Moonwalk: ಚಂದ್ರಯಾನ 3 ಯಶಸ್ವಿಯಾಗಿದ್ದೇ ತಡ ಈ ಕಂಪನಿಗೆ ಶುಕ್ರದೆಸೆ -ಒಂದೇ ವಾರದಲ್ಲಿ 10000 ಕೋಟಿ ರೂ ಗಳಿಕೆ, ಇನ್ನು ಮುಂದೆಯೂ ಹಬ್ಬವೇ!

ಚಂದ್ರಯಾನ್ 3 ಯಶಸ್ವಿಯಾದ ದಿನ ಈ ಕಂಪನಿಯ ಷೇರು 107 ರೂ.ಗೆ ಇಳಿದಿದ್ದವು. ನಂತರ ಕಂಪನಿ ಷೇರುಗಳಲ್ಲಿ ಏರಿಕೆ ಕಂಡುಬಂದು ರೂ.136 ಕ್ಕೆ ಮುಕ್ತಾಯವಾಗಿದೆ. ಅಂದರೆ ಇಂದಿನವರೆಗೆ ಕಂಪನಿಯ ಷೇರು ಶೇ. 26 ರಷ್ಟು ಏರಿಕೆ ಕಂಡಿದೆ. ಷೇರು ತಜ್ಞರನ್ನು ನಂಬುವುದಾದರೆ, ಮುಂದಿನ ದಿನಗಳಲ್ಲಿ ಈ ಕಂಪನಿಯ ಷೇರುಗಳು ಮತ್ತಷ್ಟು ಏರಿಕೆಯಾಗಬಹುದು.

Moonwalk: ಚಂದ್ರಯಾನ 3 ಯಶಸ್ವಿಯಾಗಿದ್ದೇ ತಡ ಈ ಕಂಪನಿಗೆ ಶುಕ್ರದೆಸೆ -ಒಂದೇ ವಾರದಲ್ಲಿ 10000 ಕೋಟಿ ರೂ ಗಳಿಕೆ, ಇನ್ನು ಮುಂದೆಯೂ ಹಬ್ಬವೇ!
ಚಂದ್ರಯಾನ 3 ಯಶಸ್ವಿಯಾಗಿದ್ದೇ ತಡ ಈ ಕಂಪನಿಗೆ ಶುಕ್ರದೆಸೆ
Follow us
ಸಾಧು ಶ್ರೀನಾಥ್​
|

Updated on: Sep 02, 2023 | 8:36 PM

ಚಂದ್ರಯಾನ 3 ರ ಯಶಸ್ಸಿನ ನಂತರ, ಈ ಮಿಷನ್‌ಗೆ ಸಂಬಂಧಿಸಿದ ಕಂಪನಿಗಳಿಗೆ ಶುಕ್ರದೆಸೆ ಆರಂಭವಾಗಿದೆ. ಅದರಲ್ಲಿ ಪ್ರಮುಖವಾದದ್ದು BHEL. ಇದರ ಷೇರುಗಳು ಒಂದು ವಾರದಲ್ಲಿ ಶೇಕಡಾ 26 ಕ್ಕಿಂತ ಹೆಚ್ಚು ಜಿಗಿದವು. ಸಾವಿರಾರು ಕೋಟಿ ರೂ.ಗಳ ಆರ್ಡರ್ ಪಡೆದಿರುವುದೇ ಇದಕ್ಕೆ ಕಾರಣ. ಆರ್ಡರ್‌ಗಳು ಮತ್ತು ಮೌಲ್ಯಮಾಪನದ ವಿಷಯದಲ್ಲಿ BHEL ಸಾಕಷ್ಟು ಪ್ರಯೋಜನ ಪಡೆದುಕೊಂಡಿದೆ. ಇತ್ತೀಚೆಗೆ ಚಂದ್ರಯಾನ 3 ಮಿಷನ್ ಸಮಯದಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಹೆಸರನ್ನು (Bharat Heavy Electricals Limited) ನಾವು ಬಹಳಷ್ಟು ಕೇಳಿದ್ದೇವೆ. ಈ ಮಿಷನ್ ಯಶಸ್ವಿಯಾಗುವಲ್ಲಿ BHEL ಕೂಡ ಸಾಕಷ್ಟು ಕೊಡುಗೆ ನೀಡಿದೆ. ಈ ಯಶಸ್ವಿ ಕಾರ್ಯಾಚರಣೆಯ ನಂತರ, ಕಂಪನಿಯ ದಿನಗಳು ಬದಲಾಗಿವೆ. ಮಹಾರತ್ನ ಬಿರುದಾಂಕಿತ ಈ ಸರ್ಕಾರಿ ಕಂಪನಿಯ ಷೇರುಗಳು ವಾರದಲ್ಲಿ ಶೇ. 26ಕ್ಕೂ ಹೆಚ್ಚು ಏರಿಕೆ ಕಂಡಿವೆ. ಅಚ್ಚರಿಯ ಸಂಗತಿ ಎಂದರೆ ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 10 ಸಾವಿರ ಕೋಟಿ ರೂಪಾಯಿಯಷ್ಟು ಆಗಿದೆ. ತಜ್ಞರ ಪ್ರಕಾರ, ಚಂದ್ರಯಾನ 3 ರ ಯಶಸ್ಸಿನ ನಂತರ, ಕಂಪನಿಯು ದೊಡ್ಡ ದೊಡ್ಡ ಆರ್ಡರ್​​​ಗಳನ್ನು ಪಡೆಯಲು ಪ್ರಾರಂಭಿಸಿದೆ. ಅದರ ಪರಿಣಾಮವು ಕಂಪನಿಯ ಷೇರುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

