ಮೈಸೂರು: ಕನ್ನಡದ ಪರ ಹೋರಾಟ ಮಾಡದ ಜನಪ್ರತಿನಿಧಿಗಳು ಮತ್ತು ಕನ್ನಡಿಗರು ನಪುಂಸಕರು ಎಂದು ಸಾಹಿತಿ ಪ್ರೊ ಕೆ ಎಸ್ ಭಗವಾನ್ ವಿವಾದಾತ್ಮಕ ಹೇಳಿದ್ದಾರೆ. ಮೈಸೂರಿನಲ್ಲಿ ಕನ್ನಡಪರ ಪ್ರತಿಭಟನೆ ಮಾಡುವ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕು. ತಮಿಳುನಾಡಿನವರು ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ. ಕೇಂದ್ರ ಕೇವಲ ಹಿಂದಿ ಬಗ್ಗೆ ಒಲವು ಹೊಂದಿದೆ. ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳು ಅಂತಾ ಗುರುತಿಸಲಾಗಿದೆ. ಮೇಕೆದಾಟು ವಿಚಾರದಲ್ಲಿ ನಮ್ಮ ಶಾಸಕರು ಸಂಸದರಿಗೆ ಭಾಷಾಭಿಮಾನ ಇಲ್ಲ. ತಮಿಳರು ಮರಾಠಿಗರಂತೆ ಅಭಿಮಾನ ಇಲ್ಲ. ಕರ್ನಾಟಕದಿಂದ ಹೋದವರು ಕನ್ನಡದ ಪರ ಹೋರಾಟ ಮಾಡಬೇಕು. ಕನ್ನಡಕ್ಕೆ ಸೂಕ್ತ ಸ್ಥಾನ ಮಾನಕ್ಕೆ ಹೋರಾಟ ಮಾಡಬೇಕು. ಇಲ್ಲವಾದರೆ ಅವರು ನಪುಂಸಕರು ಎಂದು ಹೇಳಿದ್ದಾರೆ. ಈ ಮೂಲಕ ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.
ಇದನ್ನೂ ಓದಿ:2022-23ನೇ ಸಾಲಿನಿಂದ ಇಂಜಿನಿಯರಿಂಗ್ ಸೇರಿ ಎಲ್ಲಾ ವೃತ್ತಿಪರ ಕೋರ್ಸ್‌ಗಳಲ್ಲಿ ಕನ್ನಡದಲ್ಲೇ ಕಲಿಕೆಗೆ ಅವಕಾಶ
(Prof KS Bhagwan says Those who have not fought for Kannada are eunuchs in Mysuru)
Published On - 8:32 pm, Tue, 20 July 21