Mysuru gang rape: ಯುವಕನ ತಂದೆಯೇ ತಮ್ಮ ಕಾರಿನಲ್ಲಿ ಸ್ಥಳಕ್ಕೆ ಹೋಗಿ ಇಬ್ಬರನ್ನೂ ಕರೆದುಕೊಂಡು ಬಂದಿದ್ದರು

ಯುವಕನ ತಂದೆಗೆ ದುಷ್ಕರ್ಮಿಗಳು 3 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದರು. ಆದರೆ ಆತನ ತಂದೆ ಹಣ ನೀಡಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಈ ಮಧ್ಯೆ ಘಟನಾ ಸ್ಥಳಕ್ಕೆ ಹೋಗಿ ತಂದೆ ತಮ್ಮ ಮಗ ಮತ್ತು ಸಂತ್ರಸ್ಥೆಯನ್ನು ಕರೆದುಕೊಂಡು ಬಂದಿದ್ದರು ಎಂದು ಮೂಲಗಳು ತಿಳಿಸಿವೆ.

Mysuru gang rape: ಯುವಕನ ತಂದೆಯೇ ತಮ್ಮ ಕಾರಿನಲ್ಲಿ ಸ್ಥಳಕ್ಕೆ ಹೋಗಿ ಇಬ್ಬರನ್ನೂ ಕರೆದುಕೊಂಡು ಬಂದಿದ್ದರು
ದುಷ್ಕೃತ್ಯ ನಡೆದ ಸ್ಥಳ
Follow us
| Updated By: ಸಾಧು ಶ್ರೀನಾಥ್​

Updated on:Aug 28, 2021 | 8:22 AM

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣ ದಿನೇ ದಿನೇ ಕಗ್ಗಂಟಾಗುತ್ತಿದೆ. ದುಷ್ಕರ್ಮಿಗಳು ತನ್ನ ಫೋನಿಂದಲೇ ತನ್ನ ತಂದೆಗೆ ಕರೆ ಮಾಡಿಸಿದ್ದರು ಅಂತಾ ಸಂತ್ರಸ್ಥೆಯ ಸ್ನೇಹಿತ ಈ ಹಿಂದೆ ಹೇಳಿಕೆ ನೀಡಿದ್ದ. ಆ ವೇಲೆ 3 ಲಕ್ಷ ರೂಪಾಯಿಗೆ ದುಷ್ಕರ್ಮಿಗಳು ಡಿಮ್ಯಾಂಡ್ ಮಾಡಿದ್ದರು ಅಂತಲೂ ಹೇಳಿದ್ದ. ಮುಂದುವರಿದ ಭಾಗವಾಗಿ, ಆ ಯುವಕ ನೀಡಿರುವ ಮತ್ತೊಂದು ಹೇಳಿಕೆ ಇನ್ನೂ ಆಘಾತಕಾರಿಯಾಗಿದೆ.

ಯುವಕನ ತಂದೆ ಘಟನೆ ನಡೆದ ಸ್ಥಳಕ್ಕೆ ರಾತ್ರಿಯೇ ಹೋಗಿದ್ದರು. ಸಂತ್ರಸ್ತೆ ಹಾಗೂ ಸ್ನೇಹಿತನನ್ನ ನಿರ್ಜನ ಪ್ರದೇಶದಿಂದ ಕರೆದುಕೊಂಡು ಬಂದಿದ್ದರು. ಯುವಕನ ತಂದೆ ತಮ್ಮ ಕಾರಿನಲ್ಲಿಯೇ ಹೋಗಿ ಇಬ್ಬರನ್ನೂ ಕರೆದುಕೊಂಡು ಬಂದಿದ್ದರು. ಈ ಮಧ್ಯೆ ಮತ್ತೂ ಒಂದು ವಿಷಯವಿದೆ.

ಯುವಕನ ತಂದೆಗೆ ದುಷ್ಕರ್ಮಿಗಳು 3 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದರು. ಆದರೆ ಆತನ ತಂದೆ ಹಣ ನೀಡಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ತದನಂತರ ಸಂತ್ರಸ್ತೆ ಹಾಗೂ ಯುವಕನನ್ನು ಆರೋಪಿಗಳು ಬಿಟ್ಟು ಹೋಗಿದ್ದರು. ತದನಂತರ ಘಟನಾ ಸ್ಥಳಕ್ಕೆ ಹೋಗಿ ತಂದೆ ತಮ್ಮ ಮಗ ಮತ್ತು ಸಂತ್ರಸ್ಥೆಯನ್ನು ಕರೆದುಕೊಂಡು ಬಂದಿದ್ದರು ಎಂದು ಮೂಲಗಳು ತಿಳಿಸಿವೆ.

