ಮೈಸೂರಿನ ಉದ್ಯಮಿ ಚಂದ್ರಯಾನ 3 ಯೋಜನೆಗೆ ಬಿಡಿಭಾಗ ಪೂರೈಸಿ ಕೋಟ್ಯಾಧಿಪತಿಯಾಗಿದ್ದಾರೆ! ಇದು ಮೇಕ್ ಇನ್ ಇಂಡಿಯಾ ಫಲ

|

Updated on: Nov 24, 2023 | 12:20 PM

Kaynes Technology India in Mysore: ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ರಮೇಶ್ ಅವರು ಮೈಸೂರಿನ ಕೇನ್ಸ್ ಟೆಕ್ನಾಲಜಿ ಇಂಡಿಯಾದ ಸಂಸ್ಥಾಪಕರು. ಚಂದ್ರಯಾನ -3 ರೋವರ್ ಮತ್ತು ಲ್ಯಾಂಡರ್ ಎರಡಕ್ಕೂ ಶಕ್ತಿ ನೀಡಲು ಬಳಸುವ ಎಲೆಕ್ಟ್ರಾನಿಕ್ ಸಿಸ್ಟಮ್‌ಗಳನ್ನು ರಮೇಶ್ ಅವರ ಕಂಪನಿ ಪೂರೈಸಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ.

ಮೈಸೂರಿನ ಉದ್ಯಮಿ ಚಂದ್ರಯಾನ 3 ಯೋಜನೆಗೆ ಬಿಡಿಭಾಗ ಪೂರೈಸಿ ಕೋಟ್ಯಾಧಿಪತಿಯಾಗಿದ್ದಾರೆ! ಇದು ಮೇಕ್ ಇನ್ ಇಂಡಿಯಾ ಫಲ
ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ರಮೇಶ್ ಅವರು ಮೈಸೂರಿನ ಕೇನ್ಸ್ ಟೆಕ್ನಾಲಜಿ ಇಂಡಿಯಾದ ಸಂಸ್ಥಾಪಕರು
Follow us on

ರಮೇಶ್ ಕುಂಞಿಕಣ್ಣನ್ (Ramesh Kunhikannan) ಎಂಬ ಮೈಸೂರಿನ ಉದ್ಯಮಿ ಸ್ಥಾಪಿಸಿದ ಕಂಪನಿ ನವೆಂಬರ್ 2022 ರಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ನೋಂದಣಿಯಾದ ಬಳಿಕ ಅದರ ಷೇರು ಮೌಲ್ಯ ಮೂರು ಪಟ್ಟು ಹೆಚ್ಚಾಗಿತ್ತು. ಇತ್ತೀಚೆಗೆ ಚಂದ್ರಯಾನ 3 (Chandrayaan 3) ಯಶಸ್ಸಿನ ಪಾಲಿನಲ್ಲಿ ತನ್ನ ಕಾಣಿಕೆಯನ್ನೂ ಸಲ್ಲಿಸಿದ ಬಳಿಕ, ಅದರ ಷೇರು ಮೌಲ್ಯ ಇನ್ನೂ ಶೇಕಡಾ 40 ರಷ್ಟು ಹೆಚ್ಚಾಗಿದೆ.

ಚಂದ್ರಯಾನ-3 ಯೋಜನೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವುದರೊಂದಿಗೆ ಭಾರತವನ್ನು ಸಾಧನೆಯ ಶಿಖರಕ್ಕೇರಿಸಿತು. ಈ ಮಧ್ಯೆ ಮೈಸೂರಿನ ಉದ್ಯಮಿ 60 ವರ್ಷದ ರಮೇಶ್ ಕುಂಞಿಕಣ್ಣನ್ ಅವರನ್ನು ಬಿಲಿಯನೇರ್ ಆಗಿಸಿತು.

ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ರಮೇಶ್ ಅವರು ಮೈಸೂರಿನ ಕೇನ್ಸ್ ಟೆಕ್ನಾಲಜಿ ಇಂಡಿಯಾದ ಸಂಸ್ಥಾಪಕರು (Kaynes Technology India in Mysore). ಚಂದ್ರಯಾನ -3 ರೋವರ್ ಮತ್ತು ಲ್ಯಾಂಡರ್ ಎರಡಕ್ಕೂ ಶಕ್ತಿ ನೀಡಲು ಬಳಸುವ ಎಲೆಕ್ಟ್ರಾನಿಕ್ ಸಿಸ್ಟಮ್‌ಗಳನ್ನು ರಮೇಶ್ ಅವರ ಕಂಪನಿ ಪೂರೈಸಿದೆ ಎಂದು ಫೋರ್ಬ್ಸ್ ವರದಿ (Forbes) ಮಾಡಿದೆ.

