ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ್ಯಾಗಿಂಗ್; ಅಪ್ರಾಪ್ತನ ಮೇಲೆ ಮೂವರಿಂದ ಹಲ್ಲೆ

ಮೈಸೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ರ್ಯಾಗಿಂಗ್‌ ಪ್ರಕರಣ ಬೆಳಕಿಗೆ ಬಂದಿದ್ದು, 13 ವರ್ಷದ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಅಪ್ರಾಪ್ತನ ಮೇಲೆ ಅದೇ ಶಾಲೆಯ ಮೂವರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ. ಅಕ್ಟೋಬರ್ 25 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ್ಯಾಗಿಂಗ್; ಅಪ್ರಾಪ್ತನ ಮೇಲೆ ಮೂವರಿಂದ ಹಲ್ಲೆ
ಮೈಸೂರಿನ ಪ್ರತಿಷ್ಠಿತ ಶಾಲೆಯಲ್ಲಿ ರ್ಯಾಗಿಂಗ್ ಪ್ರಕರಣ

Updated on: Nov 09, 2025 | 12:11 PM

ಮೈಸೂರು, ನವೆಂಬರ್ 9: ಜಿಲ್ಲೆಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ಅಪ್ರಾಪ್ತ ಬಾಲಕನೋರ್ವನ ಮೇಲೆ ಅದೇ ಶಾಲೆಯ ಮೂವರು ವಿದ್ಯಾರ್ಥಿಗಳು ರ್ಯಾಗಿಂಗ್  (Ragging case in Mysore)  ನಡೆಸಿದ್ದು, ಅಕ್ಟೋಬರ್ 25ರಂದು ನಡೆದ ಈ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು,  ಈ ಕುರಿತ ಯಾವುದೇ ಪ್ರಕರಣ ಇದುವರೆಗೆ ದಾಖಲಾಗಿಲ್ಲ.

ಹಣ ಕೊಡುವಂತೆ ಪ್ರತಿನಿತ್ಯ ಪೀಡಿಸುತ್ತಿದ್ದ ಬಾಲಕರು

8ನೇ ತರಗತಿಯ ಲೀಡರ್ ಆಗಿದ್ದ ಅಪ್ರಾಪ್ತ ಬಾಲಕನಿಗೆ ಮೂವರು ವಿದ್ಯಾರ್ಥಿಗಳು ಹಣ ಕೊಡು, ಮೊಬೈಲ್ ತೆಗೆದುಕೊಂಡು ಬಾ ಎಂದು ಪ್ರತಿನಿತ್ಯ ರ್ಯಾಗಿಂಗ್ ಮಾಡುತ್ತಿದ್ದರು. ನಾವು ಹೇಳಿದ ಹಾಗೆ ಮಾಡೆಂದು ಕಾಡಿಸುತ್ತಿದ್ದರು. ಹೀಗೆಯೆ ಅ.25ರಂದೂ ಸಹ ಆತನ್ನು ಪೀಡಿಸಿದ್ದರು. ಈ ಕುರಿತು ಪ್ರಶ್ನಿಸಿದ 13 ವರ್ಷದ ವಿದ್ಯಾರ್ಥಿಯನ್ನು ಮೂವರು ಬಾಲಕರು ಶೌಚಾಲಯಕ್ಕೆ ಕರೆದುಕೊಂಡು ಹೋಗಿ, ಬಾಲಕನ ಗುಪ್ತಾಂಗಕ್ಕೆ ಒದ್ದು ಗಂಭೀರ ಗಾಯಗೊಳಿಸಿದ್ದರು. ಇದರಿಂದ ಬಾಲಕನ ವೃಷಣಕ್ಕೆ ಗಂಭೀರ ಗಾಯವಾಗಿತ್ತು.

ಇದನ್ನೂ ಓದಿ ಹೊಸದಾಗಿ ಹಾಸ್ಟೆಲ್​​​ಗೆ ಬಂದ ವಿದ್ಯಾರ್ಥಿಗೆ ರ್ಯಾಗಿಂಗ್, ದೂರು ನೀಡಿದ್ದಕ್ಕೆ ಬೆತ್ತಲೆಗೊಳಿಸಿ ವಿಕೃತಿ

ಸ್ನೇಹಿತನ ಮೇಲೆ ಲಾಂಗ್​ನಿದ ಹಲ್ಲೆ

ಬೆಳಗಾವಿ ನಗರದ ಹೊಸೂರು ಬಸವನ ಗಲ್ಲಿಯಲ್ಲಿ ಹಣದ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ಗಲಾಟೆ ನಡೆದಿದ್ದು,  ಓರ್ವನ ಕೈಗೆ ಗಂಭೀರ ಗಾಯವಾಗಿದೆ. ಪ್ರಸಾದ್ ಜಾಧವ್ ಎಂಬಾತ ತನ್ನ ಸ್ನೇಹಿತ ಸಾಗರ್​ನಿಂದ ಏಳು ಸಾವಿರ ರೂಪಾರಿ ಹಣವನ್ನು ಪಡೆದಿದ್ದ. ಹಣ ವಾಪಸ್ ಕೊಡದ ಸ್ನೇಹಿತನ ಮೇಲೆ ಸಾಗರ್ ಲಾಂಗ್ ಮೂಲಕ ಹಲ್ಲೆ ಮಾಡಿದ್ದಾಗಿ ಆರೋಪಿಸಲಾಗಿದೆ. ಪ್ರಸಾದ್ ಕೈಗೆ ಗಂಭೀರವಾಗಿ ಗಾಯವಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈ ಹಿನ್ನೆಲೆ ಶಾಹಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.