ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ಉದಯ್ ಕೋಟಕ್ ರಾಜೀನಾಮೆ

Uday Kotak resigns: ಉದಯ್ ಕೋಟಕ್ ಅವರು ಕೋಟಕ್ ಮಹೀಂದ್ರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೆಪ್ಟೆಂಬರ್ 1ರಿಂದಲೇ ಅವರು ಈ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಬ್ಯಾಂಕ್ ಸೆಪ್ಟೆಂಬರ್ 2 ರಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ. ಕೋಟಕ್ ಅವರು ಬ್ಯಾಂಕ್‌ನ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕರಾಗಿ ಮುಂದುವರಿಯುತ್ತಾರೆ

ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಮತ್ತು ಸಿಇಒ ಸ್ಥಾನಕ್ಕೆ ಉದಯ್ ಕೋಟಕ್ ರಾಜೀನಾಮೆ
ಉದಯ್ ಕೋಟಕ್
Follow us
|

Updated on:Sep 02, 2023 | 4:10 PM

ದೆಹಲಿ ಸೆಪ್ಟೆಂಬರ್ 02:ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank )ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನಕ್ಕೆ ಉದಯ್ ಕೋಟಕ್ (Uday Kotak) ರಾಜೀನಾಮೆ ನೀಡಿದ್ದಾರೆ. ಸೆಪ್ಟೆಂಬರ್ 1ರಿಂದಲೇ ಅವರು ಈ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಬ್ಯಾಂಕ್ ಸೆಪ್ಟೆಂಬರ್ 2 ರಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಗ್ಯೂ, ಕೋಟಕ್ ಅವರು ಬ್ಯಾಂಕ್‌ನ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕರಾಗಿ ಮುಂದುವರಿಯುತ್ತಾರೆ ಎಂದು ಅದು ಹೇಳಿದೆ. ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಉದಯ್ ಕೋಟಕ್ ಅವರ ಅಧಿಕಾರಾವಧಿಯು ಡಿಸೆಂಬರ್ 31, 2023 ರಂದು ಕೊನೆಗೊಳ್ಳುತ್ತದೆ. ಇದೀಗ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ದೀಪಕ್ ಗುಪ್ತಾ ಅವರು ಆರ್‌ಬಿಐ ಮತ್ತು ಬ್ಯಾಂಕ್ ಸದಸ್ಯರ ಅನುಮೋದನೆಗೆ ಒಳಪಟ್ಟು ಡಿಸೆಂಬರ್ 31 ರವರೆಗೆ ಎಂಡಿ ಮತ್ತು ಸಿಇಒ ಅವರ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಎಂದು ಅದು ಹೇಳಿದೆ.

ಕೋಟಕ್ ಅವರ, ಬ್ಯಾಂಕ್‌ನಲ್ಲಿ ಉತ್ತರಾಧಿಕಾರ ಯೋಜನೆಯನ್ನು ಸುಗಮಗೊಳಿಸಲು ತಾನು ಕೆಳಗಿಳಿಯುತ್ತಿದ್ದೇನೆ ಎಂದು ಹೇಳಿದ್ದಾರೆ. ಕೋಟಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಉತ್ತರಾಧಿಕಾರ ನನ್ನ ಮನಸ್ಸಿನಲ್ಲಿರುವ ಮುಖ್ಯ ಸಂಗತಿ. ಏಕೆಂದರೆ ನಮ್ಮ ಅಧ್ಯಕ್ಷರು, ನಾನು ಮತ್ತು ಜಂಟಿ ಎಂಡಿ ಎಲ್ಲರೂ ವರ್ಷಾಂತ್ಯದಲ್ಲಿ ಕೆಳಗಿಳಿಯಬೇಕಾಗಿದೆ. ಈ ನಿರ್ಗಮನಗಳ ಅನುಕ್ರಮದ ಮೂಲಕ ಸುಗಮ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ನಾನು ಈಗ ಈ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇನೆ . ಸಿಇಒ ಆಗಿ ಸ್ವಯಂಪ್ರೇರಣೆಯಿಂದ ಕೆಳಗಿಳಿಯುತ್ತೇನೆ ಕೋಟಕ್ ಹೇಳಿದ್ದಾರೆ.

