ಮೈಸೂರು: ಡಿಸೆಂಬರ್ 31 ರಂದು ರಾತ್ರಿ ಮೈಸೂರಿನ ರಂಗಾಯಣ(Mysore Rangayana)ದ ಭೂಮಿಗೀತಾದಲ್ಲಿ ನಡೆದ ಡಾ. ಚಂದ್ರಶೇಖರ್ ಕಂಬಾರರ(Dr.ChandraShekhar Kambara) ಸಾಂಬಶಿವ ಪ್ರಹಾಸನ ನಾಟಕವನ್ನು ಅಸಹ್ಯಕರವಾಗಿ ತಿರುಚಿ ಪ್ರದರ್ಶಿಸಲಾಗಿದೆ. ರಂಗಾಯಣದಲ್ಲಿ ನನ್ನ ಅನುಮತಿ ಇಲ್ಲದೆ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಟ್ಟಿದ್ದಾರೆ. ನನ್ನ ಯಾವುದೇ ನಾಟಕದಲ್ಲಿ ವ್ಯಕ್ತಿಗತ ನಿಂದನೆ ಇರಲು ಸಾಧ್ಯವೇ ಇಲ್ಲ, ಅನುಮತಿ ಇಲ್ಲದೆ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದವರ ಮೇಲೆ ಹಾಗೂ ಇಲ್ಲದ ಸಾಹಿತ್ಯ ಸೇರಿಸಿದ ನಿರ್ದೇಶಕರ ಮೇಲೂ ಕ್ರಮವಹಿಸಬೇಕು ಎಂದು ಮೈಸೂರು ನಗರದ ಪೊಲೀಸರಿಗೆ ಪತ್ರದ ಮೂಲಕ ಸಾಹಿತಿ ಚಂದ್ರಶೇಖರ ಕಂಬಾರ ಒತ್ತಾಯಿಸಿದ್ದಾರೆ.
ಕಳೆದ ಶನಿವಾರ(ಡಿ.31) ರಂದು ರಂಗಾಯಣದ ಭೂಮಿಗೀತ ವೇದಿಕೆಯಲ್ಲಿ ನಡೆದ ಸಾಂಬಶಿವ ಪ್ರಹಾಸನ ನಾಟಕ ದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರನ್ನು ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ನಾಟಕ ತಂಡದ ವಿರುದ್ಧ ಅಭಿಮಾನಿಗಳು ಹಾಗೂ ರಾಜ್ಯ ಕುರುಬ ಸಂಘದ ಅಧ್ಯಕ್ಷ ಸುಬ್ರಮಣ್ಯ ಅವರಿಂದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಇದನ್ನೂ ಓದಿ:Mysore News: ನಾಟಕದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಅಪಮಾನ ಆರೋಪ, ದೂರು ನೀಡಿದ ಅಭಿಮಾನಿಗಳು
ಇನ್ನು ನಾಟಕದಲ್ಲಿ ವಾಸ್ತವ ಬಿಟ್ಟು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅಪಮಾನ ಮಾಡಲಾಗಿದೆ ಎಂದು ನಾಟಕ ಪ್ರದರ್ಶನದ ಅಂತ್ಯದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದರು. ಅನ್ನಭಾಗ್ಯ ಕೊಟ್ಟು ಸೋಂಬೇರಿ ಮಾಡಿದ್ದೀರಿ ಎಂದು ಯೋಜನೆಯ ಬಗ್ಗೆ ಅಪಹಾಸ್ಯ ಮಾಡಲಾಗಿದೆ. ಈ ಬಾರಿ ಬಾದಾಮಿನು ಸಿಗಲ್ಲ, ಸಿದ್ದು ಗೊರಕೆ ಹೊಡೆದು ರಾಜ್ಯ ಹಾಳುಮಾಡಿದ್ದೀರಿ ಎಂದು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೂ ಕೇಡಿ ಅಂಕಲ್ ಎಂದು ವ್ಯಂಗ್ಯ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಾಟಕದಲ್ಲಿ ಅಭಿನಯಿಸಿರುವ 18 ಮಂದಿಯ ತಂಡದ ವಿರುದ್ಧವು ದೂರು ನೀಡಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:34 am, Tue, 3 January 23