Kotak Bank: ಕೆನಡಾ ಪೆನ್ಷನ್ ಫಂಡ್ ಬಂಡವಾಳ ಹಿಂತೆಗೆತ; ಕೋಟಕ್ ಮಹೀಂದ್ರ ಬ್ಯಾಂಕ್​ನ 3.3 ಕೋಟಿ ಷೇರು ಬಿಕರಿ; ಬೆಲೆ ಎಷ್ಟಕ್ಕೆ?

Canada Pension Fund Sells Stake In Kotak: ಬಿಎಸ್​ಇ ಷೇರುಪೇಟೆಯಲ್ಲಿ ಎರಡು ಬ್ಲಾಕ್ ಡೀಲ್​ಗಳಲ್ಲಿ 3.3 ಕೋಟಿ ಷೇರುಗಳು ಮಾರಾಟವಾಗಿವೆ. ಬೆಳಗ್ಗೆ 9:15ಕ್ಕೆ 2.2 ಕೋಟಿ ಷೇರುಗಳು 1,855 ರೂ ಬೆಲೆಗೆ ಮಾರಾಟವಾಗಿವೆ. ಇನ್ನು, 1.09 ಕೋಟಿ ಷೇರುಗಳು 1,864.15 ರೂ ಬೆಲೆಗೆ ಮಾರಾಟ ಕಂಡಿವೆ.

Kotak Bank: ಕೆನಡಾ ಪೆನ್ಷನ್ ಫಂಡ್ ಬಂಡವಾಳ ಹಿಂತೆಗೆತ; ಕೋಟಕ್ ಮಹೀಂದ್ರ ಬ್ಯಾಂಕ್​ನ 3.3 ಕೋಟಿ ಷೇರು ಬಿಕರಿ; ಬೆಲೆ ಎಷ್ಟಕ್ಕೆ?
ಕೋಟಕ್ ಮಹೀಂದ್ರ ಬ್ಯಾಂಕ್
Follow us
|

Updated on:Jun 09, 2023 | 3:17 PM

ಮುಂಬೈ: ಕೆನಡಾ ಪೆನ್ಷನ್ ಫಂಡ್ ಸಂಸ್ಥೆ (Canada Pension Fund) ಕೋಟಕ್ ಮಹೀಂದ್ರ ಬ್ಯಾಂಕ್​ನಲ್ಲಿ ಹೊಂದಿರುವ ತನ್ನ ಕೆಲ ಷೇರುಪಾಲನ್ನು (Stake) ಮಾರಲು ನಿರ್ಧರಿಸಿದ ಬೆನ್ನಲ್ಲೇ ಕೋಟಕ್​ನ ಷೇರು ಶುಕ್ರವಾರ ಶೇ. 2ರಷ್ಟು ಕಡಿಮೆಬೆಲೆಗೆ ಕುಸಿತ ಕಂಡಿದೆ. ಗುರುವಾರ ಸಂಜೆ 1,885 ರೂ ಇದ್ದ ಕೋಟಕ್ ಬ್ಯಾಂಕ್ (Kotak Mahindra Bank) ಷೇರು ಬೆಲೆ ಶುಕ್ರವಾರ ಬೆಳಗ್ಗಿನ ಒಂದು ಹೊತ್ತಿನಲ್ಲಿ 1,845 ರುಪಾಯಿಗೆ ಕುಸಿತ ಕಂಡಿತ್ತು. ಈ ವರದಿ ಬರೆಯುವಾಗ ಕೋಟಕ್ ಷೇರು ಬೆಲೆ 1,865 ರುಪಾಯಿಯಲ್ಲಿತ್ತು. ಕೆನಡಾ ಪೆನ್ಷನ್ ಫಂಡ್ ತನ್ನ ಕೋಟಕ್ ಷೇರುಗಳನ್ನು ಮಾರಲು ಮುಂದಾದ ಬಳಿಕ ಈ ಬೆಲೆ ಇಳಿಕೆಯಾಗಿದೆ. ಕೋಟಕ್ ಬ್ಯಾಂಕ್​ನಲ್ಲಿ ಕೆನಡಾ ಪೆನ್ಷನ್ ಫಂಡ್ 8.63 ಕೋಟಿ ಷೇರುಗಳನ್ನು ಹೊಂದಿದೆ. ಅದರ ಷೇರುಪಾಲು ಶೇ. 4.34ರಷ್ಟಿದೆ. ಇದರಲ್ಲಿ 3.3 ಕೋಟಿ ಷೇರುಗಳನ್ನು 1792-1886 ರೂ ಬೆಲೆಗೆ ಮಾರುವುದಾಗಿ ಕೆನಡಾ ಪೆನ್ಷನ್ ಫಂಡ್ ಹೇಳಿತ್ತು. ಬಿಎಸ್​ಇ ಎಕ್ಸ್​ಚೇಂಜ್ ಡಾಟಾ ಪ್ರಕಾರ ಇಷ್ಟೂ ಷೇರುಗಳು ಮಾರಾಟವಾಗಿವೆ.