ಇದಲ್ಲದೆ, ಪ್ರಸ್ತಾವಿತ ಉತ್ತರಾಧಿಕಾರಿಯ ಆರ್‌ಬಿಐ ಅನುಮೋದನೆಗಾಗಿ ಬ್ಯಾಂಕ್ ಕಾಯುತ್ತಿದೆ ಎಂದು ಕೋಟಕ್ ಹೇಳಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ, ತನ್ನ ಬಿಲಿಯನೇರ್ ಸಂಸ್ಥಾಪಕ ಕೋಟಾಕ್ ಅನ್ನು ಬದಲಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಜಾಗತಿಕ ಹುಡುಕಾಟವನ್ನು ನಡೆಸಲು ಮಂಡಳಿಯು ಸಲಹಾ ಸಂಸ್ಥೆ ಎಗಾನ್ ಜೆಹೆಂಡರ್ ಅನ್ನು ತೊಡಗಿಸಿಕೊಂಡಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಕೋಟಕ್ ಅವರು 1985 ರಲ್ಲಿ ಬ್ಯಾಂಕಿಂಗ್ ಅಲ್ಲದ ಹಣಕಾಸು ಸಂಸ್ಥೆಯಾಗಿ ಪ್ರಾರಂಭವಾದಾಗಿನಿಂದ ಬ್ಯಾಂಕನ್ನು ಮುನ್ನಡೆಸುತ್ತಿದ್ದರೆ. ಕೋಟಕ್ ಬ್ಯಾಂಕ್ 2003 ರಲ್ಲಿ ವಾಣಿಜ್ಯ ಸಾಲದಾತವಾಯಿತು , ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಕೋಟಕ್ ಅವರು ಸುಮಾರು $13.4 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಕೊಟಕ್ ಅವರು ಲಾಭದಾಯಕ ಆಸಕ್ತಿ ಹೊಂದಿರುವ ಸಂಬಂಧಿಕರು ಮತ್ತು ಉದ್ಯಮಗಳೊಂದಿಗೆ ಮಾರ್ಚ್ 31, 2023 ರಂತೆ ಬ್ಯಾಂಕಿನ ಈಕ್ವಿಟಿ ಷೇರು ಬಂಡವಾಳದ 25.95 ಪ್ರತಿಶತ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್‌ನ ಪಾವತಿಸಿದ ಷೇರು ಬಂಡವಾಳದ 17.26 ಪ್ರತಿಶತವನ್ನು ಹೊಂದಿದ್ದಾರೆ.

ಸಂಸ್ಥಾಪಕನಾಗಿ ನಾನು ಕೊಟಕ್ ಬ್ರ್ಯಾಂಡ್‌ ಜತೆ ಗಾಢ ಸಂಬಂಧ ಹೊಂದಿದ್ದೇನೆ. ಸಂಸ್ಥೆಗೆ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕರಾಗಿ ಮತ್ತು ಮಹತ್ವದ ಷೇರುದಾರರಾಗಿ ಸೇವೆ ಸಲ್ಲಿಸುವುದನ್ನು ನಾನು ಮುಂದುವರಿಸುತ್ತೇನೆ. ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಅತ್ಯುತ್ತಮ ನಿರ್ವಹಣಾ ತಂಡವನ್ನು ಹೊಂದಿದ್ದೇವೆ. ಸಂಸ್ಥಾಪಕರು ದೂರ ಹೋಗುಬಹುದು, ಆದರೆ ಸಂಸ್ಥೆಯು ಶಾಶ್ವತವಾಗಿ ಪ್ರವರ್ಧಮಾನಕ್ಕೆ ಬರುತ್ತದೆ ಎಂದು ಉದಯ್ ಕೋಟಕ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Aditya L1: ಸೂರ್ಯನತ್ತ ಹಾರಿದ ಆದಿತ್ಯ ಎಲ್​ 1 ನೌಕೆ, ಪೋಟೋಗಳಲ್ಲಿ ನೋಡಿ

ಬಹಳ ಹಿಂದೆ, ಜೆಪಿ ಮೋರ್ಗಾನ್ ಮತ್ತು ಗೋಲ್ಡ್‌ಮನ್ ಸ್ಯಾಚ್‌ಗಳಂತಹ ಹೆಸರುಗಳು ಆರ್ಥಿಕ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸುವುದನ್ನು ನಾನು ನೋಡಿದೆ. ಭಾರತದಲ್ಲಿ ಅಂತಹ ಸಂಸ್ಥೆಯನ್ನು ರಚಿಸುವ ಕನಸು ಕಂಡಿದ್ದೇನೆ. ಈ ಕನಸಿನೊಂದಿಗೆ ನಾನು 38 ವರ್ಷಗಳ ಹಿಂದೆ 300 ಚದರ ಅಡಿಯಲ್ಲಿ 3 ಉದ್ಯೋಗಿಗಳೊಂದಿಗೆ ಮುಂಬೈನ ಫೋರ್ಟ್‌ನಲ್ಲಿರುವ ಕೋಟಕ್ ಮಹೀಂದ್ರಾ ಕಚೇರಿ ಪ್ರಾರಂಭಿಸಿದೆ. ನಾನು ನನ್ನ ಕನಸನ್ನು ಬೆಂಬೆತ್ತಿ ಈ ಸ್ಮರಣೀಯ ಪ್ರಯಾಣದ ಪ್ರತಿಯೊಂದನ್ನು ಹಂತವನ್ನು ಅನುಭವಿಸಿದ್ದೇನೆ.

ವರ್ಷಗಳಲ್ಲಿ, ಕೋಟಕ್ ಮಹೀಂದ್ರಾ ಮಧ್ಯಸ್ಥಗಾರರಿಗೆ ಮೌಲ್ಯವನ್ನು ಸೃಷ್ಟಿಸಿದ್ದು ಒಂದು ಲಕ್ಷಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಒದಗಿಸಿದೆ. 1985 ರಲ್ಲಿ ಬ್ಯಾಂಕಿನಲ್ಲಿ 10,000 ರೂಪಾಯಿಗಳ ಹೂಡಿಕೆಯು ಇಂದು ಸುಮಾರು 300 ಕೋಟಿ ರೂಪಾಯಿಗಳ ಮೌಲ್ಯದ್ದಾಗಿದೆ ಎಂದು ಕೋಟಕ್ ಹೇಳಿದ್ದಾರೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:37 pm, Sat, 2 September 23

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