ವಿವಾದಕ್ಕೆ ಕಾರಣವಾದ ಮೈಸೂರು ವಿವಿಯ ಹೊಸ ಆದೇಶ:

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣ ಹಿನ್ನೆಲೆಯಲ್ಲಿ ಮೈಸೂರು ವಿಶ್ವ ವಿದ್ಯಾಲಯವು ಹೊಸ ಆದೇಶವೊಂದನ್ನು ಹೊರಡಿಸಿದ್ದು, ವಿವಾದಕ್ಕೆ ಆಸ್ಪದ ನೀಡಿದೆ.  ಮಾನಸ ಗಂಗೋತ್ರಿ ಆವರಣದಲ್ಲಿ ಹೆಣ್ಣುಮಕ್ಕಳು ಒಂಟಿಯಾಗಿ ಓಡಾಡುವುದನ್ನು ನಿರ್ಬಂಧಿಸಿ ಈ ಆದೇಶ ಹೊರಡಿಸಲಾಗಿದೆ.

ಪೊಲೀಸ್ ಇಲಾಖೆ ಮೌಖಿಕ ನಿರ್ದೇಶನದ ಮೇರೆಗೆ ಆದೇಶ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಿಂದ ಈ ಸುತ್ತೋಲೆ ಹೊರಬಿದ್ದಿದೆ. ಇದು ಚರ್ಚೆ ಮತ್ತು ಟೀಕೆಗೆ ಗುರಿಯಾಗಿದೆ.

ಇನ್ನು, ಕುಕ್ಕರಹಳ್ಳಿ ಕೆರೆ ಆವರಣದಲ್ಲಿಯೂ ಓಡಾಟ ನಿಷೇಧಿಸಿ ಆದೇಶ ನೀಡಲಾಗಿದೆ. ಸಂಜೆ 6.30ರ ಬಳಿಕ ಓಡಾಟ ನಿಷೇಧಿಸಿ ವಿವಿಯಿಂದ ಆದೇಶ ಹೊರಡಿಸಲಾಗಿದೆ. ಮೈಸೂರು ವಿವಿಯ ಭದ್ರತಾ ಸಿಬ್ಬಂದಿಯಿಂದ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಗಸ್ತು ವ್ಯವಸ್ಥೆ ಜಾರಿಯಲ್ಲಿರುತ್ತದೆ.

ವಾಕಿಂಗ್‌ಗೆ ಹೋಗಿದ್ದ ಮಹಿಳೆ ನಾಪತ್ತೆ, ಹೊಸಹಳ್ಳಿ ಬ್ರಿಡ್ಜ್ ಬಳಿ ಮೃತದೇಹ ಪತ್ತೆ:

ಆಗಸ್ಟ್ 24ರಂದು ನಾಪತ್ತೆಯಾಗಿದ್ದ ಮಹಿಳೆಯ ಶವ ಪತ್ತೆಯಾಗಿದೆ. ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಹೊಸಹಳ್ಳಿ ಬ್ರಿಡ್ಜ್ ಬಳಿ ಭಾಗ್ಯಲಕ್ಷ್ಮೀ ಎಂಬ ಆ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತ ಭಾಗ್ಯಲಕ್ಷ್ಮೀ ಮೂಗೂರು ಗ್ರಾಮದ ನಿವಾಸಿ. ಆ. 24ರಂದು ವಾಕಿಂಗ್‌ಗೆ ಹೋಗಿದ್ದ ಭಾಗ್ಯಲಕ್ಷ್ಮೀ ನಾಪತ್ತೆಯಾಗಿದ್ದರು. ದುಷ್ಕರ್ಮಿಗಳು ಭಾಗ್ಯಲಕ್ಷ್ಮೀ ಹತ್ಯೆಗೈದು ಬ್ರಿಡ್ಜ್ ಬಳಿ ಶವ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹೈದರಾಬಾದ್ ಫಾರ್ಮಸಿ ವಿದ್ಯಾರ್ಥಿನಿ ಗ್ಯಾಂಗ್‌ ರೇಪ್‌: ಸಿಸಿಟಿವಿ ಆಧರಿಸಿ 6 ಆರೋಪಿಗಳ ಬಂಧನ, ಮಾಧ್ಯಮಗಳ ಮುಂದೆ ಇಂದು‌ ಆರೋಪಿಗಳ ಹಾಜರು ಆಟೋ ಹತ್ತಿದ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌.. ಕೃತ್ಯ ಎಸಗಿ ರಸ್ತೆ ಬದಿ ಬೆತ್ತಲೆ ಬಿಸಾಡಿ ಹೋದ ಕೀಚಕರು

(mysuru gang rape case youth father picked girl and son from the spot)

Published On - 8:10 am, Sat, 28 August 21

ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