ಬಿಎಸ್​ಇ ಷೇರುಪೇಟೆಯಲ್ಲಿ ಎರಡು ಬ್ಲಾಕ್ ಡೀಲ್​ಗಳಲ್ಲಿ 3.3 ಕೋಟಿ ಷೇರುಗಳು ಮಾರಲಾಗಿರುವುದು ತಿಳಿದುಬಂದಿದೆ. ಬೆಳಗ್ಗೆ 9:15ಕ್ಕೆ 2.2 ಕೋಟಿ ಷೇರುಗಳು 1,855 ರೂ ಬೆಲೆಗೆ ಮಾರಾಟವಾಗಿವೆ. ಇನ್ನು, 1.09 ಕೋಟಿ ಷೇರುಗಳು ನಂತರದ ಸಮಯದಲ್ಲಿ 1,864.15 ರೂ ಬೆಲೆಗೆ ಮಾರಾಟ ಕಂಡಿವೆ. ಕೆನಡಾ ಪೆನ್ಷನ್ ಫಂಡ್​ನಿಂದ ಈ ಎರಡು ಬ್ಲಾಕ್ ಡೀಲ್​ಗಳಾಗಿವೆ ಎನ್ನಲಾಗಿದೆ.

ಇದನ್ನೂ ಓದಿHAL: ಷೇರುವಿಭಜನೆ ಅಂತ ಹೇಳಿದ್ದೇ ತಡ ಎಚ್​ಎಎಲ್ ಷೇರಿಗೆ ಭರ್ಜರಿ ಬೇಡಿಕೆ; ಏನಿದು ಷೇರುವಿಭಜನೆ? ಯಾರಿಗೆ ಲಾಭ?

ಒಳ್ಳೆಯ ರೇಟಿಂಗ್ ಹೊಂದಿರುವ ಕೋಟಕ್ ಬ್ಯಾಂಕ್

ಕೋಟಕ್ ಮಹೀಂದ್ರ ಬ್ಯಾಂಕ್​ನಲ್ಲಿ ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು (ಎಫ್​ಪಿಐ) ಬಹಳ ದೊಡ್ಡ ಪಾಲು ಹೊಂದಿದ್ದಾರೆ. ಶೇ. 39.43ರಷ್ಟು ಪಾಲು ಎಫ್​ಪಿಐನವರದ್ದೇ ಆಗಿದೆ. ವಿವಿಧ ಮ್ಯೂಚುವಲ್ ಫಂಡ್​ಗಳು ಶೇ. 10.99ರಷ್ಟು ಪಾಲು ಹೊಂದಿವೆ.

ಕೆಲ ಹಣಕಾಸು ಮತ್ತು ಷೇರು ರೇಟಿಂಗ್ ಸಂಸ್ಥೆಗಳು ಕೋಟಕ್ ಮಹೀಂದ್ರ ಬ್ಯಾಂಕಿನ ಷೇರಿಗೆ ಉತ್ತಮ ರೇಟಿಂಗ್ ನೀಡಿವೆ. ಮುಂದಿನ ಒಂದು ವರ್ಷದಲ್ಲಿ ಈ ಬ್ಯಾಂಕ್​ನ ಷೇರುಬೆಲೆ ಸರಾಸರಿ 2,134 ರೂ ಆಗಬಹುದು ಎಂದು ಭವಿಷ್ಯ ನುಡಿದಿವೆ. ಅಂದರೆ ಈಗ ಕೋಟಕ್ ಬ್ಯಾಂಕ್​ನ ಷೇರುಗಳ ಮೇಲೆ ಹೂಡಿಕೆ ಮಾಡಿದರೆ ಒಂದು ವರ್ಷದಲ್ಲಿ ಶೇ. 13ರಷ್ಟು ಲಾಭ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Fri, 9 June 23

ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