BHEL ಕಂಪನಿಯ ಷೇರುಗಳು ಇಂದು ಶೇಕಡಾ 12 ರಷ್ಟು ಹೆಚ್ಚಾಗಿದೆ

ವಾರದ ಕೊನೆಯ ವಹಿವಾಟಿನ ದಿನದ ಬಗ್ಗೆ ಮಾತನಾಡುವುದಾದರೆ, ಕಂಪನಿಯ ಷೇರುಗಳಲ್ಲಿ ಶೇ.12.20ರಷ್ಟು ಏರಿಕೆ ಕಂಡುಬಂದಿದೆ. ಕಂಪನಿಯ ಷೇರುಗಳು ರೂ.14.80 ಏರಿಕೆಯೊಂದಿಗೆ ರೂ.136.10 ರಲ್ಲಿ ಮುಕ್ತಾಯವಾಯಿತು. ವಹಿವಾಟಿನ ಅವಧಿಯಲ್ಲಿ ಕಂಪನಿಯ ಷೇರುಗಳು ದಾಖಲೆಯ 137 ರೂ.ಗೆ ತಲುಪಿದೆ. ಬಿಎಸ್‌ಇ ಅಂಕಿಅಂಶಗಳ ಪ್ರಕಾರ ಶುಕ್ರವಾರ ಕಂಪನಿಯ ಷೇರುಗಳು ರೂ.122.25 ರಿಂದ ಪ್ರಾರಂಭವಾಯಿತು ಮತ್ತು ಮುಕ್ತಾಯದ ಬೆಲೆ ರೂ.12.20 ಹೆಚ್ಚಳದೊಂದಿಗೆ ರೂ.136.10 ಕ್ಕೆ ಕೊನೆಗೊಂಡಿತು.

BHEL ಕಂಪನಿಯ ಷೇರುಗಳು ಒಂದು ವಾರದಲ್ಲಿ ಶೇಕಡಾ 26 ಕ್ಕಿಂತ ಹೆಚ್ಚು ಹೆಚ್ಚಳ

ಬಿಎಸ್‌ಇ ಅಂಕಿಅಂಶಗಳ ಪ್ರಕಾರ, ಚಂದ್ರಯಾನ್ 3 ಯಶಸ್ವಿಯಾದ ದಿನ ಕಂಪನಿಯ ಷೇರುಗಳು 107.60 ರೂ.ಗೆ ಇಳಿದುಬಿಟ್ಟಿದ್ದವು. ನಂತರ ಕಂಪನಿಯ ಷೇರುಗಳಲ್ಲಿ ಏರಿಕೆ ಕಂಡುಬಂದಿತು ಮತ್ತು ಕಂಪನಿಯ ಷೇರುಗಳು ರೂ.136.10 ಕ್ಕೆ ಮುಕ್ತಾಯವಾಯಿತು. ಅಂದರೆ ಅಂದಿನಿಂದ ಇಂದಿನವರೆಗೆ ಕಂಪನಿಯ ಷೇರುಗಳು ಶೇ. 26.50ರಷ್ಟು ಏರಿಕೆ ಕಂಡಿವೆ. ಷೇರು ತಜ್ಞರನ್ನು ನಂಬುವುದಾದರೆ, ಮುಂದಿನ ದಿನಗಳಲ್ಲಿ ಕಂಪನಿಯ ಷೇರುಗಳು ಮತ್ತಷ್ಟು ಏರಿಕೆಯಾಗಬಹುದು. ಮುಂದಿನ ದಿನಗಳಲ್ಲಿ ಕಂಪನಿಯ ಷೇರುಗಳು ರೂ.150 ದಾಟಬಹುದು.

