿಚಯ ಮಾಡಿಕೊಳ್ಳುವುದರಲ್ಲೇ ಕಾಲ ಕಳೆದಿದ್ದಾರೆ. ಬಿಗ್ ಬಾಸ್ ಮನೆಯ ಮೂಲೆ ಮೂಲೆಯನ್ನು ನೋಡುವುದರಲ್ಲೇ ಮಗ್ನರಾಗಿದ್ದಾರೆ. ಮುಂದಿನ ದಿನಗಳಲ್ಲಿ ಪೈಪೋಟಿ ಹೆಚ್ಚಲಿದೆ. ಟಾಸ್ಕ್ಗಳು ಆರಂಭ ಆದ ಬಳಿಕ ಬಿಗ್ ಬಾಸ್ ಮನೆಯ ಅಸಲಿ ಆಟ ಶುರು ಆಗುತ್ತದೆ. ಎಲ್ಲ ಸ್ಪರ್ಧಿಗಳು ನಿಜವಾದ ಮುಖ ಏನೆಂಬುದು ಗೊತ್ತಾಗುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:59 pm, Sun, 8 October 23