Mysuru gang rape : ಗ್ಯಾಂಗ್‌ರೇಪ್ ಪ್ರಕರಣ- ತಮಿಳುನಾಡಲ್ಲಿ ಐದು ಆರೋಪಿಗಳು ವಶಕ್ಕೆ, ಆರೋಪಿಗಳು ವಿದ್ಯಾರ್ಥಿಗಳಲ್ಲ

| Updated By: ಸಾಧು ಶ್ರೀನಾಥ್​

Updated on: Aug 28, 2021 | 10:44 AM

ಐವರ ಪೈಕಿ ಯಾರೂ ವಿದ್ಯಾರ್ಥಿಗಳಲ್ಲವೆನ್ನುವ ಬಗ್ಗೆ ಮಾಹಿತಿ ಬಂದಿದ್ದು, ಈ ಹಿಂದೆ ಇಂಥದ್ದೇ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂಬುದು ಗಮನಾರ್ಹ. ಈ ಮಧ್ಯೆ, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ.

Mysuru gang rape : ಗ್ಯಾಂಗ್‌ರೇಪ್ ಪ್ರಕರಣ- ತಮಿಳುನಾಡಲ್ಲಿ ಐದು ಆರೋಪಿಗಳು ವಶಕ್ಕೆ, ಆರೋಪಿಗಳು ವಿದ್ಯಾರ್ಥಿಗಳಲ್ಲ
ಗ್ಯಾಂಗ್‌ರೇಪ್ ಪ್ರಕರಣ: ತಮಿಳುನಾಡಲ್ಲಿ 5 ಆರೋಪಿಗಳು ವಶಕ್ಕೆ, ಆರೋಪಿಗಳು ವಿದ್ಯಾರ್ಥಿಗಳಲ್ಲ
Follow us on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಗಸ್ಟ್​ 24 ಮಂಗಳವಾರ ರಾತ್ರಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರು ಪೊಲೀಸರು ದೊಡ್ಡ ಸಾಹಸವನ್ನೇ ಮಾಡಿದ್ದಾರೆ. ಮೈಸೂರು ಪೊಲೀಸರು ಗ್ಯಾಂಗ್‌ರೇಪ್ ಪ್ರಕರಣದ 6 ಆರೋಪಿಗಳ ಪೈಕಿ 5 ಮಂದಿಯನ್ನು ತಮಿಳುನಾಡಲ್ಲಿ ವಶಕ್ಕೆ ತೆಗೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಎಂಜಿನಿಯರಿಂಗ್​ ವಿದ್ಯಾರ್ಥಿಗಳ ತಂಡ ಈ ಕುಕೃತ್ಯ ನಡೆಸಿರಬಹುದು ಎನ್ನಲಾಗಿತ್ತು. ಆದರೆ ಬಂಧಿತ ಐವರ ಪೈಕಿ ಯಾರೂ ವಿದ್ಯಾರ್ಥಿಗಳಲ್ಲ ಎನ್ನುವ ಬಗ್ಗೆ ಮಾಹಿತಿ ಈಗ ಲಭ್ಯವಾಗಿದೆ.

ಇನ್ನೆರಡು ಗಂಟೆಯಲ್ಲಿ ಆರೋಪಿಗಳ ಬಂಧನದ ಬಗ್ಗೆ ಮಾಹಿತಿ -ಗೃಹ ಸಚಿವ ಆರಗ ಜ್ಞಾನೇಂದ್ರ: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ತಮಿಳುನಾಡಲ್ಲಿ ತಲೆಮರೆಸಿಕೊಂಡಿದ್ದ 5 ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಕಾರ್ಯಾಚರಣೆ ಸಕ್ಸಸ್​ ಆಗಿದೆ ಎಂದು ಹೇಳಿದ್ದಾರೆ. ಇನ್ನೆರಡು ಗಂಟೆಯಲ್ಲಿ ಆರೋಪಿಗಳ ಬಂಧನದ ಬಗ್ಗೆ ಮಾಹಿತಿ ನೀಡುತ್ತೇವೆ. ಪೊಲೀಸರು ಅಥವಾ ನಾನೇ ಅಧಿಕೃತ ಮಾಹಿತಿ ನೀಡುವೆ ಎಂದೂ ಹೇಳಿದ್ದಾರೆ.

ಬಂಧಿತ ಐವರ ಪೈಕಿ ಯಾರೂ ವಿದ್ಯಾರ್ಥಿಗಳಲ್ಲ ಎನ್ನುವ ಬಗ್ಗೆ ಮಾಹಿತಿ ಬಂದಿದ್ದು, ಈ ಹಿಂದೆ ಇಂಥದ್ದೇ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂಬುದು ಗಮನಾರ್ಹ. ಈ ಮಧ್ಯೆ, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆದಿದೆ.

ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತನ ಚಲನವಲನದ ಮೇಲೆ ನಿಗಾವಹಿಸಿದ್ದರು. ಸಂತ್ರಸ್ತೆ ಮತ್ತು ಯುವಕ 3 ದಿನಗಳ ಕಾಲ ಒಂದೇ ಸ್ಥಳಕ್ಕೆ ಬರುತ್ತಿದ್ದರು.ಅವರಿಬ್ಬರನ್ನೂ 3 ದಿನ ಫಾಲೋ ಮಾಡಿ 4ನೇ ದಿನ ಗ್ಯಾಂಗ್​ ದಾಳಿ ಮಾಡಿತ್ತು. ಆ. 24ರಂದು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.

ಆರೋಪಿಗಳು ತಮಿಳುನಾಡಿನ ಸತ್ಯಮಂಗಲ ಮೂಲದವರು:
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಆರೋಪಿಗಳು ತಮಿಳುನಾಡಿನ ಸತ್ಯಮಂಗಲ ಮೂಲದವರು. ವಶಕ್ಕೆ ಪಡೆದಿರುವ ಐವರು ಆರೋಪಿಗಳು ಕೂಲಿಕಾರ್ಮಿಕರು. ಪ್ರಕರಣದಲ್ಲಿ ಇನ್ನೂ ಯಾರಾದ್ರೂ ಇದ್ದಾರಾ ಎಂದೂ ತನಿಖೆ ನಡೆಯುತ್ತಿದೆ. ಪೊಲೀಸರು ಆರೋಪಿಗಳನ್ನು ಮೈಸೂರಿಗೆ ಕರೆತಂದ ನಂತರ ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.

Mysuru gang rape: ಯುವಕನ ತಂದೆಯೇ ತಮ್ಮ ಕಾರಿನಲ್ಲಿ ಸ್ಥಳಕ್ಕೆ ಹೋಗಿ ಇಬ್ಬರನ್ನೂ ಕರೆದುಕೊಂಡು ಬಂದಿದ್ದರು

(mysuru gang rape mysuru police arrest 5 accused in tamilnadu)

Published On - 9:12 am, Sat, 28 August 21