BHEL ಕಂಪನಿಯ ಷೇರು ಲಾಭ ಗಳಿಕೆ 10 ಸಾವಿರ ಕೋಟಿ

ಬಿಎಸ್‌ಇ ಅಂಕಿಅಂಶಗಳ ಪ್ರಕಾರ ಆಗಸ್ಟ್ 24 ರಿಂದ ಚೇರು ಮಾರುಕಟ್ಟೆಯಲ್ಲಿ ಕಂಪನಿಯು ಸುಮಾರು 10 ಸಾವಿರ ಕೋಟಿ ರೂ. ಲಾಭ ಹೊಂದಿದೆ. ಆಗಸ್ಟ್ 24 ರಂದು ಷೇರು ಮಾರುಕಟ್ಟೆಯ ದಿನದ ವಹಿವಾಟು ಮುಕ್ತಾಯದ ನಂತರ, ಕಂಪನಿಯ ಮಾರುಕಟ್ಟೆ ಮೌಲ್ಯವು 37,466.99 ಕೋಟಿ ರೂಪಾಯಿಗಳಾಗಿದ್ದು, ಸೆಪ್ಟೆಂಬರ್​​ 1 ರಂದು 47,390.88 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಅಂದರೆ ಕಂಪನಿಯ ಮಾರುಕಟ್ಟೆ ಮೌಲ್ಯ 9,923.89 ರೂ.ಗಳಷ್ಟು ಹೆಚ್ಚಾಗಿದೆ. ತಜ್ಞರ ಪ್ರಕಾರ ಮುಂದಿನ ದಿನಗಳಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ 50 ಸಾವಿರ ಕೋಟಿ ರೂ. ದಾಟಲಿದೆ.

BHEL ಕಂಪನಿಯ ಷೇರುಗಳು ಏಕೆ ಹೆಚ್ಚಿವೆ?

ವಾಸ್ತವವಾಗಿ, ಬಿಎಚ್‌ಇಎಲ್‌ ಕಂಪನಿಯ ಷೇರುಗಳ ಏರಿಕೆಗೆ ದೊಡ್ಡ ಕಾರಣವೆಂದರೆ ಈ ವಾರ ಎನ್‌ಟಿಪಿಸಿಯಿಂದ ಬಿಎಚ್‌ಇಎಲ್‌ ಕಂಪನಿಗೆ 4,000 ಕೋಟಿ ರೂ. ಆರ್ಡರ್​​ ಬಂದಿದೆ. ಮಾಹಿತಿಯ ಪ್ರಕಾರ, ಮುಂದಿನ ನಾಲ್ಕು-ಐದು ವರ್ಷಗಳಲ್ಲಿ ನುವಾಮಾ ಇನ್‌ಸ್ಟಿಟ್ಯೂಶನಲ್ ಇಕ್ವಿಟೀಸ್ 30 GW ನ ತಾಜಾ ಥರ್ಮಲ್ ಆರ್ಡರ್‌ಗಳನ್ನು ನೀಡುವ ನಿರೀಕ್ಷೆಯಿದೆ ಮತ್ತು BHEL ಆ ಆದೇಶಗಳಲ್ಲಿ 50 ಪ್ರತಿಶತವನ್ನು ಪಡೆಯಬಹುದು ಎಂದು ಅಂದಾಜಿಸಲಾಗಿದೆ. NTPC ಯ ಲಾರಾ ಹಂತ-II (2 x 800 MW) ಸೂಪರ್‌ಕ್ರಿಟಿಕಲ್ ಥರ್ಮಲ್ ಯೋಜನೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ BHEL ಗೆ 34 ಸಾವಿರ ಕೋಟಿ ಮೌಲ್ಯದ ಆರ್ಡರ್‌ಗಳನ್ನು ನೀಡಬಹುದು ಎಂದೂ ಹೇಳಲಾಗುತ್ತಿದೆ.