ಬಿಗ್ ಬಾಸ್ ಮನೆಗೆ ಒಂದು ದಿನ ತಡವಾಗಿ ಎಂಟ್ರಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್

ಪ್ರದೀಪ್ ಈಶ್ವರ್ ಅವರು ಚಿಕ್ಕಬಳ್ಳಾಪುರದ ಶಾಸಕ. ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಪ್ರಬಲ ಪ್ರತಿಸ್ಪರ್ಧಿ ಡಾಕ್ಟರ್ ಸುಧಾಕರ್ ಅವರನ್ನು ಸೋಲಿಸಿದ್ದಾರೆ. ಅವರು ಸಭೆಗಳಲ್ಲಿ ಹೇಳುತ್ತಿದ್ದ ಡೈಲಾಗ್ ಗಮನ ಸೆಳೆದಿದೆ. ಅವರ ಬಗ್ಗೆ ಸಾಕಷ್ಟು ಟ್ರೋಲ್ ಕೂಡ ಆಗಿದೆ. ಬಿಗ್ ಬಾಸ್​ಗೆ ಪ್ರದೀಪ್ ಈಶ್ವರ್ ಬಂದಿದ್ದಾರೆ.

ಬಿಗ್ ಬಾಸ್ ಮನೆಗೆ ಒಂದು ದಿನ ತಡವಾಗಿ ಎಂಟ್ರಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್
ಪ್ರದೀಪ್ ಈಶ್ವರ್
Follow us
ರಾಜೇಶ್ ದುಗ್ಗುಮನೆ
|

Updated on: Oct 09, 2023 | 10:02 AM

‘ಕನ್ನಡ ಬಿಗ್ ಬಾಸ್ ಸೀಸನ್ 10’ ಆರಂಭ ಆಗಿದೆ. ವಿವಿಧ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಒಂದು ದಿನ ತಡವಾಗಿ ಪ್ರದೀಪ್ ಈಶ್ವರ್ (Pradeep Eshwar) ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರ ಎಂಟ್ರಿ ಅನೇಕರಿಗೆ ಅಚ್ಚರಿ ತಂದಿದೆ. ಎಂಎಲ್​ಎ ಆಗಿ ದೊಡ್ಮನೆಗೆ ತೆರಳಿರೋ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಕೆಲವು ದಿನಗಳ ಅತಿಥಿಯೋ ಅಥವಾ ಉಳಿದ ಸ್ಪರ್ಧಿಗಳಂತೆಯೇ ಅವರು ಇರುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

ಪ್ರದೀಪ್ ಈಶ್ವರ್ ಅವರು ಚಿಕ್ಕಬಳ್ಳಾಪುರದ ಶಾಸಕ. ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಪ್ರಬಲ ಪ್ರತಿಸ್ಪರ್ಧಿ ಡಾಕ್ಟರ್ ಸುಧಾಕರ್ ಅವರನ್ನು ಸೋಲಿಸಿದ್ದಾರೆ. ಅವರು ಸಭೆಗಳಲ್ಲಿ ಹೇಳುತ್ತಿದ್ದ ಡೈಲಾಗ್ ಗಮನ ಸೆಳೆದಿದೆ. ಅವರ ಬಗ್ಗೆ ಸಾಕಷ್ಟು ಟ್ರೋಲ್ ಕೂಡ ಆಗಿದೆ. ಬಿಗ್ ಬಾಸ್​ಗೆ ಪ್ರದೀಪ್ ಈಶ್ವರ್ ಬರುತ್ತಾರೆ ಎಂಬ ವಿಚಾರ ಮೊದಲೇ ಸುದ್ದಿ ಆಗಿತ್ತು. ಈಗ ಕಲರ್ಸ್ ಕನ್ನಡ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.

ಬಿಳಿ ಬಣ್ಣದ ಡ್ರೆಸ್​ನಲ್ಲಿ ಎಂಟ್ರಿ ಕೊಟ್ಟಿದ್ದಾರೆ ಪ್ರದೀಪ್. ಮುಖ್ಯದ್ವಾರದಿಂದಲೇ ಅವರು ಆಗಮಿಸಿದ್ದಾರೆ. ಅಕ್ಟೋಬರ್ 8ರಂದೇ ಅವರು ದೊಡ್ಮನೆಗೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಒಂದು ದಿನ ತಡವಾಗಿ ಅವರು ಬಂದಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ನಾವು ಎಂಎಲ್​ಎ ಜೊತೆ ಸ್ಪರ್ಧಿಸಬೇಕಲ್ಲ’ ಎಂದು ಸ್ಪರ್ಧಿಗಳು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆ ಸೇರಿದ 17 ಸ್ಪರ್ಧಿಗಳ ಫೋಟೋ ಹಾಗೂ ವಿವರ ಇಲ್ಲಿದೆ ನೋಡಿ..

ಪ್ರದೀಪ್ ಈಶ್ವರ್ ಎಂಟ್ರಿಗೆ ಅನೇಕರು ತಕರಾರು ತೆಗೆದಿದ್ದಾರೆ. ‘ಎಂಎಲ್​ಎ ಆಗಿ ಕ್ಷೇತ್ರದ ಅಭಿವೃದ್ಧಿ ಮಾಡುವ ಬದಲು ರಿಯಾಲಿಟಿ ಶೋಗೆ ಹೋದರೆ ಸಾಮಾನ್ಯ ಜನರ ಗತಿ ಏನು’ ಎಂದು ಅನೇಕರು ಪ್ರಶ್ನೆ ತೆಗೆದಿದ್ದಾರೆ. ಇನ್ನೂ ಕೆಲವರು, ಡ್ರೋನ್ ಪ್ರತಾಪ್, ಪ್ರದೀಪ್ ಈಶ್ವರ್ ಹಾಗೂ ರಕ್ಷಕ್ ಒಂದು ಕಡೆ ಸೇರಿದ್ದಾರೆ. ಎಂಟರ್​ಟೇನ್​ಮೆಂಟ್ ಹೆಚ್ಚಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೆಸರು ಹಿಡಿದು ಕರೆದರೂ ‘ಬಿಗ್ ಬಾಸ್’ ವೇದಿಕೆಗೆ ಬರಲೇ ಇಲ್ಲ ‘ಚಾರ್ಲಿ’; ಮುಂದೇನು ಕಥೆ?

ಜಿಯೋ ಸಿನಿಮಾ ಒಟಿಟಿ ಹಾಗೂ ಕಲರ್ಸ್​ ಕನ್ನಡದಲ್ಲಿ ಬಿಗ್ ಬಾಸ್ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಶೋ ವೀಕ್ಷಣೆಗೆ ಅವಕಾಶ ಇದೆ. ಪ್ರತಿ ದಿನ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್