ನವೆಂಬರ್ 2022 ರಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ ಈ ಕಂಪನಿ ನೋಂದಣೆಯಾದಾಗಿನಿಂದ ಕೇನ್ಸ್‌ ಷೇರುಗಳು 40 ಪ್ರತಿಶತದಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ಇದು ವ್ಯಕ್ತಿಗತವಾಗಿ ರಮೇಶ್ ಅವರ ನಿವ್ವಳ ಮೌಲ್ಯವನ್ನು ಸುಮಾರು 1.1 ಶತಕೋಟಿ ಡಾಲರ್​​ಗೆ ಏರಿಸಿದೆ. ಅಂದಹಾಗೆ ಕಂಪನಿಯಲ್ಲಿ ಅವರು 64 ಪ್ರತಿಶತ ಪಾಲನ್ನು ಹೊಂದಿದ್ದಾರೆ.

Also Read: Moonwalk: ಚಂದ್ರಯಾನ 3 ಯಶಸ್ವಿಯಾಗಿದ್ದೇ ತಡ ಈ ಕಂಪನಿಗೆ ಶುಕ್ರದೆಸೆ -ಒಂದೇ ವಾರದಲ್ಲಿ 10000 ಕೋಟಿ ರೂ ಗಳಿಕೆ, ಇನ್ನು ಮುಂದೆಯೂ ಹಬ್ಬವೇ!

ಕೇನ್ಸ್ ಟೆಕ್ನಾಲಜಿ ಇಂಡಿಯಾ ಕಂಪನಿಯು ತನ್ನ $ 137 ಮಿಲಿಯನ್ ವಾರ್ಷಿಕ ಆದಾಯದ ಅರ್ಧಕ್ಕಿಂತ ಹೆಚ್ಚಿನದನ್ನು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿಗಳನ್ನು ತಯಾರಿಸುವ ಮೂಲಕ ಪಡೆಯುತ್ತದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಕಂಪನಿಯು ಎಲೆಕ್ಟ್ರಾನಿಕ್ ಸಿಸ್ಟಮ್‌ಗಳು ಮತ್ತು ವಿನ್ಯಾಸ ಸೇವೆಗಳನ್ನು ಆಟೋಮೋಟಿವ್, ಏರೋಸ್ಪೇಸ್, ​​ವೈದ್ಯಕೀಯ ಮತ್ತು ರಕ್ಷಣಾ ಉದ್ಯಮಗಳಿಗೆ ಪೂರೈಸುತ್ತದೆ ಮತ್ತು ಕೇನ್ಸ್ ಉತ್ಪನ್ನಗಳನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ ಎಲೆಕ್ಟ್ರಾನಿಕ್ ನಿಯಂತ್ರಣಗಳಲ್ಲಿ ವೆಂಟಿಲೇಟರ್‌ಗಳು ಮತ್ತು ರೈಲ್ವೆ ಸಿಗ್ನಲ್‌ಗಳಿಗೆ ಬಳಸಲಾಗುತ್ತದೆ.

‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮ ಫಲ

ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಪದವೀಧರರಾದ ರಮೇಶ್ ಅವರು 1988 ರಲ್ಲಿ ಎಲೆಕ್ಟ್ರಾನಿಕ್ಸ್‌ ಗುತ್ತಿಗೆ ತಯಾರಕರಾಗಿ ಕೇನ್ಸ್ ಕಂಪನಿಯನ್ನು ಸ್ಥಾಪಿಸಿದರು. ಫೋರ್ಬ್ಸ್‌ನ ವರದಿಯ ಪ್ರಕಾರ, ಅವರ ಪತ್ನಿ ಸವಿತಾ ರಮೇಶ್ 1996 ರಲ್ಲಿ ಕಂಪನಿಯ ಪಾಲುದಾರರಾಗಿ ಸೇರಿಕೊಂಡರು. ಈಗ ಅವರು ಕಂಪನಿಯ ಅಧ್ಯಕ್ಷರಾಗಿದ್ದಾರೆ. ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಕೇಂದ್ರದ “ಮೇಕ್ ಇನ್ ಇಂಡಿಯಾ” ಕಾರ್ಯಕ್ರಮದಿಂದ ಕೇನ್ಸ್ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಪ್ರಯೋಜನ ಪಡೆದಿದೆ. ಕೇನ್ಸ್ ತನ್ನ ಆದಾಯವನ್ನು ಮಾರ್ಚ್ 2024 ಕ್ಕೆ ಕೊನೆಗೊಳ್ಳುವ ಹಣಕಾಸಿನ ವರ್ಷದಲ್ಲಿ ಸುಮಾರು $ 208 ಮಿಲಿಯನ್ ತಲುಪಬಹುದು ಎಂಬ ನಿರೀಕ್ಷೆ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Fri, 24 November 23