ಮೈಸೂರು: ಬೇಕರಿಯಲ್ಲಿ ಅವಧಿ ಮುಗಿದ ತಿಂಡಿ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಮಾಲೀಕನಿಗೆ 20 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಅರೋಮಾ ಬೇಕರಿಯಲ್ಲಿ ಅವಧಿ ಮುಗಿದಿದ್ದ ಬಿಸ್ಕೆಟ್, ಫಂಗಸ್ ಬಂದಿರುವ ಬ್ರೆಡ್, ಅವಧಿ ಮುಗಿದರು ಡಬ್ಬಿಯಲ್ಲಿ ಇಟ್ಟು ಸಿಹಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಸಾರ್ವಜನಿಕರೊಬ್ಬರ ದೂರಿನ್ವಯ ಪಾಲಿಕೆ ಸಹಾಯಕ ಆಯುಕ್ತೆ ಗೀತಾ ಮತ್ತು ತಂಡ ದಾಳಿ ನಡೆಸಿದೆ. ಅವಧಿ ಮುಗಿದ ತಿಂಡಿ ಪದಾರ್ಥಗಳನ್ನು ಸ್ಥಳದಲ್ಲೇ ನಾಶ ಮಾಡಿದ್ದಾರೆ. ನಂತರ ಕಾರ್ಯಚರಣೆ ಮುಗಿಸಿ ಬೇಕರಿ ಮಾಲೀಕನಿಗೆ 20 ಸಾವಿರ ರೂಪಾಯಿ ದಂಡ ವಿಧಿಸಿ, ನೋಟಿಸ್ ಜಾರಿ ಮಾಡಿದ್ದಾರೆ.
Published On - 12:01 pm, Wed, 12 February 20